twitter
    For Quick Alerts
    ALLOW NOTIFICATIONS  
    For Daily Alerts

    'ಪವರ್ ಸ್ಟಾರ್' ಸಿನಿಮಾ ಬದುಕಿಗೆ ಕಾಲಿಟ್ಟು ಇಂದಿಗೆ 41 ವರ್ಷ

    By Bharath Kumar
    |

    ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಅಪ್ಪು, ಕನ್ನಡದ ರಾಜರತ್ನ, ಪುನೀತ್ ರಾಜ್ ಕುಮಾರ್, ಬಣ್ಣದ ಬದುಕಿಗೆ ಕಾಲಿಟ್ಟು ಇಂದಿಗೆ ಸರಿಯಾಗಿ 41 ವರ್ಷ.

    ಎಲ್ಲರಿಗೂ ಗೊತ್ತಿರುವಾಗೆ, ಪುನೀತ್ ರಾಜ್ ಕುಮಾರ್ 'ಅಪ್ಪು' ಆಗುವುದಕ್ಕೂ ಮುಂಚೆ, ಬಾಲನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. 6 ತಿಂಗಳು ಮಗುವಿದ್ದಾಗಲೇ ಪುನೀತ್ ಬಣ್ಣ ಹಚ್ಚಿದ್ದರು.[ಕಡೆಗೂ ಅಭಿಮಾನಿಗಳ ಆಸೆಗೆ 'ತಥಾಸ್ತು' ಎಂದ ಪುನೀತ್ ರಾಜ್ ಕುಮಾರ್.!]

    ಪುನೀತ್ ರಾಜ್ ಕುಮಾರ್ ಸದ್ಯ, ಕನ್ನಡದ ಪವರ್ ಸ್ಟಾರ್ ಆಗಿ, ಬಾಕ್ಸ್ ಆಫೀಸ್ ಕಿಂಗ್ ಆಗಿ, ಯುವಕರ ಪಾಲಿನ ಐಕಾನ್ ಆಗಿ ದೊಡ್ಡ ಸ್ಥಾನದಲ್ಲಿದ್ದಾರೆ. ಈ ಜರ್ನಿಯ ಹಿಂದೆ, ಪುನೀತ್ ಮತ್ತು ಮತ್ತು ಪುನೀತ್ ರಾಜ್ ಕುಮಾರ್ ನಡೆದು ಬಂದ ಹಾದಿ ಸಖತ್ ಇಂಟ್ರಸ್ಟಿಂಗ್ ಆಗಿದೆ. ಮುಂದೆ ಓದಿ....

    ಚೊಚ್ಚಲ ಚಿತ್ರ 'ಪ್ರೇಮದ ಕಾಣಿಕೆ'

    ಚೊಚ್ಚಲ ಚಿತ್ರ 'ಪ್ರೇಮದ ಕಾಣಿಕೆ'

    ಪುನೀತ್ ರಾಜ್ ಕುಮಾರ್ ಹುಟ್ಟಿದ 6 ತಿಂಗಳಲ್ಲಿ ಬಣ್ಣ ಹಚ್ಚಿದ್ದರು. 1976 ರಲ್ಲಿ ತೆರೆಗೆ ಬಂದ ರಾಜ್ ಕುಮಾರ್ ಅವರ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಪುತ್ರನ ಪ್ರವೇಶವಾಯಿತು.[40 ವರ್ಷಗಳ ಬಳಿಕ ದ್ವಾರಕೀಶ್-ಡಾ.ರಾಜ್ ಕುಮಾರ್ ಕುಟುಂಬ ಸಮಾಗಮ]

    ರಾಜ್ ಕುಮಾರ್ ಬೇಡಿಕೆಯಿಂದ ಅಭಿನಯ

    ರಾಜ್ ಕುಮಾರ್ ಬೇಡಿಕೆಯಿಂದ ಅಭಿನಯ

    'ಪ್ರೇಮದ ಕಾಣಿಕೆ' ಚಿತ್ರೀಕರಣ ನಡೆಯುವಾಗ, ಮಗುವಿನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಎಲ್ಲ ಮಕ್ಕಳು ಅಳುತ್ತಿದ್ದರು, ಶೂಟಿಂಗ್ ಮಾಡಲು ಆಗುತ್ತಿರಲಿಲ್ಲ. ಆದ್ದರಿಂದ ಡಾ.ರಾಜ್ ಕುಮಾರ್ ಅವರು, ಅಲ್ಲೇ ಸೆಟ್ ನಲ್ಲಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರ ಬಳಿ ಬಂದು ''ಯಾವ ಮಕ್ಕಳ ಹತ್ರನೂ ಆಕ್ಟ್ ಮಾಡಿಸುವುದಕ್ಕೆ ಆಗುತ್ತಿಲ್ಲ. ಸೋ ನಮ್ಮ ಮಗುನಾ ಆಕ್ಟ್ ಮಾಡಿಸೋಣ'' ಎಂದು ಕರೆದುಕೊಂಡು ಹೋದರಂತೆ.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!]

    ಪುನೀತ್ ಜೊತೆ 'ಸೂಪರ್ ಸ್ಟಾರ್' ಎಂಟ್ರಿ

    ಪುನೀತ್ ಜೊತೆ 'ಸೂಪರ್ ಸ್ಟಾರ್' ಎಂಟ್ರಿ

    ವಿಶೇಷ ಏನಪ್ಪಾ ಅಂದ್ರೆ, 1976 ರಲ್ಲಿ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಅಪ್ಪು ಎಂಟ್ರಿ ಕೊಟ್ಟರೇ, ಅದೇ ವರ್ಷ 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಬೆಳ್ಳಿತೆರೆಗೆ ಪರಿಚಯವಾಗಿದ್ದರು.[ಪರಭಾಷೆ ನಿರ್ದೇಶಕರ ಪ್ರೀತಿಗೆ ಪಾತ್ರರಾದ 'ಪವರ್ ಸ್ಟಾರ್' ಪುನೀತ್]

    ಅತ್ಯುತ್ತಮ ನಟನೆಗಾಗಿ 'ರಾಷ್ಟ್ರ ಪ್ರಶಸ್ತಿ'

    ಅತ್ಯುತ್ತಮ ನಟನೆಗಾಗಿ 'ರಾಷ್ಟ್ರ ಪ್ರಶಸ್ತಿ'

    1985ರಲ್ಲಿ ಬಿಡುಗಡೆಯಾಗಿದ್ದ 'ಬೆಟ್ಟದ ಹೂವು' ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ ಗೆ ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಈ ಚಿತ್ರವನ್ನ ಲಕ್ಷ್ಮಿನಾರಾಯಣ್ ನಿರ್ದೇಶನ ಮಾಡಿದ್ದು, ಪದ್ಮ ವಾಸಂತಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.

    ಕನ್ನಡದಲ್ಲಿ ಬಾಲನಟನಾಗಿ ಮಿಂಚಿದ 'ರಾಜ್ ಪುತ್ರ'

    ಕನ್ನಡದಲ್ಲಿ ಬಾಲನಟನಾಗಿ ಮಿಂಚಿದ 'ರಾಜ್ ಪುತ್ರ'

    ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಸುಮಾರು 14 ಚಿತ್ರಗಳಲ್ಲಿ ನಟಿಸಿದ್ದಾರೆ. 'ಸನಾಧಿ ಅಪ್ಪಣ್ಣ', 'ತಾಯಿಗೆ ತಕ್ಕ ಮಗ', 'ವಸಂತ ಗೀತೆ', 'ಭಾಗ್ಯವಂತ', 'ಹೊಸಬೆಳಕು', 'ಚಲಿಸುವ ಮೋಡಗಳು', 'ಭಕ್ತ ಪ್ರಹ್ಲಾದ', 'ಎರಡು ನಕ್ಷತ್ರಗಳು', 'ಯಾರಿವನು', 'ಬೆಟ್ಟದ ಹೂವು', 'ಶಿವ ಮೆಚ್ಚಿದ ಕಣ್ಣಪ್ಪ', 'ಪರುಶರಾಮ' ಚಿತ್ರಗಳಲ್ಲಿ ಪುನೀತ್ ಅಭಿನಯಿಸಿದ್ದರು

    ಪುನೀತ್ ಮೊದಲ ಹೆಸರು 'ಲೋಹಿತ್'

    ಪುನೀತ್ ಮೊದಲ ಹೆಸರು 'ಲೋಹಿತ್'

    ಅಂದ್ಹಾಗೆ, ಅಭಿಮಾನಿಗಳ ಪವರ್ ಸ್ಟಾರ್ ಪುನೀತ್ ಅವರ ಮೊದಲ ಹೆಸರು ಲೋಹಿತ್. 'ಪರುಶರಾಮ' ಚಿತ್ರದ ವೇಳೆ ಲೋಹಿತ್ ಬದಲು ಪುನೀತ್ ಎಂದು ಮರುನಾಮಕರಣ ಮಾಡಲಾಯಿತು.

    ನಾಯಕನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ 'ಅಪ್ಪು'

    ನಾಯಕನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ 'ಅಪ್ಪು'

    ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪುನೀತ್ ರಾಜ್ ಕುಮಾರ್ 2002 ರಲ್ಲಿ ಚೊಚ್ಚಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಪೂರಿ ಜಗನ್ನಾಥ್ ನಿರ್ದೇಶನದ 'ಅಪ್ಪು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು.

    'ಬಿಂದಾಸ್' 10 ನೇ ಸಿನಿಮಾ

    'ಬಿಂದಾಸ್' 10 ನೇ ಸಿನಿಮಾ

    2008 ರಲ್ಲಿ ಬಿಡುಗಡೆಯಾಗಿದ್ದ 'ಬಿಂದಾಸ್' ಚಿತ್ರ ಪವರ್ ಸ್ಟಾರ್ ನಾಯಕನಾಗಿ ಅಭಿನಯದ 10ನೇ ಚಿತ್ರ. ಡಿ.ರಾಜೇಂದ್ರ ಬಾಬು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಹನ್ಸಿಕಾ ಮೊಟ್ವಾನಿ ಜೋಡಿಯಾಗಿ ಕಾಣಿಸಿಕೊಂಡಿದ್ದರು.

    20 ನೇ ಚಿತ್ರ 'ನಿನ್ನಿಂದಲೇ'

    20 ನೇ ಚಿತ್ರ 'ನಿನ್ನಿಂದಲೇ'

    ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿದ 20 ನೇ ಸಿನಿಮಾ 'ನಿನ್ನಿಂದಲೇ'. ಜಯಂತ್ ಸಿ ಪರಾಂಜೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎರಿಕಾ ಫರ್ನಾಂಡೀಸ್ ನಾಯಕಿಯಾಗಿದ್ದರು.

    25 ನೇ ಚಿತ್ರ 'ದೊಡ್ಮನೆ ಹುಡ್ಗ'

    25 ನೇ ಚಿತ್ರ 'ದೊಡ್ಮನೆ ಹುಡ್ಗ'

    ತಮ್ಮ 41 ವರ್ಷಗಳ ಸಿನಿ ಜರ್ನಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದಾರೆ. ಅವುಗಳಲ್ಲಿ 25 ಸಿನಿಮಾಗಳಿಗೆ ನಾಯಕನಟನಾಗಿ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ 'ದೊಡ್ಮನೆ ಹುಡ್ಗ' ಚಿತ್ರ ಪುನೀತ್ ಅಭಿನಯದ 25ನೇ ಚಿತ್ರ.[ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ 'ದೊಡ್ಮನೆ ಹುಡ್ಗ' ಪುನೀತ್.!]

    ಪುನೀತ್ ಬಣ್ಣದ ಬದುಕಿಗೆ 41 ವರ್ಷ!

    ಪುನೀತ್ ಬಣ್ಣದ ಬದುಕಿಗೆ 41 ವರ್ಷ!

    'ಪ್ರೇಮದ ಕಾಣಿಕೆ' ಚಿತ್ರದಿಂದ ಶುರುವಾದ ಪುನೀತ್ ರಾಜ್ ಕುಮಾರ್ ವೃತ್ತಿ ಬದುಕು, ಯಶಸ್ವಿಯಾಗಿ 41 ವರ್ಷಗಳನ್ನ ಪೂರೈಸಿದೆ. ಕೇವಲ ನಟನೆ ಮಾತ್ರವಲ್ಲದೇ, ಗಾಯಕನಾಗಿಯೂ, ಟಿವಿ ನಿರೂಪಕನಾಗಿಯೂ, ಕಲಾಭಿಮಾನಿಗಳನ್ನ ರಂಜಿಸುತ್ತಾ ಬಂದಿದ್ದಾರೆ. ಈ 41 ವರ್ಷ 100 ವರ್ಷ ಆಗಲಿ ಎನ್ನುವುದು ನಮ್ಮ ಆಶಯವೂ ಕೂಡ ಹೌದು.......[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

    English summary
    Kannada Actor Puneeth Raj Kumar Comletes 41Years in Kannada Industry. Puneeth Raj kumar Debut in 1976 'Premada Kaanike' as Child Artist. Dr.rajkumar lead Role In the Movie
    Wednesday, March 1, 2017, 11:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X