»   » 'ಆಕೆ'ಯ ಥ್ರಿಲ್ಲಿಂಗ್ ಟ್ರೈಲರ್ ನೋಡಿ ಥ್ರಿಲ್ ಆದ ಪವರ್ ಸ್ಟಾರ್

'ಆಕೆ'ಯ ಥ್ರಿಲ್ಲಿಂಗ್ ಟ್ರೈಲರ್ ನೋಡಿ ಥ್ರಿಲ್ ಆದ ಪವರ್ ಸ್ಟಾರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಆಕೆ' ಚಿತ್ರದ್ದೇ ಸುದ್ದಿ, ಚರ್ಚೆ ಎಲ್ಲವೂ. ಕೇವಲ ಟ್ರೈಲರ್ ಮೂಲಕವೇ ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಇನ್ನು ಈ 'ಆಕೆ'ಯ ಟ್ರೈಲರ್ ನೋಡಿ ಪ್ರೇಕ್ಷಕರು ಮಾತ್ರವಲ್ಲ, ಸ್ಯಾಂಡಲ್ ವುಡ್ ನಟ-ನಟಿಯರು ಕೂಡ ಥ್ರಿಲ್ ಆಗಿದ್ದಾರೆ.

ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೋಹಕ ತಾರೆ ರಮ್ಯಾ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಆಕೆ' ಟ್ರೈಲರ್ ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈಗ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ನಟ 'ಆಕೆ' ಟ್ರೈಲರ್ ನೋಡಿ ಥ್ರಿಲ್ ಆಗಿದ್ದಾರೆ.

ಚಿರಂಜೀವಿ 'ಆಕೆ' ಪ್ರೋಮೋ ನೋಡಿ ದಾಸ ದರ್ಶನ್ ಏನಂದ್ರು ನೋಡಿ..!

ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಆಕೆ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರದ ಮೇಕಿಂಗ್ ಹಾಗೂ ಕಲಾವಿದರ ಬಗ್ಗೆ ಭರವಸೆಯ ಮಾತುಗಳನ್ನ ಹೇಳಿದ್ದಾರೆ. ಮುಂದೆ ಓದಿ......

ಥ್ರಿಲ್ಲಿಂಗ್ 'ಆಕೆ'

''ಆಕೆ.....ಹಾರರ್, ಥ್ರಿಲ್ಲಿಂಗ್ ಸಿನಿಮಾ. ಟ್ರೈಲರ್ ನೋಡಿದ್ರೆ ತುಂಬಾ ಖುಷಿ ಆಗ್ತಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ತಾಂತ್ರಿಕತೆ ಹೆಚ್ಚು ಅಭಿವೃದ್ದಿಯಾಗಿದೆ ಎನ್ನುವುದಕ್ಕೆ ಇದೊಂದು ಸಾಕ್ಷಿ'' - ಪುನೀತ್ ರಾಜ್ ಕುಮಾರ್, ನಟ

ಹಾಲಿವುಡ್ ಶೈಲಿಯ ಸಿನಿಮಾ

''ಈ ಸಿನಿಮಾದಲ್ಲಿ ಸಿನಿಮಾಟೋಗ್ರಫಿ ಮಾಡಿರುವುದು 'ಹ್ಯಾರಿ ಪಟರ್' ಎಂಬ ಮಕ್ಕಳ ಚಿತ್ರವನ್ನ ನಿರ್ದೇಶನ ಮಾಡಿರುವ ಹಾಲಿವುಡ್ ತಂತ್ರಜ್ಞ. ಕಲಾ ವಿನ್ಯಾಸ ಮಾಡಿರುವುದು ಕೂಡ ಹಾಲಿವುಡ್ ತಂತ್ರಜ್ಞ. ಒಬ್ಬ ಹಾಲಿವುಡ್ ನಟಿ ಕೂಡ ಇದ್ದಾರೆ''- ಪುನೀತ್ ರಾಜ್ ಕುಮಾರ್, ನಟ

'ಆಕೆ' ಟ್ರೈಲರ್ ನೋಡಿ ಕಾಮೆಂಟ್ ಮಾಡಿದ ನಟಿ ರಮ್ಯಾ

ಹೊಸ ರೀತಿಯ ಸಿನಿಮಾ ನೋಡಬಹುದು

''ಈ ಟ್ರೈಲರ್ ನೋಡಿದ್ರೆ, ಹೊಸತನ, ಹಾರರ್ ಥ್ರಿಲ್ ಇರುವಂತಹ ಒಂದು ಚಿತ್ರವನ್ನ ನೋಡಬಹುದು ಅಂತ ನನಗೆ ಅನ್ಸುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಗೆಳೆಯ ಚಿರು ಸರ್ಜಾ, ಶರ್ಮಿಳಾ ಮಾಂಡ್ರೆ, ಅಚ್ಯುತ್ ರಾವ್, ಪ್ರಕಾಶ್ ಬೆಳವಾಡಿ ಕಾಣಿಸಿಕೊಂಡಿದ್ದಾರೆ'' - ಪುನೀತ್ ರಾಜ್ ಕುಮಾರ್, ನಟ

ನಾನು ನೋಡ್ತಿನಿ, ನೀವು ನೋಡಿ

''ಟ್ರೈಲರ್ ನೋಡಿದ ಮೇಲಂತೂ ನಾನು ಸಿನಿಮಾ ನೋಡುವುದಕ್ಕೆ ಕಾಯ್ತಿದ್ದೀನಿ. ಚೈತನ್ಯ, ಚಿರು.......ಆಲ್ ದಿ ಬೆಸ್ಟ್. ಈ ಸಿನಿಮಾ ಸಕ್ಸಸ್ ಫುಲ್ ಆಗಲಿ, ಹಿಟ್ ಆಗಲಿ. ಇದೇ 30 ರಂದು ಸಿನಿಮಾ ಬಿಡುಗಡೆಯಾಗ್ತಿದೆ. ಖಂಡಿತಾ ನಾನು ಈ ಸಿನಿಮಾನ ನೋಡ್ತಿನಿ'' - ಪುನೀತ್ ರಾಜ್ ಕುಮಾರ್, ನಟ

ದರ್ಶನ್ ಆಯ್ತು, ರಮ್ಯಾ ಮುಗೀತು.. ಈಗ ಸುದೀಪ್ ಗೆ 'ಆಕೆ' ಮೇಲೆ ಕಣ್ಣು.!

ಚಿತ್ರ ಬಿಡುಗಡೆ ಯಾವಾಗ?

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆಕೆ' ಮಿಸ್ಟರಿ, ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾಗಿದ್ದು, ಇದೇ ತಿಂಗಳು 30 ರಂದು ತೆರೆಗೆ ಬರಲಿದೆ. ಕೆ.ಎಂ ಚೈತನ್ಯ ಆಕ್ಷನ್ ಕಟ್ ಹೇಳಿದ್ದು, 'ಇರೋಸ್ ಇಂಟರ್ ನ್ಯಾಷನಲ್' ಕೆ.ಎಸ್ ಡ್ರೀಮ್ಸ್ ಹಾಗೂ ನಕ್ಷತ್ರ ಸಂಸ್ಥೆ ಜೊತೆ ಜಂಟಿ ನಿರ್ಮಾಣ ಮಾಡಿದೆ.

'ಆ ದಿನಗಳು' ಚಿತ್ರದ ಮೋಡಿ 'ಆಕೆ'ಯಲ್ಲಿ ಮರುಸೃಷ್ಟಿ: ಕೆ.ಎಂ.ಚೈತನ್ಯ

English summary
Kannada Actor Puneeth Rajkumar appreciate to Kannada Movie 'Aake' trailer. The Movie Directed by KM Chaithanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada