Don't Miss!
- Sports
ಸಾಧು ಸಂತರಿಗೆ ಅನ್ನದಾನ ಮಾಡಿ ಆಶೀರ್ವಾದ ಪಡೆದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
- News
Assembly Election 2023: ಎಎಪಿಯ ಯೋಜನೆಗಳನ್ನೇ ಬಿಜೆಪಿ, ಕಾಂಗ್ರೆಸ್ ಅನುಸರಿಸುತ್ತಿವೆ: ಶಾಸಕಿ ಆರೋಪ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುನೀತ್ ರಾಜ್‌ಕುಮಾರ್‌ಗೆ ಸಿದ್ಧಶ್ರೀ ಗೌರವ: ಭಾವುಕ ಸನ್ನಿವೇಶ
ಪುನೀತ್ ರಾಜ್‌ಕುಮಾರ್ ಅಗಲಿಕೆಯನ್ನು ಅರಗಿಸಿಕೊಳ್ಳಲು ರಾಜ್ಯದ ಜನತೆಗೆ ದಶಕಗಳೇ ಬೇಕೇನೊ. ಪುನೀತ್ ನಿಧನ ಹೊಂದಿ ತಿಂಗಳ ಮೇಲಾದರೂ ಕಣ್ಣೀರು ಇನ್ನೂ ನಿಂತಿಲ್ಲ. ಅವರ ನೆನಪು ಒಂದಿನಿತೂ ಮಾಸಿಲ್ಲ.
ನಿನ್ನೆ (ಡಿಸೆಂಬರ್ 02) ಕಲಬುರ್ಗಿಯ ಜಿಡಗಾ ನವಕಲ್ಯಾಣ ಮಠದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಸಿದ್ಧಶ್ರೀ ಪ್ರಶಸ್ತಿ ನೀಡುವ ಕಾರ್ಯಕ್ರಮ ನೆರೆದಿದ್ದವರನ್ನು ಭಾವೋದ್ವೇಗಕ್ಕೆ ಒಳಪಡಿಸಿತು.
ಬದುಕಿದ್ದಾಗ ಪುನೀತ್ ರಾಜ್‌ಕುಮಾರ್ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಬೇಕಿತ್ತು ಎಂದು ನಿಶ್ಚಯವಾಗಿತ್ತಂತೆ ಆದರೆ ಅವರು ಇಲ್ಲದಿರುವ ಈ ಹೊತ್ತಿನಲ್ಲಿ ಅವರಿಗೆ ಪ್ರಶಸ್ತಿ ನೀಡುವ ಸಂದರ್ಭ ಬಂದಿರುವುದೇ ಆಯೋಜಕರನ್ನು, ಮಠದವರನ್ನು, ಅತಿಥಿಗಳನ್ನು ದುಃಖಕ್ಕೆ ದೂಡಿತ್ತು.
ರಾಜ ಸಿಂಹಾಸನ ಮಾದರಿಯ ಕುರ್ಚಿಯ ಮೇಲೆ ನಗುತ್ತಿರುವ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನಿಟ್ಟು ಅದಕ್ಕೆ ರೇಷಿಮೆ ಶಾಲು ಹೊದಿಸಿ, ಹಾರ ಹಾಕಿ, ಚಿತ್ರದ ಮುಂದೆ ಪ್ರಶಸ್ತಿಯೊಂದನ್ನು ಇಡಲಾಯಿತು. ಆ ಕ್ಷಣದಲ್ಲಂತೂ ಬಹುತೇಕರ ಕಣ್ಣಂಚಲ್ಲಿ ನೀರು.
ಜಿಡಗಾ-ಮುಗಳಖೋಡ-ಕೋಟನೂರು ಮಠಗಳ ಪೀಠಾಧಿಪತಿ ಶ್ರೀ ಷಡಕ್ಷರಿ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡುತ್ತಾ, ''ಪುನೀತ್ ರಾಜ್‌ಕುಮಾರ್ ಬದುಕಿದ್ದಾಗ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಬೇಕೆಂದು ನಿಶ್ಚಯಿಸಿದ್ದೆವು. ಆದರೆ ವಿಧಿ ನಿರ್ಣಯ ಬೇರೆ ಆಗಿತ್ತು. ಮರಣೋತ್ತರವಾಗಿ ಪ್ರಶಸ್ತಿ ಕೊಡುವ ದಿನ ಬರುತ್ತದೆಂದು ಊಹಿಸಿರಲಿಲ್ಲ'' ಎಂದು ಗದ್ಗದಿತರಾದರು.
ಪುನೀತ್ ರಾಜ್‌ಕುಮಾರ್ ಕುಟುಂಬದವರು ಆಗಮಿಸಿ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಅವರು ಬರಲಾಗಲಿಲ್ಲ. ಆದರೆ ಕಾರ್ಯಕ್ರಮವನ್ನು ಆನ್‌ಲೈನ್ ವಿಡಿಯೋ ಮೂಲಕ ರಾಘವೇಂದ್ರ ರಾಜ್‌ಕುಮಾರ್ ವೀಕ್ಷಿಸಿದರು.
ಆನ್‌ಲೈನ್ ವಿಡಿಯೋ ಮೂಲಕವೇ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ನಿಮ್ಮ ಪ್ರೀತಿಯನ್ನು ನಾವು ಎಂದೂ ಮರೆಯುವುದಿಲ್ಲ. ಕೆಲವು ಕಾರಣಗಳಿಂದ ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಲ್ಲ ಹಾಗಾಗಿ ನಾವು ಗುರುಗಳ ಬಳಿ ಕ್ಷಮೆ ಕೇಳುತ್ತೇನೆ. ರಾಜ್‌ಕುಮಾರ್ ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಹೀಗೆಯೇ ಇರಲಿ ಎಂದ ರಾಘವೇಂದ್ರ ರಾಜ್‌ಕುಮಾರ್, ''ಪುನೀತ್ ರಾಜ್‌ಕುಮಾರ್‌ಗೆ ನೀವು ನೀಡಿದ ಗೌರವವನ್ನು ನಿಮ್ಮ ಪಾದಗಳಿಗೇ ಅರ್ಪಿಸುತ್ತೇನೆ'' ಎಂದು ಕೈ ಮುಗಿದರು. ರಾಘಣ್ಣನ ಮಾತುಗಳು ಸಭಿಕರನ್ನು ಇನ್ನಷ್ಟು ಭಾವೋದ್ವೇಗಕ್ಕೆ ಒಳಗು ಮಾಡಿತು.
ಪುನೀತ್ ರಾಜ್‌ಕುಮಾರ್ ನಿಧನರಾದ ಬಳಿಕ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಲಾಗಿದೆ. ಇದರ ಜೊತೆಗೆ ಇನ್ನಷ್ಟು ಪ್ರಶಸ್ತಿಗಳು, ಬಿರುದುಗಳು ಅವರನ್ನು ಸೇರಿಕೊಂಡಿವೆ. ದೇಶ-ವಿದೇಶಗಳ ಚಿತ್ರೋತ್ಸವಗಳಲ್ಲಿ ಪುನೀತ್‌ಗೆ ಗೌರವ ಸಲ್ಲಿಸಲಾಗಿದೆ.