»   » ದಾಖಲೆ ಬೆಲೆಗೆ 'ಚಕ್ರವ್ಯೂಹ' ವಿತರಣಾ ಹಕ್ಕು ಸೇಲ್!

ದಾಖಲೆ ಬೆಲೆಗೆ 'ಚಕ್ರವ್ಯೂಹ' ವಿತರಣಾ ಹಕ್ಕು ಸೇಲ್!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೇ ಹಾಗೆ, ಒಂಥರಾ ಹೈವೋಲ್ಟೇಜ್ ಕರೆಂಟ್ ಇದ್ಹಾಗೆ. ಸೈಲೆಂಟ್ ಆಗಿ ತೆರೆಗೆ ಬಂದು ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸುವ ಪುನೀತ್ ರಾಜ್ ಕುಮಾರ್, ಗಾಂಧಿನಗರದಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ.

ಅಪ್ಪು ಅಭಿನಯದ 25 ನೇ ಸಿನಿಮಾ 'ಚಕ್ರವ್ಯೂಹ' ಅಂತ ನಿಮಗೆ ಗೊತ್ತಿದೆ. ಈ ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿದೆ. ಫೆಬ್ರವರಿ ಹೊತ್ತಿಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.[ಅಪ್ಪು ಸಿನಿಮಾದಲ್ಲಿ ಯಂಗ್ ಟೈಗರ್ ಜೂ.ಎನ್.ಟಿ.ಆರ್.?]

Puneeth Rajkumar starrer 'Chakravyuha' distribution rights for BKT area sold for Rs.5.4 Crore

'ಚಕ್ರವ್ಯೂಹ' ರಿಲೀಸ್ ಆಗುವುದಕ್ಕೆ ಇನ್ನೂ ಬೇಜಾನ್ ಟೈಮ್ ಇರುವಾಗಲೇ ಚಿತ್ರದ ವಿತರಣಾ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ. ಬರೀ BKT ಏರಿಯಾ (ಬೆಂಗಳೂರು, ಕೋಲಾರ ಮತ್ತು ತುಮಕೂರು) ಭಾಗದ ವಿತರಣೆ ಹಕ್ಕು ಬರೋಬ್ಬರಿ 5.4 ಕೋಟಿಗೆ ಸೇಲ್ ಆಗಿದೆ.

ಕೇವಲ ಮೂರು ಭಾಗಗಳಲ್ಲಿ 'ಚಕ್ರವ್ಯೂಹ' ಚಿತ್ರವನ್ನ ವಿತರಣೆ ಮಾಡುವುದಕ್ಕೆ ಇಷ್ಟು ದೊಡ್ಡ ಮೊತ್ತ ಕೊಟ್ಟಿರುವವರು ನಿರ್ಮಾಪಕ ರಮೇಶ್ ಯಾದವ್. ದರ್ಶನ್ ರವರ 'ಬಾಸ್' ಸಿನಿಮಾ ಆದ್ಮೇಲೆ ಸ್ಯಾಂಡಲ್ ವುಡ್ ನಿಂದ ಕೊಂಚ ದೂರ ಉಳಿದಿದ್ದ ರಮೇಶ್ ಯಾದವ್, 'ಚಕ್ರವ್ಯೂಹ' ಸಿನಿಮಾ ವಿತರಣೆ ಮಾಡುವ ಮೂಲಕ ಮರಳಿ ಟ್ರ್ಯಾಕ್ ಗೆ ಬಂದಿದ್ದಾರೆ.[ಪುನೀತ್ ರಾಜ್ ಕುಮಾರ್ ನೋಡಲು ಮುಗಿಬಿದ್ದ ಅಭಿಮಾನಿ ವೃಂದ]

ಅಂದ್ಹಾಗೆ, 'ಚಕ್ರವ್ಯೂಹ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿರುವವರು ರಚಿತಾ ರಾಮ್. ಕಾಲಿವುಡ್ ನಿರ್ದೇಶಕ ಸರವಣನ್ ಚಿತ್ರದ ನಿರ್ದೇಶಕ. (ಏಜೆನ್ಸೀಸ್)

    English summary
    Kannada Actor Puneeth Rajkumar starrer 'Chakravyuha' distribution rights for BKT area is sold for Rs.5.4 Crore. Producer Ramesh Yadav has acquired Distribution Rights of the movie.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada