Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಂಬಾಳೆ ಜೊತೆ 5ನೇ ಚಿತ್ರ: ಯಾವ ಸಂಸ್ಥೆ ಜೊತೆ ಪುನೀತ್ ಹೆಚ್ಚು ಸಿನಿಮಾ ಮಾಡಿದ್ದಾರೆ?
'ಯುವರತ್ನ' ಸಿನಿಮಾ ಬಿಡುಗಡೆಗೂ ಮುಂಚೆಯೇ ಪುನೀತ್ ರಾಜ್ ಕುಮಾರ್ ಜೊತೆ ಇನ್ನೊಂದು ಚಿತ್ರ ಮಾಡುವುದಾಗಿ 'ಹೊಂಬಾಳೆ ಫಿಲಂಸ್' ಘೋಷಿಸಿದ್ದರು. ಆ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡರು.
ಸರ್ಪ್ರೈಸ್ ಎಂಬಂತೆ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಜೊತೆ ಪುನೀತ್ ಹೊಸ ಸಿನಿಮಾ ಪ್ರಕಟಣೆಯಾಯಿತು. ಈ ಚಿತ್ರಕ್ಕೂ ಹೊಂಬಾಳೆ ಸಂಸ್ಥೆ ಬಂಡವಾಳ ಹಾಕುತ್ತಿರುವುದಾಗಿ ತಿಳಿಸಿದೆ. ಹೀಗೆ, ಸತತವಾಗಿ ಹೊಂಬಾಳೆ ಜೊತೆ ಅಪ್ಪು ಸಿನಿಮಾಗಳನ್ನು ಮಾಡ್ತಿದ್ದಾರೆ.
ಹಾಗ್ನೋಡಿದ್ರೆ, ಪಾರ್ವತಮ್ಮ ರಾಜ್ ಕುಮಾರ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ನಾಯಕನಟನಾಗಿ ಜರ್ನಿ ಆರಂಭಿಸಿದ ಅಪ್ಪು ಈ ಸಂಸ್ಥೆ ಬಿಟ್ಟು ಹೊಂಬಾಳೆ ಜೊತೆ ಹೆಚ್ಚು ಒಡನಾಟ ಹೊಂದಿದ್ದಾರೆ. ಹೊಂಬಾಳೆಗೂ ಮುಂಚೆ ಅಪ್ಪು ಪ್ರೀತಿಗೆ ಪಾತ್ರವಾಗಿದ್ದ ನಿರ್ಮಾಣ ಸಂಸ್ಥೆಗಳ ಕಡೆ ಒಂದು ನೋಟ. ಮುಂದೆ ಓದಿ...
'ಲೂಸಿಯಾ'
ನಿರ್ದೇಶಕನ
ಜೊತೆ
ಪುನೀತ್
ಹೊಸ
ಸಿನಿಮಾ:
ನಿರೀಕ್ಷೆ
ಇಮ್ಮಡಿ

ಪೂರ್ಣಿಮಾ ಸಂಸ್ಥೆಯಿಂದ ಅಪ್ಪು ಜರ್ನಿ ಆರಂಭ
ಪಾರ್ವತಮ್ಮ ರಾಜ್ ಕುಮಾರ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ (ವಜ್ರೇಶ್ವರಿ ಕಂಬೈನ್ಸ್) ಅಡಿಯಲ್ಲಿ ಪುನೀತ್ ನಾಯಕನಾಗಿ ನಟಿಸಿದ್ದ ಚೊಚ್ಚಲ ಸಿನಿಮಾ ಅಪ್ಪು ತಯಾರಾಗಿತ್ತು. ಅದಾದ ಬಳಿಕ ಅಭಿ, ಆಕಾಶ್, ಅರಸು, ವಂಶಿ, ಜಾಕಿ, ಹುಡುಗರು, ಅಣ್ಣಾ ಬಾಂಡ್, ಯಾರೇ ಕೂಗಾಡಲಿ ಅಂತಹ ಸಿನಿಮಾಗಳನ್ನು ಈ ಸಂಸ್ಥೆಯಲ್ಲಿ ನಿರ್ಮಾಣ ಆದವು.

ರಾಕ್‌ಲೈನ್ ಸಂಸ್ಥೆಯಲ್ಲಿ ನಾಲ್ಕು ಚಿತ್ರ
ಪೂರ್ಣಿಮಾ ಎಂಟರ್ ಪ್ರೈಸಸ್ ಬಿಟ್ಟರೆ ಇದುವರೆಗೂ ಪುನೀತ್ ರಾಜ್ ಕುಮಾರ್ ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ಹೆಚ್ಚು ಸಿನಿಮಾ ಮಾಡಿದ್ದಾರೆ. ಮೌರ್ಯ, ಅಜಯ್, ಪವರ್ ಹಾಗೂ ನಟಸಾರ್ವಭೌಮ ಸಿನಿಮಾಗಳಿಗೆ ರಾಕ್‌ಲೈನ್ ಬಂಡವಾಳ ಹಾಕಿದ್ದರು.
'ಯುವರತ್ನ'
ನೋಡಿ
ಥ್ರಿಲ್
ಆದ
ರಕ್ಷಿತ್
ಶೆಟ್ಟಿ
ಹೇಳಿದ್ದು
ಒಂದೇ
ಮಾತು

ಜಯಣ್ಣ ಕಂಬೈನ್ಸ್‌ನಲ್ಲಿ ಎರಡು ಸಿನಿಮಾ
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪರಮಾತ್ಮ' ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹಾಕಿದ್ದರು. ಅದಾದ ಬಳಿಕ ಪವನ್ ಒಡೆಯರ್ ನಿರ್ದೇಶನದ 'ರಣ ವಿಕ್ರಮ' ಚಿತ್ರ ಜಯಣ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿತ್ತು.
Recommended Video

ಹೊಂಬಾಳೆ ಜೊತೆ ಐದನೇ ಚಿತ್ರ
2014ರಲ್ಲಿ 'ನಿನ್ನಿಂದಲೇ' ಚಿತ್ರದ ಮೂಲಕ ಹೊಂಬಾಳೆ ಸಂಸ್ಥೆ ಜೊತೆ ಕೈ ಜೋಡಿಸಿದ ಪುನೀತ್ ರಾಜ್ ಕುಮಾರ್ ನಂತರ ರಾಜಕುಮಾರ ಹಾಗೂ ಯುವರತ್ನ ಸಿನಿಮಾಗಳಲ್ಲಿ ನಟಿಸಿದರು. ಇದಾದ ಬಳಿಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಒಂದು ಸಿನಿಮಾ ಹಾಗೂ ಪವನ್ ಕುಮಾರ್ ನಿರ್ದೇಶನದಲ್ಲಿ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.