For Quick Alerts
  ALLOW NOTIFICATIONS  
  For Daily Alerts

  'ಲಕ್ಕಿಮ್ಯಾನ್' ಮುಂದೆ ದೇವರ ರೂಪ ತಾಳಿ ಬಂದ ಪುನೀತ್‌ ರಾಜ್‌ಕುಮಾರ್!

  |

  ನಟ ಪುನೀತ್‌ ರಾಜ್‌ಕುಮಾರ್ 'ಜೇಮ್ಸ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅದು ಅವರು ಹೀರೊ ಆಗಿ ಅಭಿಸಿರುವ ಕೊನೆಯ ಚಿತ್ರ. 'ಜೇಮ್ಸ್' ಜೊತೆಗೆ ಪುನೀತ್‌ ರಾಜ್‌ಕುಮಾರ್ ಡಾರ್ಲಿಂಗ್ ಕೃಷ್ಣ ಹೀರೊ ಆಗಿರುವ 'ಲಕ್ಕಿ ಮ್ಯಾನ್' ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

  ಈಗಾಗಲೇ 'ಲಕ್ಕಿ ಮ್ಯಾನ್' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿಯೂ ಅಪ್ಪು ಗಮನ ಸೆಳೆದಿದ್ದಾರೆ. ಈ ಪೋಸ್ಟರ್ ಬಳಿಕ ಈಗ ಅಪ್ಪು ಟೀಸರ್‌ನಲ್ಲಿ ಕೂಡ ರಿಲೀಸ್ ಆಗಿದೆ.

  ಈ ವರ್ಷ ಗಣೇಶನ ಜೊತೆ ಬರ್ತಾರೆ ಅಪ್ಪು; 'ದೇವರಿಗೆ ಕರುಣೆ ಇಲ್ಲ' ಎಂದ ಅಭಿಮಾನಿಗಳು!ಈ ವರ್ಷ ಗಣೇಶನ ಜೊತೆ ಬರ್ತಾರೆ ಅಪ್ಪು; 'ದೇವರಿಗೆ ಕರುಣೆ ಇಲ್ಲ' ಎಂದ ಅಭಿಮಾನಿಗಳು!

  ಕೆಲವು ದಿನಗಳ ಮುಂದೆ ಅಪ್ಪು ಪಾತ್ರದ ಬಗ್ಗೆ ಹೇಳುವ ಪೋಸ್ಟರ್ ರಿಲೀಸ್ ಆಗಿತ್ತು. ಹೊಸ ವರ್ಷದ ಪ್ರಯುಕ್ತ ಚಿತ್ರ ತಂಡ ಪೋಸ್ಟರ್ ಹಂಚಿಕೊಂಡಿತ್ತು. ಈಗ ಟೀಸರ್ ರಿಲೀಸ್‌ನಲ್ಲಿ ಅಪ್ಪು ಪಾತ್ರದ ಜೊತೆಗೆ, ಸಿನಿಮಾದ ಕಥೆಯ ಬಗ್ಗೆಯೂ ಸುಳಿವು ಬಿಟ್ಟು ಕೊಡಲಾಗಿದೆ.

  'ಲಕ್ಕಿ ಮ್ಯಾನ್‌'ಗಾಗಿ ಅಪ್ಪು ದೇವರ ರೂಪ!

  'ಲಕ್ಕಿ ಮ್ಯಾನ್‌'ಗಾಗಿ ಅಪ್ಪು ದೇವರ ರೂಪ!

  'ಲಕ್ಕಿ ಮ್ಯಾನ್' ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರ ತಮಿಳಿನ 'ಒ ಮೈ ಕಡವಳೆ' ಚಿತ್ರದ ರಿಮೇಕ್. ಹಾಗಾಗಿ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪು ನಾಯಕ ನಟನಿಗೆ ಸರಿಯಾದ ದಾರಿ ತೋರಿಸುವ 'ದೇವರ' ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಬಳಿಕ ಚೇತನ್ ಮುಂದಿನ ಸಿನಿಮಾ ಯಾವುದು?ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಬಳಿಕ ಚೇತನ್ ಮುಂದಿನ ಸಿನಿಮಾ ಯಾವುದು?

  ದೇವರಾಗಿ ಬಂದ ಪುನೀತ್!

  ಸದ್ಯ 'ಲಕ್ಕಿ ಮ್ಯಾನ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ಗಾಗಿ ಪ್ರೇಕ್ಷಕಕರು ಹೆಚ್ಚು ಕಾತರದಿಂದ ಕಾಯುತ್ತಿದ್ದರು. ಇದಕ್ಕೆ ಕಾರಣ ನಟ ಪುನೀತ್ ರಾಜ್‌ಕುಮಾರ್. 'ಲಕ್ಕಿ ಮ್ಯಾನ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಟೀಸರ್‌ನಲ್ಲಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಇತ್ತು. ಈಗ ಅಪ್ಪು ದೇವರ ರೂಪದಲ್ಲಿ ದರ್ಶನ ಕೊಟ್ಟಿದ್ದಾರೆ.

  ಟೀಸರ್‌ನಲ್ಲಿ ಅಪ್ಪು ಧ್ವನಿ!

  "ನಿನ್ನ ಲೈಫ್‌ನಲ್ಲಿ ಆಗಿರುವ ಮಿಸ್ಟೇಕ್‌ಗಳನ್ನು ಸರಿ ಮಾಡಿಕೊಳ್ಳಲು ನಿನಗೆ ಸೆಕೆಂಡ್ ಚಾನ್ಸ್ ಕೊಡ್ತೀನಿ" ಎನ್ನುವ ಒಂದೇ ಒಂದು ಡೈಲಾಗ್‌ ಟೀಸರ್‌ನಲ್ಲಿ ಅನಾವರಣ ಗೊಂಡಿದೆ. ಖುಷಿಯ ವಿಚಾರ ಅಂದರೆ, ಇದು ಅಪ್ಪು ಅವರ ಧ್ವನಿಯೇ. ಮತ್ತೆ ಪುನೀತ್ ರಾಜ್‌ಕುಮಾರ್ ಅವರನ್ನು ಹೀಗೆ ತೆರೆಯ ಮೇಲೆ ನೋಡುದೇ ಒಂದು ಭಾಗ್ಯ ಎನ್ನುವ ಅನಿಸಿಕೆಗಳು ವ್ಯಕ್ತವಾಗಿದೆ. ಎಲ್ಲರೂ ಅಪ್ಪು ಅವರನ್ನು ದೇವರು ಅಂತಿದ್ರು, ದೇವರ ಪಾತ್ರದಲ್ಲೂ ನಟಿಸಿದ ಸಾರ್ಥಕತೆ ಅವರದ್ದು.

  ಸ್ಟೈಲಿಶ್ ಅವತಾರದಲ್ಲಿ ಅಪ್ಪು!

  ಸ್ಟೈಲಿಶ್ ಅವತಾರದಲ್ಲಿ ಅಪ್ಪು!

  ನಟ ಪುನೀತ್ ರಾಜ್‌ಕುಮಾರ್ ತಮ್ಮದೇ ಆದ ವಿಭಿನ್ನ ಸ್ಟೈಲ್ ಕ್ಯಾರಿ ಮಾಡುತ್ತಾರೆ. ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕಂತೆ ನಟಿಸಿದರೂ, ಅವರ ಸ್ಟೈಲ್ ಮಾತ್ರ ಸದಾ ಹಾಗೆ ಇರುತ್ತಿತ್ತು. ಈಗ 'ಲಕ್ಕಿ ಮ್ಯಾನ್' ಚಿತ್ರದಲ್ಲೂ ನಟ ಪುನೀತ್ ರಾಜ್‌ಕುಮಾರ್ ದೇವರ ಪಾತ್ರ ಮಾಡಿದ್ದಾರೆ. ಆದರೆ ಇವರ ಸ್ಟೈಲಿಶ್ ಗಾಢ್. ಫಾರ್ಮಲ್ಸ್ ತೊಟ್ಟು ಸ್ಟೈಲಿಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಾಡಿನಲ್ಲಿ ಹಲವು ಸ್ಟೈಲಿಶ್ ಕಾಸ್ಟೂಮ್‌ಗಳನ್ನು ಧರಿಸಿದ್ದಾರೆ.

  ಪ್ರಭುದೇವ ಜೊತೆಗೆ ಅಪ್ಪು ಡಾನ್ಸ್!

  ಪ್ರಭುದೇವ ಜೊತೆಗೆ ಅಪ್ಪು ಡಾನ್ಸ್!

  ವಿಶೇಷವಾಗಿ ಪುನೀತ್ ರಾಜ್​ಕುಮಾರ್ ಹಾಗೂ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಜೋಡಿಯ ಡ್ಯಾನ್ಸಿಂಗ್ ಝಲಕ್ ಕೂಡ ಟೀಸರ್‌ನಲ್ಲಿ ಬಹಿರಂಗಗೊಂಡಿದೆ. ಪುನೀತ್ ರಾಜ್‌ಕುಮಾರ್ ಕೂಡ ಡ್ಯಾನ್ಸ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್. ಹಾಗಾಗಿ ಈ ಹಾಡನ್ನು ನೋಡಲು ಅಭಿಮಾನಿ ಬಳಗ ಕಾದಿದೆ. ಇನ್ನು ಟೀಸರ್ ಆರಂಭದಲ್ಲಿ ಪ್ರಭುದೇವ ಕೂಡ ಒಂದು ಡೈಲಾಗ್ ಹೇಳಿದ ಬಳಿಕ ಹೆಜ್ಜೆ ಹಾಕುತ್ತಾರೆ.

  ಡಾರ್ಲಿಂಗ್ ಕೃಷ್ಣ ಹೀರೊ!

  ಡಾರ್ಲಿಂಗ್ ಕೃಷ್ಣ ಹೀರೊ!

  ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಹೀರೊ ಆಗಿದ್ದರೂ ಕೂಡ ಪುನೀತ್ ರಾಜ್​ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. 'ಲಕ್ಕಿ ಮ್ಯಾನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್, ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  Recommended Video

  ನಿರೂಪ್ ಬಂಡಾರಿ ನೀತ ಅಶೋಕ್ ಪ್ರಕಾರ ವಿಕ್ರಾಂತ್ ರೋಣ ಹಾಗು ಫ್ಯಾಂಟಮ್‌ಗೆ ಸಂಭಂದಾನೇ ಇಲ್ಲ | Filmibeat Kannada
  English summary
  Puneeth Rajkumar, Darling Krishna Starrer Lucky Man Teaser Released, Know More.
  Monday, July 25, 2022, 14:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X