For Quick Alerts
  ALLOW NOTIFICATIONS  
  For Daily Alerts

  ಕೇರಳ ಪ್ರವಾಹ ಪೀಡಿತರ ನೆರವಿಗೆ ನಿಂತ ಪುನೀತ್, ಕಮಲ್, ವಿಜಯ್

  By Bharath Kumar
  |
  ಕೇರಳ ಪ್ರವಾಹ ಪೀಡಿತರ ನೆರವಿಗೆ ನಿಂತ ಪುನೀತ್, ಕಮಲ್, ವಿಜಯ್..! | Oneindia Kannada

  ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನರ ಜೀವನ, ಸಂಪರ್ಕ ಅಸ್ತವ್ಯಸ್ತವಾಗಿದೆ. ಇದಕ್ಕಿಂತ ಘೋರ ಮಳೆಗೆ ಬಲಿಯಾಗಿರುವುದು ನೆರೆರಾಜ್ಯ ಕೇರಳ.

  ಹೌದು, ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯ ಪ್ರವಾಹಕ್ಕೆ ಸಿಲುಕಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ದೇವರನಾಡ ರಕ್ಷಣೆಗೆ ರಾಷ್ಟ್ರದ ಹಲವು ರಾಜ್ಯಗಳು ನೆರವಿಗೆ ಧಾವಿಸಿದ್ದು, ಸಿಎಂ ಫಂಡ್ ಗೆ ಸಹಾಯ ಮಾಡ್ತಿದ್ದಾರೆ.

  ಮಲಯಾಳ ಇಂಡಸ್ಟ್ರಿಯ ಸಿನಿತಾರೆಯರ ಜೊತೆಯಲ್ಲಿ ತಮಿಳು, ತೆಲುಗು ಹಾಗೂ ನಮ್ಮ ಕನ್ನಡ ಕಲಾವಿದರು ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಕಮಲ್ ಹಾಸನ್, ಸೂರ್ಯ, ವಿಜಯ್ ದೇವರಕೊಂಡು ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಧನ ಸಹಾಯ ಮಾಡಿದ್ದಾರೆ. ಹಾಗಿದ್ರೆ, ಯಾರು ಎಷ್ಟು ಕೊಟ್ಟಿದ್ದಾರೆ ಎಂದು ನೋಡೋಣ. ಮುಂದೆ ಓದಿ.....

  5 ಲಕ್ಷ ಕೊಟ್ಟ ಪುನೀತ್

  5 ಲಕ್ಷ ಕೊಟ್ಟ ಪುನೀತ್

  ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇರಳ ಪ್ರವಾಹ ಪೀಡಿತರ ನೆರವಿಗೆ ನಿಂತಿದ್ದು, 5 ಲಕ್ಷ ರೂಪಾಯಿ ಹಣವನ್ನ ಸಿಎಂ ನಿಧಿಗೆ ನೀಡಿದ್ದಾರೆ ಎಂದು ಪುನೀತ್ ಆಪ್ತರು ತಿಳಿಸಿದ್ದಾರೆ.

  5 ಲಕ್ಷ ಕೊಟ್ಟ ವಿಜಯ್ ದೇವರಕೊಂಡ

  5 ಲಕ್ಷ ಕೊಟ್ಟ ವಿಜಯ್ ದೇವರಕೊಂಡ

  ತೆಲುಗು ರೈಸಿಂಗ್ ಸ್ಟಾರ್ ವಿಜಯ್ ದೇವರಕೊಂಡ ಅವರು ಕೂಡ ಕೇರಳ ಜನರ ನೆರವಿಗೆ ಬಂದಿದ್ದು, 5 ಲಕ್ಷ ಹಣವನ್ನ ಪ್ರವಾಹ ಪೀಡಿತರ ನಿಧಿಗೆ ನೀಡಿದ್ದಾರೆ. ''ಕೇರಳ ನನಗೆ ಇಷ್ಟವಾದ ಜಾಗ, ಈಗ ಅಲ್ಲಿನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಆದಷ್ಟೂ ಬೇಗ ಮೊದಲಿನಿ ಸ್ಥಿತಿಗೆ ಬರಲಿ'' ಎಂದು ವಿಜಯ್ ದೇವರಕೊಂಡ ಕೇಳಿಕೊಂಡಿದ್ದಾರೆ.

  25 ಲಕ್ಷ ನೀಡಿದ ಕಮಲ್ ಹಾಸನ್

  25 ಲಕ್ಷ ನೀಡಿದ ಕಮಲ್ ಹಾಸನ್

  ಭಾರತದ ಸೂಪರ್ ಸ್ಟಾರ್ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೇರಳದ ಸಿಎಂ ನಿಧಿಗೆ 25 ಲಕ್ಷ ನೀಡಿ ನೆರವಾಗಿದ್ದಾರೆ. ಜೊತೆಗೆ ಬಿಗ್ ಬಾಸ್ ಪ್ರಸಾರ ಮಾಡುತ್ತಿರುವ ತಮಿಳಿನ ವಿಜಯ ಟಿವಿ ಕೂಡ 25 ಲಕ್ಷ ನೀಡಿ ಗಮನ ಸೆಳೆದಿದೆ.

  ಸೂರ್ಯ-ಕಾರ್ತಿ ಸಹೋದರರು

  ಸೂರ್ಯ-ಕಾರ್ತಿ ಸಹೋದರರು

  ಇನ್ನು ದಕ್ಷಿಣ ಭಾರತದ ಖ್ಯಾತ ನಟರು ಹಾಗೂ ಸಹೋದರರು ಸೂರ್ಯ ಮತ್ತು ಕಾರ್ತಿ ತಲಾ 25 ಲಕ್ಷ ನೀಡಿ ಕೇರಳ ಜನರ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ತಮಿಳು ಕಲಾವಿದರ ಸಂಘ 5 ಲಕ್ಷ ಹಣ ನೀಡಿದೆ.

  ಅಲ್ಲು ಅರ್ಜುನ್ 25 ಲಕ್ಷ

  ಅಲ್ಲು ಅರ್ಜುನ್ 25 ಲಕ್ಷ

  ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕೇರಳದ ಪ್ರವಾಹ ಪೀಡಿತರಿಗಾಗಿ 25 ಲಕ್ಷ ಹಣ ಸಹಾಯ ಮಾಡಿದ್ದಾರೆ. ಇವರಷ್ಟೇ ಅಲ್ಲದೇ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್ ಅಭಿಮಾನಿಗಳ ಸಂಘಗಳು ಕೇರಳ ಜನರ ಬೆಂಬಲಕ್ಕೆ ನಿಂತಿದೆ.

  1 ಲಕ್ಷ ನೀಡಿದ ಅನುಪಮಾ

  1 ಲಕ್ಷ ನೀಡಿದ ಅನುಪಮಾ

  ಇನ್ನು ಸ್ಟಾರ್ ನಟರು ಮಾತ್ರವಲ್ಲದೇ ನಟಿಯರು ಕೂಡ ಕೇರಳ ಜನರ ಸಹಾಯಕ್ಕೆ ನಿಂತಿದ್ದಾರೆ. ಕೇರಳದ ಖ್ಯಾತಿ ನಟಿ ಅನುಪಮಾ ಪರಮೇಶ್ವರನ್ ಅವರು 1 ಲಕ್ಷ ಹಣವನ್ನ ದೇವರನಾಡಿನ ಮಕ್ಕಳಿಗಾಗಿ ನೀಡಿದ್ದಾರೆ.

  ಮಲಯಾಳಂ ನಟರ ನೆರವು

  ಮಲಯಾಳಂ ನಟರ ನೆರವು

  ಕೇರಳ ಚಿತ್ರರಂಗ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತಿದ್ದು, ವೈಯಕ್ತಿಕವಾಗಿ ಹಾಗೂ ಸಂಘಟನೆಗಳ ಪರವಾಗಿ ನೆರವಾಗುತ್ತಿದ್ದಾರೆ. ಮಲಯಾಳಂ ಕಲಾವಿದರ ಸಂಘ 10 ಲಕ್ಷ, ಮೊಮ್ಮಟಿ 15 ಲಕ್ಷ, ದುಲ್ಕರ್ ಸಲ್ಮಾನ್ 10 ಲಕ್ಷ, ಮೋಹನ್ ಲಾಲ್ 25 ಲಕ್ಷ ಸೇರಿದಂತೆ ಇನ್ನು ಹಲವರು ಸಿಎಂ ನಿಧಿಗೆ ಹಣ ನೀಡಿದ್ದಾರೆ.

  English summary
  Kerala Flood: Tamil actor Kamal hassan, suriya, karthi, telugu actor vijay devarakonda, kannada actor puneeth rajkumar and actress anupama parameshwaran are contributed to the Kerala CM’s relief fund.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X