For Quick Alerts
  ALLOW NOTIFICATIONS  
  For Daily Alerts

  ಅಯ್ಯಪ್ಪನ ಸನ್ನಿಧಾನದಲ್ಲೂ ಅಪ್ಪು ಧ್ಯಾನ: ಪೋಟೊ ಹಿಡಿದು ಶಬರಿಮಲೆ ಏರಿದ ಅಭಿಮಾನಿ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಅರಗಿಸಿಕೊಳ್ಳದ ಅಭಿಮಾನಿಗಳು ನೋವನ್ನು ಮರೆಯೋಕೆ ಹರಸಾಹಸ ಪಡೆಡುತ್ತಿದ್ದಾರೆ. ತನ್ನ ನೆಚ್ಚಿನ ನಟನನ್ನು ಜೀವಂತವಾಗಿ ಇಡಲು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಪ್ಪು ಮೇಲೆ ತಾವಿಟ್ಟಿದ್ದ ಪ್ರೀತಿಯನ್ನು ತಮ್ಮದೇ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಒಂದಲ್ಲಾ ಒಂದು ರೀತಿ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

  ಪುನೀತ್ ನಿಧನದ ದಿನದಿಂದ ಅಭಿಮಾನಿಗಳು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ನೇತ್ರದಾನ, ರಕ್ತದಾನ ಶಿಬಿರಗಳಿಗಂತೂ ಲೆಕ್ಕವೇ ಇಲ್ಲ. ಇನ್ನೊಂದು ಕಡೆ ಹಳ್ಳಿ ಹಳ್ಳಿಯಲ್ಲೂ ಪುನೀತ್ ರಾಜ್‌ಕುಮಾರ್ ಸ್ಮಾರಕ ಎದ್ದು ನಿಂತಿದೆ. ರಸ್ತೆಗಳಿಗೆ ಅಪ್ಪು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಇಲ್ಲೊಬ್ಬ ಅಪ್ಪು ಅಭಿಮಾನಿ ಅಪ್ಪು ಹಿಡಿದು ಶಬರಿಮಲೆ ಯಾತ್ರೆ ಮಾಡಿದ್ದಾನೆ. ಈ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಇರುಮುಡಿ ಜೊತೆ ಅಪ್ಪು ಫೋಟೊ ಹಿಡಿದು ಅಯ್ಯಪ್ಪನ ದರ್ಶನ

  ಇರುಮುಡಿ ಜೊತೆ ಅಪ್ಪು ಫೋಟೊ ಹಿಡಿದು ಅಯ್ಯಪ್ಪನ ದರ್ಶನ

  ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಅಗಲಿ ಇನ್ನೇನು ಒಂದು ತಿಂಗಳು ಸಮೀಪಿಸುತ್ತಿದೆ. ಅಪ್ಪು ಸಾವಿನ ನೋವಿನಿಂದ ಕಂಗಾಲಾಗಿರುವ ಅಭಿಮಾನಿಗಳು ಇಂದಿಗೂ ಸಮಾಧಿಗೆ ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಕೆಲವೆಡೆ ಅಭಿಮಾನಿಗಳಿಗೇ ಅಪ್ಪು ನೆನಪಿಗಾಗಿ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅಭಿಮಾನಿ ಪುನೀತ್ ಫೋಟೊ ಹಿಡಿದು ಶಬರಿಮಲೆ ಯಾತ್ರೆ ಮಾಡಿದ್ದಾನೆ.

  ಈ ಸಂದರ್ಭದಲ್ಲಿ ಇರುಮುಡಿ ಜೊತೆ ಅಪ್ಪು ಫೋಟೋವನ್ನೂ ಹಿಡಿದು ಶಬರಿಮಲೆಯ ಮೆಟ್ಟಿಲೇರಿ, ಅಯ್ಯಪ್ಪನ ದರ್ಶನ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
  ಅಭಿಮಾನಿ ಅಭಿಮಾನ ಮೆಚ್ಚಿದ ಸಂತೋಷ್ ಆನಂದ್‌ರಾಮ್, ರಿಷಬ್

  ಅಭಿಮಾನಿ ಅಭಿಮಾನ ಮೆಚ್ಚಿದ ಸಂತೋಷ್ ಆನಂದ್‌ರಾಮ್, ರಿಷಬ್

  ಪುನೀತ್ ರಾಜ್‌ಕುಮಾರ್ ಅಭಿಮಾನಿಯ ಅಭಿಮಾನಕ್ಕೆ ನಿರ್ದೇಶಕರು ಮೂಖ ವಿಸ್ಮಿತರಾಗಿದ್ದಾರೆ. ರಾಜಕುಮಾರ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಈ ಅಭಿಮಾನಕ್ಕೆ ಸೋತು ಶರಣಗಾಗಿದ್ದಾರೆ. ಇನ್ನೊಂದೆಡೆ ನಟ ನಿರ್ದೇಶಕ ರಿಷಬ್ ಶೆಟ್ಟಿ ಅಭಿಮಾನಯ ಈ ವಿಡಿಯೋ ಶೇರ್ ಮಾಡಿದ್ದು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದಿದ್ದಾರೆ. ಅಪ್ಪು ಅಗಲಿ ಇಷ್ಟು ದಿನವಾದರೂ ಈಗಲೂ ಅವರು ನಮ್ಮೊಂದಿಗಿದ್ದಾರೆ ಎಂದು ಅಭಿಮಾನಿಗಳು ತೋರಿಸಿಕೊಡುತ್ತಿದ್ದಾರೆ.

  ಶಬರಿಮಲೆ ಯಾತ್ರೆ ಮಾಡಿದ್ದ ಪುನೀತ್

  ಶಬರಿಮಲೆ ಯಾತ್ರೆ ಮಾಡಿದ್ದ ಪುನೀತ್

  ಪುನೀತ್‌ ರಾಜ್‌ಕುಮಾರ್‌ಗೆ ದೇವರ ಮೇಲೆ ಅಪಾರವಾದ ನಂಬಿಕೆ ಇತ್ತು. ಮಂತ್ರಾಲಯದ ರಾಘವೇಂದ್ರ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ತಂದೆಯಂತೆಯೇ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಬಂದಿದ್ದರು. ಶಿವಣ್ಣ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದಾಗ ಅವರೊಂದಿಗೆ ಹಲವು ವರ್ಷ ಪುನೀತ್ ರಾಜ್‌ಕುಮಾರ್ ಅಯ್ಯಪ್ಪನ ದರ್ಶನ ಪಡೆದು ಬಂದಿದ್ದರು.​ ಅಪ್ಪು ದೇವರ ಮೇಲೆ ನಂಬಿಕೆ, ಹಿರಿಯರ ಮೇಲೆ ಇಟ್ಟ ಗೌರವ. ಕಿರಿಯರ ಮೇಲೆ ತೋರಿಸುತ್ತಿದ್ದ ಪ್ರೀತಿ ಕಂಡು ಇಡೀ ಕರ್ನಾಟಕ ಅವರ ಅಗಲಿಕೆಗೆ ಕಣ್ಣೀರು ಹಾಕುತ್ತಿದೆ.

  ಅಪ್ಪು ಕನಸು ನನಸು ಮಾಡುವ ಪ್ರತಿಜ್ಞೆ

  ಅಪ್ಪು ಕನಸು ನನಸು ಮಾಡುವ ಪ್ರತಿಜ್ಞೆ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಡ ಕನಸು ಒಂದೆರಡಲ್ಲ. ಸಿನಿಮಾ ಜೊತೆ ಜೊತೆಗೆ ಅವರ ಅಪಾರ ಕನಸುಗಳನ್ನು ಒಂದೊಂದಾಗೇ ನನಸು ಮಾಡಲು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪುನೀತ್ ಡ್ರೀಮ್ ಪ್ರಾಜೆಕ್ಟ್ ಆಗಿದ್ದ ಗಂಧಗುಡಿ ಡಾಕ್ಯೂಮೆಂಟರಿಯನ್ನು ಅಪ್ಪು ಕನಸಿನಂತೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಎಂದಿನಂತೆ ಪಿಆರ್‌ಕೆ ಕಂಪನಿಯಿಂದ ಸಿನಿಮಾಗಳ ನಿರ್ಮಾಣ ಕೆಲಸ ಕೂಡ ಮುಂದುವರೆಯುವ ಸುಳಿವು ಸಿಕ್ಕಿದೆ.

  English summary
  Kannada actor Puneeth Rajkumar fan took Appu photo with him in sabarimala ayyappa temple video goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X