»   » ದರ್ಶನ್ ಕುರುಕ್ಷೇತ್ರ ಸಿನಿಮಾಗೆ ಪುನೀತ್ ಅಭಿಮಾನಿಗಳು ಫಿದಾ

ದರ್ಶನ್ ಕುರುಕ್ಷೇತ್ರ ಸಿನಿಮಾಗೆ ಪುನೀತ್ ಅಭಿಮಾನಿಗಳು ಫಿದಾ

Posted By:
Subscribe to Filmibeat Kannada

ಕನ್ನಡ ಸಿನಿಮಾ ಪ್ರೇಕ್ಷಕರ ಜೊತೆಯಲ್ಲಿ ಇಡೀ ಚಿತ್ರರಂಗವೇ ಕಾದಿರುವ ಸಿನಿಮಾ ಕುರುಕ್ಷೇತ್ರ. ಈ ಹಿಂದೆ ಕನ್ನಡ ಸಿನಿಮಾರಂಗದಲ್ಲಿ ಯಾರು ಮಾಡಿರದ ಪ್ರಯತ್ನಕ್ಕೆ ನಿರ್ಮಾಪಕ ಮುಂದಾಗಿದ್ದು ಚಿತ್ರೀಕರಣವನ್ನೂ ಮುಗಿಸುವ ಹಂತಕ್ಕೆ ತಲುಪಿದ್ದಾರೆ.

ಈ ರೀತಿಯ ಪ್ರಯತ್ನ ಮಾಡಲು ಮುಂದಾಗಿರುವುದಕ್ಕೆ ಚಿತ್ರತಂಡಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. . ಚಿತ್ರೀಕರಣ ಮುಗಿಸುವ ದಿನಾಂಕದ ಜೊತೆಗೆ ರಿಲೀಸ್ ಡೇಟ್ ಅನ್ನು ತಿಳಿಸಿರುವ ಚಿತ್ರತಂಡ ಮಾರ್ಚ್ ನಲ್ಲಿ ಸಿನಿಮಾವನ್ನ ತೆರೆಗೆ ತರುತ್ತಿದ್ದಾರೆ.

ಹೀರೋ ಆಗಲು ಸಜ್ಜಾದ ದರ್ಶನ್ ಸಂಬಂಧಿಯ ಲುಕ್ ಟೆಸ್ಟ್ ನೋಡಿ

ಕುರುಕ್ಷೇತ್ರ ಸಿನಿಮಾವನ್ನ ದರ್ಶನ್ ಅಬಿಮಾನಿಗಳು ಮತ್ತು ಕನ್ನಡ ಸಿನಿ ರಸಿಕರ ಜೊತೆಯಲ್ಲಿ ಬೇರೆ ಸ್ಟಾರ್ ಗಳ ಅಭಿಮಾನಿಗಳು ಚಿತ್ರವನ್ನ ಹಾಗೂ ದರ್ಶನ್ ಗೆಟಪ್ಅನ್ನು ಇಷ್ಟ ಪಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಈ ಬಗ್ಗೆ ಫೇಟ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ದರ್ಶನ್ ಕುರುಕ್ಷೇತ್ರ ಚಿತ್ರದ ಬಗ್ಗೆ ಅಪ್ಪು ಅಭಿಮಾನಿಗಳು ಹೇಳಿದ್ದೇನು? ಮುಂದೆ ಓದಿ

ಕುರುಕ್ಷೇತ್ರ ಅದ್ಬುತವಾದ ಚಿತ್ರ

ಕುರುಕ್ಷೇತ್ರ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಫೋಟೋಗಳು ಬಿಡುಗಡೆ ಆಗುತ್ತಿದ್ದ ಹಾಗೆಯೇ ಎಲ್ಲೆಡೆ ಮೆಚ್ಚುಗೆಗಳು ಕೇಳಿ ಬರುತ್ತಿವೆ. "ದರ್ಶನ್ ಅವರು ದುರ್ಯೋಧನನ ಪಾತ್ರಕ್ಕೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಾರೆ" ಎಂದು ಪುನೀತ್ ಅಭಿಮಾನಿಗಳು ತಿಳಿಸಿದ್ದಾರೆ.

ಪರಭಾಷಿಗರಿಗೆ ಪಾಠ

"ನಾವು ಕೂಡ ಐತಿಹಾಸಿಕ ಹಿನ್ನಲೆ ಇರುವ ಚಿತ್ರಗಳನ್ನ ನಿರ್ಮಾಣ ಮಾಡುತ್ತೇವೆ ಎಂದು ಈ ಮೂಲಕ ಹೇಳಿಕೊಳ್ಳಬಹುದು, ನಮ್ಮಲ್ಲೂ ಐತಿಹಾಸಿಕ ಚಿತ್ರಗಳಲ್ಲಿ ಅಭಿನಯಿಸುವ ಹೀರೋ ಇದ್ದಾರೆ ಎಂದು ಇನ್ನು ಮುಂದೆ ಹೆಮ್ಮೆಯಿಂದ ಹೇಳುತ್ತೇವೆ" ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಎರಡು ತಿಂಗಳ ಮುಂಚೆಯೇ ಕಟೌಟ್

ಸಮಾನ್ಯವಾಗಿ ಸಿನಿಮಾ ಬಿಡುಗಡೆ ಹತ್ತಿರ ಬಂದಾಗ ಚಿತ್ರಗಳ ಕಟೌಟ್ ತಯಾರಿ ಮಾಡುವ ಕೆಲಸ ಶುರು ಮಾಡುವುದು ಕಾಮನ್. ಆದರೆ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಇನ್ನು ಎರಡು ತಿಂಗಳು ಇರುವಾಗಲೇ ಕಟೌಟ್ ತಯಾರಿ ಮಾಡುವ ಕೆಲಸ ಹಾವೇರಿಯಲ್ಲಿ ಶುರುವಾಗಿದೆ.

ಪ್ರೇಕ್ಷಕರ ಎದುರು ದುರ್ಯೋಧನ

ಫೆಬ್ರವರಿಯಲ್ಲಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಮಾರ್ಚ್ ಮೊದಲ ವಾರದಲ್ಲಿ ಕುರುಕ್ಷೇತ್ರ ಚಿತ್ರ ಪ್ರೇಕ್ಷಕರ ಎದುರು ಬರಲಿದೆ. ಕುರುಕ್ಷೇತ್ರ ಒಬ್ಬ ನಟನ ಅಭಿಮಾನಿಗಳಿಗಷ್ಟೇ ಸೀಮಿತವಾಗದೆ ಕನ್ನಡ ಸಿನಿಪ್ರಿಯರ ಚಿತ್ರವಾಗಿರುವುದು ಖುಷಿಯ ವಿಚಾರ.

English summary
kannada actor power star puneeth rajkumar fans admired of Darshan's Kurukshetra movie. Darshan plays the role of 'Duryodhana' in the movie, Naganna is the director of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X