Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾ ಬ್ಯಾನರ್ ಪೀಸ್ ಪೀಸ್: ಅಪ್ಪು ಅಭಿಮಾನಿಗಳ ಆಕ್ರೋಶ!
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾದ ಒಂದೊಂದೇ ಹಾಡುಗಳು ಬಿಡುಗಡೆಯಾಗುತ್ತಿವೆ. ರಾಜ್ಯದ ಬೇರೆ ಬೇರೆ ಊರುಗಳಲ್ಲಿ ಸಿನಿಮಾ ಒಂದೊಂದೇ ಹಾಡುಗಳನ್ನು ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಮಾಡುವುದಕ್ಕೆ ತೀರ್ಮಾನಿಸಲಾಗಿದೆ.
ಅದರಂತೆ ಇಂದು (ಡಿಸೆಂಬರ್ 18) 'ಕ್ರಾಂತಿ' ಸಿನಿಮಾದ ಎರಡನೇ ಸಾಂಗ್ ಅನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡಿದೆ. ಈ ವೇಳೆ ಕ್ರಾಂತಿ ತಂಡ ಹೊಸಪೇಟೆಯಲ್ಲಿ ದೊಡ್ಡ ಬ್ಯಾನರ್‌ಗಳನ್ನು ಹಾಕಿತ್ತು.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು 'ಕ್ರಾಂತಿ' ಸಿನಿಮಾದ ಪೋಸ್ಟರ್‌ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಪವರ್‌ಸ್ಟಾರ್ ಅಂತ ಘೋಷಣೆಗಳನ್ನು ಕೂಗಿದ್ದಾರೆ. ಈ ಮೂಲಕ ದರ್ಶನ್ ಮೇಲೆ ಅಪ್ಪು ಫ್ಯಾನ್ಸ್ ಕೋಪ ಮತ್ತೆಷ್ಟು ಹೆಚ್ಚಾಗಿದೆ.

ಹೊಸಪೇಟೆಯಲ್ಲಿ 'ಕ್ರಾಂತಿ' ಬ್ಯಾನರ್ ಪೀಸ್ ಪೀಸ್
ದರ್ಶನ್ ಕೆಲವು ದಿನಗಳ ಹಿಂದಷ್ಟೇ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಹೀಗಾಗಿ ದರ್ಶನ್ ಅಭಿಮಾನಿಗಳು ರಸ್ತೆಯ ಉದ್ದಗಲಕ್ಕೂ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದ್ದರು. ಆದರೆ, ಬೆಳಗ್ಗೆಯಿಂದ ಅಪ್ಪು ಅಭಿಮಾನಿಗಳು ಬೀದಿಗಿಳಿದಿದ್ದರು. ಜೈ ಅಪ್ಪು ಬಾಸ್ ಘೋಷಣೆಯೊಂದಿಗೆ 'ಕ್ರಾಂತಿ' ಸಿನಿಮಾ ಪೋಸ್ಟರ್‌ಗಳನ್ನು ಹರಿದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರಸ್ತೆಯ ಪಕ್ಕದಲ್ಲಿ ದರ್ಶನ್,ಪುನೀತ್ ಬ್ಯಾನರ್
ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾದ ಪೋಸ್ಟರ್ ರಾರಾಹಿಸುತ್ತಿತ್ತು. ಇದನ್ನು ನೋಡಿದ ಅಪ್ಪು ಅಭಿಮಾನಿಗಳು ರಸ್ತೆಯ ಇನ್ನೊಂದು ಕಡೆ ಪುನೀತ್ ರಾಜ್‌ಕುಮಾರ್ ಪೋಸ್ಟರ್ ನಿಲ್ಲಿಸಿ ಜೈ ಅಪ್ಪು ಬಾಸ್ ಅಂತ ಘೋಷನೆ ಕೂಗಿದ್ದಾರೆ. ಹಾಗೇ 'ಕ್ರಾಂತಿ' ಕಾರ್ಯಕ್ರಮ ನಡೆಯುವ ವೇದಿಕೆ ಮುಂದೆ ಅಪ್ಪು ಅಭಿಮಾನಿಗಳು ಪುನೀತ್ ಬಾವುಟ ಹಿಡಿದು ಜೈಕಾರ ಹಾಕಿದ್ದಾರೆ.

ಹೊಸಪೇಟೆ ಕಿಂಗ್ ಪುನೀತ್
ಪುನೀತ್ ರಾಜ್‌ಕುಮಾರ್ ಮೊದಲಿನಿಂದಲೂ ಹೊಸಪೇಟೆ ಜನರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಅಭಿಮಾನಿಗಳೇ ಸೇರಿ ಇಲ್ಲಿ ಬೃಹತ್ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಹೀಗಾಗಿ ಇಲ್ಲಿ ಅಪ್ಪು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಪರ ಘೋಷಣೆಗಳನ್ನು ಕೂಗುತ್ತಿರೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದರ್ಶನ್ ಸಿನಿಮಾ ಮೇಲ್ಯಾಕೆ ಕೋಪ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಈ ಹಿಂದೆ ದರ್ಶನ್ ಕೊಟ್ಟ ಕೆಲವು ಹೇಳಿಕೆಗಳು, ದರ್ಶನ್ ಅಭಿಮಾನಿಗಳ ನಡೆಯ ಬಗ್ಗೆ ಆಗಾಗ ಅಪ್ಪು ಫ್ಯಾನ್ಸ್ ಆಕ್ರೋಶ ಹೊರಹಾಕುತ್ತಲೇ ಇದ್ದರು. ಇದೇ ಈಗಲೂ ಪುನೀತ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, 'ಕ್ರಾಂತಿ' ಪೋಸ್ಟರ್ ಹರಿದು ಹಾಕಿದ್ದು ನಿಜಕ್ಕೂ ಪುನೀತ್ ಅಭಿಮಾನಿಗಳ ಅಥವಾ ಕಿಡಿಗೇಡಿಗಳ ಅನ್ನೋದಕ್ಕೆ ಸ್ಪಷ್ಟತೆ ಸಿಗಬೇಕಿದೆ.