»   » ಪವನ್ ಒಡೆಯರ್ ಗೆ ಪುನೀತ್ ಕ್ಯೂಟ್ ಗಿಫ್ಟ್

ಪವನ್ ಒಡೆಯರ್ ಗೆ ಪುನೀತ್ ಕ್ಯೂಟ್ ಗಿಫ್ಟ್

Posted By:
Subscribe to Filmibeat Kannada

ನಾಯಕ ನಟರ ಹುಟ್ಟುಹಬ್ಬ ಅಂದ್ರೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತೆ. ಇನ್ನೂ ಉಡುಗೊರೆಗಳಂತೂ ಕೇಳೋದೇ ಬೇಡ. ಸ್ಟಾರ್ ಹೀರೋಗಳ ಬರ್ತಡೆಗೆ ಚಿತ್ರತಂಡದ ವತಿಯಿಂದ ಸ್ಪೆಷಲ್ ಟೀಸರ್ ಅಂತೂ ಖಾಯಂ ಆಗಿ ರೆಡಿಯಿರುತ್ತೆ.

ಹೀರೋಗಳಿಗಾಗಿ ಇಷ್ಟೆಲ್ಲಾ ಮಾಡುವ ನಿರ್ದೇಶಕರಿಗೆ ನಾಯಕರು ಕೊಡುವುದಾದರೂ ಏನು? ಇದುವರೆಗೂ ಯಾರೇನು ಕೊಟ್ಟಿದ್ದಾರೋ ಇಲ್ವೋ...ಆದ್ರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತ್ರ ಡೈರೆಕ್ಟರ್ ಪವನ್ ಒಡೆಯರ್ ಗೆ ಬೆಲೆಬಾಳುವ ವಾಚ್ ನ ಗಿಫ್ಟಾಗಿ ನೀಡಿದ್ದಾರೆ.


Puneeth Rajkumar gifts costly watch to 'Ranavikrama' director Pawan Wadeyar

ಹೌದು, 'ರಣವಿಕ್ರಮ' ನಿರ್ದೇಶಕ ಪವನ್ ಒಡೆಯರ್ ಪ್ರತಿಭೆಗೆ ಮಾರುಹೋಗಿರುವ ಪುನೀತ್ ರಾಜ್ ಕುಮಾರ್, ವಾಚ್ ಒಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿರುವ 'ರಣವಿಕ್ರಮ' ರಿಲೀಸ್ ಗೆ ರೆಡಿಯಾಗಿದೆ. ಅಪ್ಪು ಅಂದುಕೊಂಡಂತೆ ತೆರೆಮೇಲೆ 'ರಣವಿಕ್ರಮ'ನ ಪರಾಕ್ರಮ ಜೋರಾಗಿದೆ. [ಪವರ್ ಫುಲ್ 'ರಣವಿಕ್ರಮ' ಟೀಸರ್ ಬಂದಿದೆ ನೋಡಿ]


ಪ್ರತಿಯೊಂದು ಶಾಟ್ ಕೂಡ ಪರ್ಫೆಕ್ಟ್ ಆಗಿ ಸಂಯೋಜಿಸಿ, ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿರುವ ನಿರ್ದೇಶಕ ಪವನ್ ಒಡೆಯರ್ ಗೆ ಅಪ್ಪು ನೀಡಿರುವ ಪುಟ್ಟ ಕಾಣಿಕೆ ಇದು. ಅಪ್ಪು ಕೊಟ್ಟ ಈ ಸರ್ಪ್ರೈಸ್ ಗೆ ನಿರ್ದೇಶಕ ಪವನ್ ಒಡೆಯರ್ 'ದಿಲ್' ಖುಷ್ ಆಗ್ಬಿಟ್ಟಿದೆ. [ಮುಂಚಿನಂತೆ ಈಗಿಲ್ಲ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್!]


Puneeth Rajkumar gifts costly watch to 'Ranavikrama' director Pawan Wadeyar

'ಗೂಗ್ಲಿ' ನಂತರ 'ರಣವಿಕ್ರಮ' ಮೂಲಕ ಮತ್ತೊಂದು ಯಶಸ್ಸನ್ನ ಎದುರು ನೋಡುತ್ತಿರುವ ಪವನ್ ಒಡೆಯರ್, ಪವರ್ ಸ್ಟಾರ್ ಗಾಗಿ ವಿಭಿನ್ನ ಕಥೆಯನ್ನ ರಚಿಸಿ 'ರಣವಿಕ್ರಮ' ರೆಡಿಮಾಡಿದ್ದಾರೆ.


ಬಾಲಿವುಡ್ ಬೆಡಗಿ ಅದಾ ಶರ್ಮಾ ಮತ್ತು ಟಾಲಿವುಡ್ ನಟಿ ಅಂಜಲಿ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿರುವ ಚಿತ್ರ 'ರಣವಿಕ್ರಮ'. ಯುಗಾದಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ 'ರಣವಿಕ್ರಮ' ಹಾಡುಗಳು ಗಾಂಧಿನಗರದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ['ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು]


ಏಪ್ರಿಲ್ ಹೊತ್ತಿಗೆ 'ರಣವಿಕ್ರಮ' ತೆರೆಮೇಲೆ ರಾರಾಜಿಸುತ್ತದೆ. ರಿಲೀಸ್ ಗೂ ಮುನ್ನವೇ ನಿರ್ದೇಶಕರಿಗೆ ಗಿಫ್ಟ್ ಸಿಕ್ಕಿದೆ. 'ರಣವಿಕ್ರಮ' ಕ್ಲಿಕ್ ಆದ್ರೆ, ಪವನ್ ಒಡೆಯರ್ ನ ಹಿಡಿಯೋರು ಯಾರು....

English summary
Kannada Actor Puneeth Rajkumar has rewarded a costly watch to Director Pawan Wadeyar. 'Ranavikrama' is all set to release in April. Feeling gratitude Appu has gifted the director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada