For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೋವಾದಲ್ಲಿ ಏನ್ಮಾಡ್ತಿದ್ದಾರೆ?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಗೋವಾದಲ್ಲಿದ್ದಾರೆ. ಇತ್ತೀಚಿಗಷ್ಟೆ ಬಹುನಿರೀಕ್ಷೆಯ 'ಯುವರತ್ನ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಪುನೀತ್ ಇದೀಗ ಗೋವಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಉದ್ದ ಗಡ್ಡ ಬಿಟ್ಟಿರುವ ಲುಕ್ ನಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಪುನೀತ್ ದಿಢೀರ್ ಗೋವಾ ಪ್ರವಾಸ ಕೈಗೊಂಡಿದ್ದೇಕೆ ಅಂತೀರಾ? 'ಯುವರತ್ನ' ಸಿನಿಮಾದ ಚಿತ್ರೀಕರಣಕ್ಕೆಂದು ಪುನೀತ್ ಮತ್ತು ತಂಡ ಗೋವಾ ಕಡೆ ಪ್ರಯಾಣ ಬೆಳೆಸಿದೆ.

  ತಿಂಗಳುಗಳ ಬಳಿಕ ಅಂದರೆ ಕೊರೊನಾ ಲಾಕ್ ಡೌನ್ ನಂತರ 'ಯುವರತ್ನ' ಸಿನಿಮಾತಂಡ ಮತ್ತೆ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರದ ಪ್ರಮುಖ ಹಾಡನ್ನು ಸೆರೆಹಿಡಿಯುತ್ತಿದೆ. ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟೂಡಿಯೋ, ಮಿನರ್ವಾ ಮಿಲ್ ಹಾಗೂ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಉಳಿದ ಭಾಗದ ಚಿತ್ರೀಕರಣಕ್ಕೆಂದು ಸಿನಿಮಾತಂಡ ಗೋವಾ ಕಡೆ ಹೊರಟಿದೆ. ಮುಂದೆ ಓದಿ...

  ಪುನೀತ್ 'ಜೇಮ್ಸ್' ಚಿತ್ರಕ್ಕೆ ಬಂದ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರುಪುನೀತ್ 'ಜೇಮ್ಸ್' ಚಿತ್ರಕ್ಕೆ ಬಂದ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರು

  ಗೋವಾದಲ್ಲಿ ಪುನೀತ್

  ಗೋವಾದಲ್ಲಿ ಪುನೀತ್

  'ಯುವರತ್ನ' ಚಿತ್ರದ ಇಂಟ್ರುಡಕ್ಷನ್ ಹಾಡು ಮತ್ತು ಉಳಿದ ಟಾಕಿ ಭಾಗದ ಚಿತ್ರೀಕರಣ ಗೋವಾದಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿ, ಗೋವಾ ಕಡೆ ಹೊರಟಿದ್ದಾರೆ. ಪುನೀತ್ ರಾಜ್ ಕುಮಾರ್ ಗೋವಾದಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಾಸ್ ಗೆಟಪ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವ ಪುನೀತ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಹಾಡಿನ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ

  ಹಾಡಿನ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ

  ಅಂದ್ಹಾಗೆ ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ. ಇತ್ತೀಚಿಗೆ ಚಿತ್ರೀಕರಣವಾದ ಎನರ್ಜಿಟಿಕ್ ಹಾಡನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ವಿಶೇಷ ಅಂದರೆ ಈ ಹಾಡಿಗೆ ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕೋರಿಯೋಗ್ರಾಫ್ ಮಾಡುತ್ತಿದ್ದಾರೆ. ಪುನೀತ್ ಮತ್ತು ಜಾನಿ ಕಾಂಬಿನೇಷನ್ ಡ್ಯಾನ್ಸ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳು ಕುತೂಹಲ.

  ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಸೂಪರ್ ಅಪ್ ಡೇಟ್ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಸೂಪರ್ ಅಪ್ ಡೇಟ್

  ಕುತೂಹಲ ಹೆಚ್ಚಿಸಿದ ಜಾನಿ ಮಾಸ್ಟರ್-ಅಪ್ಪು ಕಾಂಬಿನೇಷನ್

  ಕುತೂಹಲ ಹೆಚ್ಚಿಸಿದ ಜಾನಿ ಮಾಸ್ಟರ್-ಅಪ್ಪು ಕಾಂಬಿನೇಷನ್

  ಈಗಾಗಲೇ ಪುನೀತ್ ಮತ್ತು ಜಾನಿ ಮಾಸ್ಟರ್ ಕಾಂಬಿನೇಷನ್ ನಲ್ಲಿ 'ನಟಸಾರ್ವಭೌಮ' ಚಿತ್ರದ 'ಓಪನ್ ದಿ ಬಾಟಲ್...' ಹಾಡು ಮೂಡಿಬಂದಿದೆ. ಈ ಹಾಡಿನಲ್ಲಿ ಪುನೀತ್ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದರು. ಅಪ್ಪು ಡ್ಯಾನ್ಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಮತ್ತೊಂದು ಹೈ ವೋಲ್ಟೇಜ್ ಹಾಡು ಅಭಿಮಾನಿಗಳ ಮುಂದೆ ಬರಲು ಸಿದ್ಧವಾಗುತ್ತಿದೆ. ಈ ಹಾಡು ಹೇಗಿರಲಿದೆ ಎನ್ನುವ ಕೌತುಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

  Chiru ನಿಧನದ ನಂತರ ಮೊದಲ ಭಾರಿಗೆ ಕ್ಯಾಮೆರಾ ಮುಂದೆ ಬಂದ Meghana | Filmibeat Kannada
  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಸಯೇಶಾ ಕಾಣಿಸಿಕೊಳ್ಳುತ್ತಿದ್ದಾರೆ. ಸಯೇಶಾ, ವಂದನಾ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನೂ 'ಯುವರತ್ನ' ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ದಿಗಂತ್, ಧನಂಜಯ್, ಸೋನು ಗೌಡ ಸೇರಿದ್ದಂತೆ ಅನೇಕರು 'ಯುವರತ್ನ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Puneeth Rajkumar starrer most expected Yuvarathnaa movie shooting going on in Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X