»   » ಪುನೀತ್ ರಾಜ್ ಕುಮಾರ್ ಈಗ 'ದೊಡ್ಡಮನೆ ಹುಡುಗ'

ಪುನೀತ್ ರಾಜ್ ಕುಮಾರ್ ಈಗ 'ದೊಡ್ಡಮನೆ ಹುಡುಗ'

Posted By:
Subscribe to Filmibeat Kannada

ದುನಿಯಾ ಸೂರಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಕೈಜೋಡಿಸುತ್ತಿದ್ದಾರೆ. 'ಜಾಕಿ' ಹಾಗೂ 'ಅಣ್ಣಾಬಾಂಡ್' ಚಿತ್ರಗಳ ಬಳಿಕ ಇದೀಗ ಮತ್ತೊಮ್ಮೆ ಸೂರಿ ಪುನೀತ್ ಗೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ 'ದೊಡ್ಡಮನೆ ಹುಡುಗ' ಎಂದು ಹೆಸರಿಟ್ಟಿದ್ದಾರೆ.

ಸಾಮಾನ್ಯವಾಗಿ ಸೂರಿ ಚಿತ್ರಗಳೆಂದರೆ ಭೂಗತಜಗತ್ತಿನ ಎಳೆಯೊಂದಿಗೆ ಥಳುಕು ಹಾಕಿಕೊಂಡಿರುತ್ತವೆ. ಆದರೆ ಈ ಬಾರಿ ಶೀರ್ಷಿಕೆ ನೋಡಿದರೆ ಕೌಟುಂಬಿಕ ಕಥಾವಸ್ತುವಿಗೆ ಸೂರಿ ಕೈಹಾಕಿದ್ದಾರೆ ಎನ್ನಿಸುತ್ತದೆ. ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದ ಎಂ ಗೋವಿಂದು ಈ ಬಾರಿ 'ದೊಡ್ಡಮನೆ ಹುಡುಗ' ನಿರ್ಮಾಪಕರು. ['ನಿನ್ನಿಂದಲೇ' ರಿವ್ಯೂ]


ಚಿತ್ರದ ಟೈಟಲ್ ಬಿಟ್ಟರೆ ಇನ್ನೇನೂ ಫೈನಲ್ ಆಗಿಲ್ಲ. ಬಹುಶಃ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ (ಏಪ್ರಿಲ್ 24) ಎಲ್ಲವೂ ಅಧಿಕೃತವಾಗಿ ಪ್ರಕಟವಾಗಬಹುದು. ಅದಕ್ಕೂ ಮುನ್ನ ಪುನೀತ್ ಜೊತೆಗಿನ ಪವನ್ ಒಡೆಯರ್ ಅವರ 'ರಣ ವಿಕ್ರಮ' ಚಿತ್ರ ಮುಗಿಯಬೇಕಿದೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ.

ದುನಿಯಾ ಸೂರಿ ಹೊಸಬರೊಂದಿಗೆ 'ಕಂಟ್ರಿ ಪಿಸ್ತೂಲ್' ಮಾಡುವುದಾಗಿ ಸುದ್ದಿ ಇತ್ತು. ಅದಾದ ಬಳಿಕ ಇನ್ನೊಂದು ಚಿತ್ರ 'ಕರೆನ್ಸಿ' ಪ್ರಕಟವಾಗಿತ್ತು. ಇದೀಗ 'ದೊಡ್ಡಮನೆ ಹುಡುಗ' ಚಿತ್ರದ ಸರದಿ. ಒಟ್ಟಾರೆಯಾಗಿ ದುನಿಯಾ ಸೂರಿ ಡೈರೆಕ್ಷನ್, ಪುನೀತ್ ಹೀರೋ ಎಂದರೆ ನಿರೀಕ್ಷೆಗಳು ಡಬಲ್. ಇಬ್ಬರೂ ಒಂದು ಭರ್ಜರಿ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್)

English summary
Power Star Puneeth Rajkumar new movie titled as Doddamane Huduga. This time Duniya Soori will be directing the movie. The film is likely to be launched on Dr Rajkumar's birthday, April 24th. 
Please Wait while comments are loading...