Don't Miss!
- Finance
ಅದಾನಿ ಗ್ರೂಪ್ ಸಾಲ: ಭಾರತೀಯ ಬ್ಯಾಂಕ್ಗಳ ಬಳಿ ಮಾಹಿತಿ ಕೇಳಿದ ಆರ್ಬಿಐ
- News
ಸಿದ್ದರಾಮಯ್ಯ ವಿರುದ್ಧ ದೂರುಗಳ ಸುರಿಮಳೆ ಹರಿಸಿದ ಎನ್ ಆರ್ ರಮೇಶ್, ಪ್ರಕರಣಗಳ ವಿವರ
- Automobiles
ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
- Technology
ಫಾಸ್ಟ್ಯಾಗ್ ರೀಚಾರ್ಜ್ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Sports
ಸರಣಿ ಗೆದ್ದ ಬಳಿಕ ನಾಯಕನ ಮಾತು: ಯುವ ಆಟಗಾರರ ಪ್ರದರ್ಶನಕ್ಕೆ ಹಾರ್ದಿಕ್ ವಿಶೇಷ ಮೆಚ್ಚುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
James Day 4 Box office collections : 'ಜೇಮ್ಸ್' ನಾಲ್ಕೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸಾಫೀಸ್ ಗಳಿಕೆ 100 ಕೋಟಿ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್ ಆಗಿ ಐದನೇ ದಿನಕ್ಕೆ ಕಾಲಿಟ್ಟಿದೆ. ಅಪ್ಪು ಸ್ಟೈಲಿಶ್ ಎಂಟ್ರಿ. ಮಾಸ್ ಲುಕ್, ಮಸ್ತ್ ಡ್ಯಾನ್ಸ್, ಆಕ್ಷನ್ ಸೀನ್‌ಗಳನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಪುನೀತ್ ಸಿನಿಮಾ ನೋಡಿ ಅಭಿಮಾನಿಗಳು ಕಣ್ಣುಗಳು ಒದ್ದೆಯಾಗಿವೆ.
Recommended Video

ಅಪ್ಪು ಸಿನಿಮಾ ರಿಲೀಸ್ ಆಗಲಿ ಅಂತ ಅದೆಷ್ಟೋ ಅಭಿಮಾನಿಗಳು ಕಾದುಕೂತಿದ್ದರು. ಹಾಗೇ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸುತ್ತೆ? ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು ಮಾಡಬಹುದು? ಅನ್ನೋ ಕುತೂಹಲ ಗರಿಗೆದರಿತ್ತು. ನಿರೀಕ್ಷೆಯಂತೆ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಕನ್ನಡದ ಮಟ್ಟಿದೆ ಇದು ದಾಖಲೆ ಅಂತಲೇ ಹೇಳಬಹುದು.
James
Day
3
Box
office:'ಜೇಮ್ಸ್'
3ನೇ
ದಿನದ
ಬಾಕ್ಸಾಫೀಸ್
ಕಲೆಕ್ಷನ್
ವಿವರ
ಇಲ್ಲಿವರೆಗೂ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗೆ ನಿಕರವಾದ ಮಾಹಿತಿ ಇರಲಿಲ್ಲ. 'ಜೇಮ್ಸ್' ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಸಿದೆ ಅಂತೆಲ್ಲಾ ಸುದ್ದಿಯಾಗಿತ್ತು. ಸ್ಯಾಟಲೈಟ್ ರೈಟ್ಸ್, ಒಟಿಟಿ ರೈಟ್ಸ್ ಸೇರಿ 100 ಕೋಟಿ ಅಂತೆಲ್ಲಾ ಸುದ್ದಿಯಾಗಿತ್ತು. ಆದರೆ, ನಿರ್ಮಾಪಕರಾಗಲಿ, ಸಿನಿಮಾ ತಂಡ ಆಗಲಿ ಈ ಬಗ್ಗೆ ಖಚಿತವಾಗಿ ಮಾಹಿತಿ ನೀಡಿಲ್ಲ. ಕನ್ನಡ ಚಿತ್ರರಂಗದ ವಿತರಕರ ಪ್ರಕಾರ 'ಜೇಮ್ಸ್' ಲೆಕ್ಕಾಚಾರನೇ ಬೇರೆ.

'ಜೇಮ್ಸ್' ಕಲೆಕ್ಷನ್ ಎಷ್ಟು?
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಕರ್ನಾಟಕ ಅಷ್ಟೇ ಅಲ್ಲ. ದೇಶ- ವಿದೇಶದಲ್ಲಿಯೂ 'ಜೇಮ್ಸ್' ಚಿತ್ರವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಿತ್ತು. ಹೀಗಾಗಿ ಮೊದಲ ದಿನದ ಗಳಿಕೆ ಸುಮಾರು 32 ಕೋಟಿ ಎಂದು ಹೇಳಲಾಗಿತ್ತು. ಈಗ ನಾಲ್ಕು ದಿನಗಳಲ್ಲಿ, ಕೇವಲ ಚಿತ್ರಮಂದಿರಗಳಿಂದಲೇ 'ಜೇಮ್ಸ್' ಸಿನಿಮಾ ಗಳಿಕೆ 100 ಕೋಟಿ ದಾಟಿದೆ ಎಂದು ಸ್ಯಾಂಡಲ್‌ವುಡ್ ಮಂದಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮೂಲಕ 'ಜೇಮ್ಸ್' ಅಧಿಕೃತವಾಗಿ 100 ಕೋಟಿ ಕ್ಲಬ್ ಸೇರಿದಂತಾಗಿದೆ.
Puneeth
Viral
Photo:
ಅಪ್ಪು
ಆಟೋ
ರಿಕ್ಷಾದಲ್ಲಿ
ಪ್ರಯಾಣಿಸಿದ್ದು
ನೋಡಿದ್ದೀರಾ?
ಈ
ಫೋಟೊ
ಬಲು
ಅಪರೂಪ

ಭಾನುವಾರ 'ಜೇಮ್ಸ್' ಸಿನಿಮಾ ಗಳಿಕೆ ಎಷ್ಟು?
ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಭಾನುವಾರ (ಮಾರ್ಚ 21)ರಂದು 'ಜೇಮ್ಸ್' ಬಾಕ್ಸಾಫೀಸ್ ಗಳಿಕೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಹೆಚ್ಚು ಕಡಿಮೆ ಮೊದಲ ದಿನದ ಗಳಿಕೆ 32 ಕೋಟಿ ಆಸುಪಾಸಿನಲ್ಲೇ 4ನೇ ದಿನವೂ ಗಳಿಕೆ ಕಂಡಿದೆ ಎಂದು ಸ್ಯಾಂಡಲ್‌ವುಡ್ ವಿತರಕರು ಲೆಕ್ಕ ಹಾಕಿದ್ದಾರೆ. ಭಾನುವಾರ ವಿಶ್ವದಾದ್ಯಂತ ಭರ್ಜರಿ ಕೆಲೆಕ್ಷನ್ ಮಾಡು ಮುನ್ನುಗ್ಗುತ್ತಿದೆ.

ಜೇಮ್ಸ್ ಕಲೆಕ್ಷನ್ ಹೇಗಿದೆ?
ಪುನೀತ್
ರಾಜ್‌ಕುಮಾರ್
'ಜೇಮ್ಸ್'
ಸಿನಿಮಾ
4
ದಿನಗಳಲ್ಲೂ
ಸೂಪರ್
ಕಲೆಕ್ಷನ್
ಮಾಡಿದೆ
ಪ್ರತಿದಿನ
ಚಿತ್ರಮಂದಿರ
ಹೌಸ್‌ಫುಲ್
ಆಗಿದೆ.
ವಿಶ್ವದಾದ್ಯಂತ
ನಾಲ್ಕು
ದಿನಗಳಲ್ಲಿ
'ಜೇಮ್ಸ್'
ಗಳಿಕೆ
ಹೀಗಿದೆ.
Day
1
32
ಕೋಟಿ,
(ಅಂದಾಜು)
Day
2
21.8
ಕೋಟಿ
(ಅಂದಾಜು)
Day
3
26.4
ಕೋಟಿ
(ಅಂದಾಜು)
Day
4
30
ಕೋಟಿ
(ಅಂದಾಜು)
ಒಟ್ಟು
110.2
ಕೋಟಿ(ಅಂದಾಜು)
ಈ ಮೂಲಕದ ಅಧಿಕೃತವಾಗಿ 'ಜೇಮ್ಸ್' ಕೇವಲ ಥಿಯೇಟರ್‌ಗಳಿಂದ ಬಂದ ಗಳಿಕೆಯಿಂದಲೇ 100 ಕೋಟಿ ಕ್ಲಬ್ ಸೇರಿದಂತಾಗಿದೆ. ಕನ್ನಡದ ಸಿನಿಮಾವೊಂದು ಅತೀ ವೇಗದಲ್ಲಿ 100 ಕೋಟಿ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ. ಆಸ್ಟ್ರೇಲಿಯಾದಲ್ಲಿ 18 ಲಕ್ಷ, ಅಮೆರಿಕದಲ್ಲಿ 66 ಲಕ್ಷ ಗಳಿಕೆ ಕಂಡಿದೆ. ವಿದೇಶದಲ್ಲೂ ಉತ್ತಮ ಗಳಿಕೆ ಕಾಣುತ್ತಿದ್ದು, ಹೀಗೆ ಮುಂದುವರೆದರೆ, ಈ ವಾರಾಂತ್ಯದೊಳಗೆ 150 ಕೋಟಿ ಕ್ಲಬ್ ಸೇರಿದರೂ ಅಚ್ಚರಿಯಿಲ್ಲ.
James:
'ಜೇಮ್ಸ್'ನಲ್ಲಿ
ಪುನೀತ್
ರಾಜ್‌ಕುಮಾರ್
ಮರುಸೃಷ್ಟಿ:
ಗೆದ್ದ
ಚಿತ್ರತಂಡ!

ಸ್ಯಾಟಲೈಟ್, ಓಟಿಟಿ ರೈಟ್ಸ್ ಎಷ್ಟು?
ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಓಟಿಟಿ ರೈಟ್ಸ್ ಸುಮಾರು 40 ಕೋಟಿಗೆ ಸೇಲ್ಆಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಸ್ಯಾಟಲೈಟ್ ರೈಟ್ಸ್ ಕೂಡ ಎಲ್ಲಾ ಭಾಷೆ ಸೇರಿ 20 ಕೋಟಿ ದಾಡಿದೆ ಎಂದು ಅಂದಾಹು ಮಾಡಲಾಗಿದೆ. ಈ ಮೂಲಕ 'ಜೇಮ್ಸ್' 160 ರಿಂದ 170 ಕೋಟಿ ಗಳಿಕೆ ಆದಂತೆ ಆಗಿದೆ.