»   » ರೋಮಿಯೋ ಚಾಲೆಂಜ್ ಸ್ವೀಕರಿಸಿದ ಪುನೀತ್-ಕಿಚ್ಚ ಸುದೀಪ್ .!

ರೋಮಿಯೋ ಚಾಲೆಂಜ್ ಸ್ವೀಕರಿಸಿದ ಪುನೀತ್-ಕಿಚ್ಚ ಸುದೀಪ್ .!

Posted By:
Subscribe to Filmibeat Kannada
ರೋಮಿಯೋ ಚಾಲೆಂಜ್ ನ ಒಪ್ಪಿಕೊಂಡ ಸುದೀಪ್ ಪುನೀತ್ ರಾಜ್ ಕುಮಾರ್ | FIlmibeat Kannada

ಚಂದನವನದಲ್ಲಿ ರೋಮಿಯೋ ಚಾಲೆಂಜ್ ಶುರುವಾಗಿದೆ. ಎಲ್ಲಾ ಸ್ಟಾರ್ ಗಳು ಈ ಚಾಲೆಂಜ್ ಬಗ್ಗೆ ತಲೆ ಕೆಡಿಸಿಕೊಂಡು ನಾವು ಯಾವಾಗ ಈ ಚಾಲೆಂಜ್ ಕಂಪ್ಲೀಟ್ ಮಾಡೋದು ಎನ್ನುವ ಟೆನ್ಷನ್ ನಲ್ಲಿದ್ದಾರೆ.

ರೋಮಿಯೋ ಚಾಲೆಂಜ್ ಕೊಟ್ಟಿರೋದು ಫೇಮಸ್ ಆಂಕರ್ ಅನುಶ್ರೀ ಹಾಗೂ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಇವರ ಮಾತಿಗೆ ಸೀರಿಯಸ್ ಆಗಿರುವ ಪವರ್ ಸ್ಟಾರ್ ಹಾಗೂ ಕಿಚ್ಚ ಸುದೀಪ್ ಚಾಲೆಂಜ್ ಸ್ವೀಕರಿಸಿ ಗೆದ್ದೇ ಬಿಟ್ಟಿದ್ದಾರೆ. ಆ ರೋಮಿಯೋ ಚಾಲೆಂಜ್ ಬಗ್ಗೆ ನೀವು ತಿಳ್ಕೋಬೇಕಾ, ಮುಂದೆ ಓದಿ...

ಹಾಡಿಗೆ ಸ್ಟೆಪ್ಸ್ ಹಾಕಿದ ಸ್ಟಾರ್ ಗಳು

ಮೊನ್ನೆ ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಇಮ್ರಾನ್ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನಿಮಾದ ಹಾಡನ್ನ ರಿಲೀಸ್ ಮಾಡಿದ್ದರು. ಹಾಡಿನಲ್ಲಿದ್ದ ಒಂದು ಸ್ಟೆಪ್ ಅನ್ನ ತಾವು ಮಾಡುವ ಮೂಲಕ ಅಪ್ಪು ಚಾಲೆಂಜ್ ವಿನ್ ಆಗಿದ್ರು. ಈಗ ಅದೇ ಚಾಲೆಂಜ್ ಅನ್ನ ಎಲ್ಲಾ ಸ್ಟಾರ್ ಗಳು ಸ್ವೀಕರಿಸಿದ್ದಾರೆ

ಇಮ್ರಾನ್ ಸಾಂಗ್ -ಪ್ರಿಯಾ ಡ್ಯಾನ್ಸ್

ಹೊಸ ಗಾನಬಜಾನ ಹಾಡಿಗೆ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದ ಇಮ್ರಾನ್ ಸರ್ದಾರಿಯ ರೊಮಿಯೋ ಹಾಡಿಗೆ ಪ್ರಿಯಾಮಣಿ ಜೊತೆ ಹೆಜ್ಜೆ ಹಾಕಿದ್ದಾರೆ. ಒಂದೇ ಪ್ರಯತ್ನದಲ್ಲಿ ಪ್ರಿಯಾಮಣಿ ಚಾಲೆಂಜ್ ನಲ್ಲಿ ವಿನ್ ಆಗಿದ್ದಾರೆ.

ಓಲ್ಡ್ ಸ್ಟೂಡೆಂಟ್ ಗೆ ಇಮ್ರಾನ್ ಪಾಠ

ನಟಿ ಶೃತಿ ಹರಿಹರನ್ ಕೂಡ ರೋ ರೋ ರೋಮಿಯೋ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇಮ್ರಾನ್ ಸರ್ದಾರಿಯಾ ಗ್ರೂಪ್ ನಲ್ಲೇ ಚಿತ್ರರಂಗದ ಪ್ರಯಾಣ ಪ್ರಾರಂಭಿಸಿದ ಶೃತಿ, ಗುರುಗಳು ಹಾಕಿರುವ ಸ್ಟೆಪ್ಸ್ ನ ಸಖತ್ತಾಗಿ ಟ್ರೈ ಮಾಡಿದ್ದಾರೆ.

ಅಭಿನಯ ಚಕ್ರವರ್ತಿಯದ್ದೇ ಬೇರೆ ಸ್ಟೈಲ್

ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ, ಶೃತಿ ಹರಿಹರನ್ ಇವರೆಲ್ಲರೂ ಡ್ಯಾನ್ಸ್ ಮಾಡಿದ ನಂತ್ರ ಕಿಚ್ಚ ಸುದೀಪ್ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದಷ್ಟೇ ಅಲ್ಲದೇ ಇದೇ ಹಾಡಿಗೆ ಬಿಗ್ ಬಾಸ್ ಸ್ಟೇಜ್ ಮೇಲೆ ಸುದೀಪ್ ಕೊರಿಯೋಗ್ರಾಫ್ ಕೂಡ ಮಾಡಿದ್ರು.

ಉಪ್ಪು-ಹುಳಿ-ಖಾರ ರಿಲೀಸ್ ಡೇಟ್ ಫಿಕ್ಸ್

ಹಾಡುಗಳಿಂದ ಸೌಂಡ್ ಮಾಡುತ್ತಿರುವ 'ಉಪ್ಪು ಹುಳಿ ಖಾರ' ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಇಮ್ರಾನ್ ಸರ್ದಾರಿಯಾ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು ಅನುಶ್ರೀ, ಮಾಲಾಶ್ರೀ, ಜಯಶ್ರೀ, ಶರತ್ ಇನ್ನೂ ಅನೇಕರು ಅಭಿನಯಿಸಿದ್ದಾರೆ. ರಮೇಶ್ ರೆಡ್ಡಿ ಸಿನಿಮಾವನ್ನ ನಿರ್ಮಾಣ ಮಾಡಿದ್ದು ಇದೇ ತಿಂಗಳು 24 ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ.

English summary
Kannada Actor Puneeth Rajkumar, Priyamani and Shruthi Hariharan accepts Romeo Challenge.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X