For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್; ಯಾವ ಸಿನಿಮಾ?

  By ಫಿಲ್ಮ್ ಡೆಸ್ಕ್
  |

  'ಲವ್ ಮಾಕ್ಟೇಲ್' ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣಗೆ ಬೇಡಿಕೆ ಹೆಚ್ಚಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ನಿರತರಾಗಿರುವ ಕೃಷ್ಣ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

  ಹೌದು, ನಟ ಮತ್ತು ಖ್ಯಾತ ನೃತ್ಯ ನಿರ್ದೇಶಕ ನಗೇಂದ್ರ ಪ್ರಸಾದ್ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ವಿಶೇಷ ಎಂದರೆ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಮತ್ತೆ ಕನ್ನಡಕ್ಕೆ ಬಂದ 'ಮನಸೆಲ್ಲಾ ನೀನೆ' ನಟ ನಾಗೇಂದ್ರ ಪ್ರಸಾದ್

  ತಮಿಳು ಸಿನಿಮಾದ ರಿಮೇಕ್

  ತಮಿಳು ಸಿನಿಮಾದ ರಿಮೇಕ್

  ನಗೇಂದ್ರ ಪ್ರಸಾದ್ ತಮಿಳಿನ 'ಓ ಮೈ ಕಡವುಲೆ' ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲು ತಯಾರಿ ನಡೆಸಿದ್ದಾರೆ. ಸಾಕಷ್ಟು ಬದಲಾವಣೆಯೊಂದಿಗೆ ಕನ್ನಡಕ್ಕೆ ಬರ್ತಿರುವ 'ಓ ಮೈ ಕಡವುಲೆ' ಚಿತ್ರಕ್ಕೆ ಕೃಷ್ಣ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಮೂಲ ಸಿನಿಮಾದಲ್ಲಿ ನಾಯಕನಾಗಿ ಅಶೋಕ್ ಸೆಲ್ವನ್ ಮತ್ತು ರಿತಿಕಾ ಸಿಂಗ್ ಕಾಣಿಸಿಕೊಂಡಿದ್ದರು. ಅತಿಥಿ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಮಿಂಚಿದ್ದರು.

  ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವ ಪವರ್ ಸ್ಟಾರ್

  ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವ ಪವರ್ ಸ್ಟಾರ್

  ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುವ ಸಾಧ್ಯತೆ ಇದೆ. ಈಗಾಗಲೇ ಪುನೀತ್ ರಾಜ್ ಕುಮಾರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಪವರ್ ಸ್ಟಾರ್ ಸಹ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾತಂಡದಿಂದ ಅಧಿಕೃತ ಘೋಷಣೆಯೊಂದೆ ಭಾಕಿ ಇದೆ.

  ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು

  ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್

  ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್

  ನಾಗೇಂದ್ರ ಪ್ರಸಾದ್ ಖ್ಯಾತ ನಟ ಮತ್ತು ನೃತ್ಯ ಸಂಯೋಜಕ ಮುಗೂರ್ ಸುಂದರ್ ಅವರ ಪುತ್ರ ಹಾಗೂ ಖ್ಯಾತ ನಿರ್ದೇಶಕ ಮತ್ತು ಡ್ಯಾನ್ಸರ್ ಪ್ರಭುದೇವ ಅವರ ಸಹೋದರ. ನಾಗೇಂದ್ರ ಪ್ರಸಾದ್ ಈಗಾಗಲೇ ತಮಿಳು ಸಿನಿಮಾಗಳಲ್ಲಿ ಕೆಲಸ ಸಕ್ರೀಯರಾಗಿದ್ದಾರೆ. ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ 123, ಮನಸೆಲ್ಲಾ ನೀನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ನಾಗೇಂದ್ರ ಪ್ರಸಾದ್ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

  ಈಗಾಗಲೇ ಪುನೀತ್ ಜೊತೆ ನಟಿಸಿರುವ ಕೃಷ್ಣ

  ಈಗಾಗಲೇ ಪುನೀತ್ ಜೊತೆ ನಟಿಸಿರುವ ಕೃಷ್ಣ

  ಅಂದಹಾಗೆ ಕೃಷ್ಣ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಕೆಲಸ ಮಾಡಿದ್ದಾರೆ. ಪವರ್ ಸ್ಟಾರ್ ನಟನೆಯ ಜಾಕಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದರು. ಬಳಿಕ ಪವರ್ ಸ್ಟಾರ್ ನಟನೆಯ ಹುಡುಗರು ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.

  ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ

  ದರ್ಶನ್ ಫಾರ್ಮ್ ಹೌಸ್ ನೋಡಿ BC ಪಾಟೀಲ್ ಫುಲ್ ಹ್ಯಾಪಿ | Filmibeat Kannada
  ಕೃಷ್ಣ ಬಳಿ ಇರುವ ಸಿನಿಮಾಗಳು

  ಕೃಷ್ಣ ಬಳಿ ಇರುವ ಸಿನಿಮಾಗಳು

  ಕೃಷ್ಣ ಸದ್ಯ ಲವ್ ಮಾಕ್ಟೇಲ್-2 ಸಿನಿಮಾದ ನಿರ್ದೇಶನದ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ಉಳಿದಂತೆ ಶುಗರ್ ಫ್ಯಾಕ್ಟರಿ, ShriKrishna@gmail.com, ವರ್ಜಿನ್ ಸೇರಿದಂತೆ ಕೆಲವು ಸಿನಿಮಾಗಳು ಕೃಷ್ಣ ಕೈಯಲ್ಲಿವೆ. ಫೆಬ್ರವರಿ 14ರಂದು ಕೃಷ್ಣ ಬಹುಕಾಲದ ಗೆಳತಿ ಮತ್ತು ನಟಿ ಮಿಲನಾ ನಾಗರಾಜ್ ಜೊತೆ ಹಸೆಮಣೆ ಏರುತ್ತಿದ್ದಾರೆ.

  English summary
  Power star Puneeth Rajkumar, Krishna to act in Nagendra Prasad’s directorial debut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X