For Quick Alerts
  ALLOW NOTIFICATIONS  
  For Daily Alerts

  ತಪ್ಪದೆ ಓಟ್ ಮಾಡಿ ಎಂದಿದ್ದ ಪುನೀತೇ ಓಟಾಕಿರಲಿಲ್ಲ!

  By ಉದಯರವಿ
  |

  ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚುನಾವಣಾ ಆಯೋಗದ ರಾಯಭಾರಿಯಾಗಿ ಕೆಲಸ ಮಾಡಿದ್ದರು. "ನಾನು ಓಟ್ ಮಾಡುತ್ತೇನೆ, ನೀವೂ? ತಪ್ಪದೆ ಓಟ್ ಮಾಡಿ" ಎಂದು ಜಾಹೀರಾತಿನಲ್ಲಿ ಕಾಣಿಸಿಕೊಂಡು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು.

  ವಿಚಿತ್ರ ಎಂದರೆ ಎಲ್ಲರಿಗೂ ಓಟ್ ಮಾಡಿ ಎಂದಿದ್ದ ಪುನೀತ್ ಅವರೇ ಮತದಾನ ಮಾಡಿರಲಿಲ್ಲ. 2013ರ ವಿಧಾನಸಭಾ ಚುನಾವಣೆ ವೇಳೆ ಮತದಾರರನ್ನು ಮತಗಟ್ಟೆಗೆ ಆಕರ್ಷಿಸುವ ಸಲುವಾಗಿ ಪುನೀತ್, ರಮೇಶ್ ಅರವಿಂದ್ ಹಾಗೂ ಐಂದ್ರಿತಾ ರೇ ಅವರನ್ನು ಚುನಾವಣಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಗೊತ್ತೇ ಇದೆ. ['ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್]

  ಆದರೆ ಮತದಾನದ ದಿನ ಚಿತ್ರೀಕರಣ ನಿಮಿತ್ತ ಪುನೀತ್ ಸಿಂಗಪುರಕ್ಕೆ ಹೋಗಿದ್ದ ಕಾರಣ ಓಟ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಟೀಕೆಗಳೂ, ಅಪಸ್ವರಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣಾ ಆಯೋಗ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ.

  ಇನ್ನೊಂದು ಕಡೆ ಪುನೀತ್ ಅವರ ಅತ್ತಿಗೆ ಹಾಗೂ ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್ ಪಕ್ಷದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ಪುನೀತ್ ಅವರನ್ನು ಚುನಾವಣಾ ರಾಯಭಾರಿ ಜವಾಬ್ದಾರಿಯಿಂದ ಕೈಬಿಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

  ಈ ಬಗ್ಗೆ ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನಿಲ್ ಕುಮಾರ್ ಝಾ, ಸದ್ಯಕ್ಕೆ ನಾವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯದಲ್ಲಿ ಬಿಜಿಯಾಗಿದ್ದೇವೆ. ಯಾವ ಸಿನಿಮಾ ತಾರೆಗಳನ್ನು ಚುನಾವಣಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

  English summary
  This time Power Star Puneeth Rajkumar may not be Election commissioner brand ambassador. Because last time Puneeth himself abstained from voting and his sister-in-law Geetha Shivrajkumar is to contest as JD(S) candidate from Shimoga, Puneeth is likely to lose a chance of being Brand Ambassador. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X