»   » ಆರಂಭದಲ್ಲೇ ಪುನೀತ್ ಚಿತ್ರಕ್ಕೆ ಭರ್ಜರಿ ರೇಟ್

ಆರಂಭದಲ್ಲೇ ಪುನೀತ್ ಚಿತ್ರಕ್ಕೆ ಭರ್ಜರಿ ರೇಟ್

Posted By:
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಬಾಕ್ಸ್ ಆಫೀಸ್ ಕಿಂಗ್ ಎನ್ನುವುದು ಮತ್ತೆ ಸಾಬೀತಾಗಿದೆ. ಅಣ್ಣಾಬಾಂಡ್ ನಂತರ ಪುನೀತ್ ನಟಿಸುತ್ತಿರುವ 'ಯಾರೇ ಕೂಗಾಡಲಿ' ಚಿತ್ರಕ್ಕೆ ಭರ್ಜರಿ ಸ್ಯಾಟಲೈಟ್ ಹಕ್ಕು ದೊರೆತಿದೆ. ಪುನೀತ್ ಹಾಗೂ ಲೂಸ್ ಮಾದ ಯೋಗೇಶ್ ನಟನೆಯ, ಇತ್ತೀಚಿಗಷ್ಟೇ ಚಿತ್ರೀಕರಣ ಪ್ರಾರಂಭವಾಗಿರುವ ಯಾರೇ ಕೂಗಾಡಲಿ ಚಿತ್ರದ ಪ್ರಸಾರದ ಹಕ್ಕನ್ನು ಭಾರೀ ಮೊತ್ತ ರು. 4.5 ಕೋಟಿಗೆ ಖಾಸಗಿ ಚಾನೆಲ್ಲೊಂದು ಖರೀದಿಸಿದೆ.

ತಮಿಳು ಚಿತ್ರ ಪೊರಾಲಿ ರೀಮೇಕ್ ಈ ಚಿತ್ರವನ್ನು ಮೂಲ ಚಿತ್ರದ ನಿರ್ದೇಶಕ ಸಮುತ್ತಿರಕನಿ ಅವರೇ ಕನ್ನಡದಲ್ಲೂ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ಜಾಕಿ ಖ್ಯಾತಿಯ ಭಾವನಾ ನಟಿಸುತ್ತಿದ್ದರೆ ಯೋಗೇಶ್ ಜೋಡಿಯಾಗಿ 'ಲೈಫು ಇಷ್ಟೇನೆ' ಖ್ಯಾತಿಯ ಸಿಂಧು ಲೋಕನಾಥ್ ಇದ್ದಾರೆ.

ಶೂಟಿಂಗ್ ಮುಗಿದರೂ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗದೇ ಒದ್ದಾಡುವ ಚಿತ್ರಗಳ ಮಧ್ಯೆ ಪುನೀತ್ ರಾಜ್ ಕುಮಾರ್ ಚಿತ್ರಗಳು ಮುಹೂರ್ತ ನಡೆದು ಚಿತ್ರೀಕರಣ ಶುರುವಾಗುತ್ತಿದ್ದಂತೆ ತಕ್ಷಣ ಮಾರಾಟವಾಗಿಬಿಡುತ್ತವೆ. ಇದು ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಇರುವ ಬೇಡಿಕೆ ತೋರಿಸುವುದಷ್ಟೇ ಅಲ್ಲ, ಚಿತ್ರಂಗಕ್ಕೂ ಟಾನಿಕ್ ಆಗಿದೆ.

ಸಿಕ್ಕ ಸುದ್ದಿ ಪ್ರಕಾರ, ಯಾರೇ ಕೂಗಾಡಲಿ ಚಿತ್ರದ ಪ್ರಸಾರ ಹಕ್ಕುಗಳನ್ನು 4.5 ಕೋಟಿ ರು. ಗಳಿಗೆ ಖರೀದಿಸಿರುವುದು ಕನ್ನಡದ ಮನರಂಜನೆ ವಾಹಿನಿಗಳಲ್ಲೊಂದು. ಇತ್ತೀಚಿಗೆ ಟಿವಿ ಚಾನೆಲ್ ಗಳು ಬೇಕಾಬಿಟ್ಟಿ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸುವುದನ್ನು ನಿಲ್ಲಿಸಿವೆ. ಸ್ಟಾರ್ ನಟರು ಅಥವಾ ನಿರ್ದೇಶಕರ ಚಿತ್ರಗಳಿಗೆ ಮಾತ್ರ ಮಣೆ ಹಾಕುವುದನ್ನು ಕಲಿತಿವೆ. ಖರೀದಿ ನಂತರ ಜಾಹೀರಾತು ಬರದಿದ್ದರೆ ಪೇಚಾಟ ಅನುಭವಿಸಲು ಅವು ಸಿದ್ಧವಿಲ್ಲ.

ಪುನೀತ್ ಚಿತ್ರ ಅಣ್ಣಾಬಾಂಡ್ ಚಿತ್ರವೂ ಭಾರೀ ಮೊತ್ತಕ್ಕೇ (ರು. 4 ಕೋಟಿ) ಸೇಲ್ ಆಗಿತ್ತು. ಆದರೆ ಕನ್ನಡದಲ್ಲಿ ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ 'ಸಂಗೊಳ್ಳಿ ರಾಯಣ್ಣ', ಭರ್ಜರಿ '6 ಕೋಟಿ' ರು. ಸ್ಯಾಟಲೈಟ್ ರೇಟ್ ಗಳಿಸಿ ದಾಖಲೆ ನಿರ್ಮಿಸಿದೆ. ದರ್ಶನ್, ಪುನೀತ್ ಬಿಟ್ಟರೆ ಉಪೇಂದ್ರ, ಹೊಸ ಸೌತ್ ಸ್ಟಾರ್ ಸುದೀಪ್, ಶಿವರಾಜ್ ಕುಮಾರ್ ಮುಂತಾದವರ ಚಿತ್ರಗಳಿಗೆ ಮಾತ್ರ ಬೇಡಿಕೆಯಿದೆ. ಮಿಕ್ಕವು ಬಿಡುಗಡೆ ಬಳಿಕ ಸೇಲಾದರೆ ಹೆಚ್ಚು ಎನ್ನುವಂತಾಗಿದೆ. (ಒನ್ ಇಂಡಿಯಾ ಕನ್ನಡ)

English summary
Power Star Puneeth Rajkumar upcoming movie 'Yaare Koogadali' Satellite Rights Sold out for big amount, Rs. 4 Crores. Kannada Populer entertainment channel has purchased it, as the news sources are reviled. 
 
Please Wait while comments are loading...