»   » ಮುಂಚಿನಂತೆ ಈಗಿಲ್ಲ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್!

ಮುಂಚಿನಂತೆ ಈಗಿಲ್ಲ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್!

Posted By:
Subscribe to Filmibeat Kannada

ಸೈಲೆಂಟ್ ಆಗಿ ತೆರೆಗೆ ಬಂದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರೂ ಪುನೀತ್ ಚಿತ್ರಗಳಿಗಿರುವ ಪವರ್ರೇ ಬೇರೆ.

ಇದೇ ಕಾರಣಕ್ಕೆ, ''ಅಣ್ಣಾವ್ರ ಮಗ ಗಾಂಧಿನಗರದಲ್ಲಿ ಬಲು ದುಬಾರಿ. ಹೋಮ್ ಬ್ಯಾನರ್ ಬಿಟ್ಟರೆ, ಬೇರೆ ಪ್ರೊಡಕ್ಷನ್ ಸಂಸ್ಥೆಗಳಿಗೆ ಅಪ್ಪು 'ನಿಲುಕದ ನಕ್ಷತ್ರ'. ಅವರ ಕಾಲ್ ಶೀಟ್ ಬರೀ ಪ್ರಖ್ಯಾತ ನಿರ್ದೇಶಕರಿಗೆ ಮಾತ್ರ ಮೀಸಲು.'' ಅಂತ 'ದೂರು'ವ ಕಾಲವೊಂದಿತ್ತು.


ಆದ್ರೀಗ ಕಾಲ ಬದಲಾಗಿದೆ. ಅಪ್ಪು ಈಗ ಮುಂಚಿನಂತಿಲ್ಲ. ಪುನೀತ್ ರಾಜ್ ಕುಮಾರ್ ತುಂಬಾ ಬದಲಾಗಿದ್ದಾರೆ. ಬರೀ 'ವಜ್ರೇಶ್ವರಿ ಸಂಸ್ಥೆ'ಗೆ ಮಾತ್ರ ಪುನೀತ್ ಕಾಲ್ ಶೀಟ್ ಕೊಡುತ್ತಿಲ್ಲ. ಒಳ್ಳೆ ಕಥೆಯನ್ನ ಯಾರೇ ತೆಗೆದುಕೊಂಡು ಹೋದರೂ ಅಪ್ಪು ಡೇಟ್ಸ್ ಗ್ಯಾರೆಂಟಿ.


ಬೇಕಾದ್ರೆ, ಪುನೀತ್ ಇತ್ತೀಚೆಗೆ ಒಪ್ಪಿಕೊಂಡಿರುವ ಸಿನಿಮಾಗಳ ಪಟ್ಟಿ ನೋಡಿ, ಯುವ ನಿರ್ದೇಶಕರಿಗೆ ಪುನೀತ್ ಎಷ್ಟು ಫಿದಾ ಆಗಿದ್ದಾರೆ ಅಂತ ನಿಮ್ಗೆ ಗೊತ್ತಾಗುತ್ತೆ..! ಮುಂದೆ ಓದಿ....


ಗಿರಿರಾಜ್ ಜೊತೆ 'ಮೈತ್ರಿ'

'ಮೈತ್ರಿ' ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ನಿರ್ದೇಶಕ ಗಿರಿರಾಜ್ ಪರಿಚಯ ಗಾಂಧಿನಗರದ ಮಂದಿಗೆ ಇರಲಿಲ್ಲ. ಅದಾಗಲೇ, 'ಅದ್ವೈತ', 'ಜಟ್ಟ' ಚಿತ್ರಗಳನ್ನ ನಿರ್ದೇಶಿಸಿ ಪ್ರಶಸ್ತಿ ಪಡೆದಿದ್ದ ಗಿರಿರಾಜ್, 'ಮೈತ್ರಿ' ಅಂತಹ ಸದಭಿರುಚಿಯ ಚಿತ್ರಕಥೆಯನ್ನ ಹೊತ್ತು ತಂದಿದ್ದಕ್ಕೆ ಅಣ್ಣಾವ್ರ ಮಗನಿಂದ ಪ್ರೀತಿಯ 'ಅಪ್ಪು'ಗೆ ಸಿಕ್ಕಿತು. ['ಮೈತ್ರಿ' ಚಿತ್ರದ ನಿರ್ದೇಶಕ ಗಿರಿರಾಜ್ ವಿಶೇಷ ಸಂದರ್ಶನ]


ಪವನ್ ಒಡೆಯರ್ 'ರಣವಿಕ್ರಮ'

ಪುನೀತ್ ಅಭಿನಯದ ಮುಂಬರುವ ಚಿತ್ರ 'ರಣವಿಕ್ರಮ' ನಿರ್ದೇಶಕ ಪವನ್ ಒಡೆಯರ್. 'ಗೋವಿಂದಾಯ ನಮಃ' ಮತ್ತು 'ಗೂಗ್ಲಿ' ಚಿತ್ರವನ್ನ ನಿರ್ದೇಶಿಸಿ ಗೆದ್ದಿರುವ ಪವನ್, ಮೂರನೇ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಕಾಲ್ ಶೀಟ್ ಗಿಟ್ಟಿಸಿದ್ದಾರೆ. ಈಗಾಗಲೇ 'ರಣವಿಕ್ರಮ' ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಸದ್ಯದಲ್ಲೇ ತೆರೆಮೇಲೆ 'ರಣವಿಕ್ರಮ'ನ ಆರ್ಭಟ ಶುರುವಾಗಲಿದೆ. ['ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು ]


'ರಾಮಾಚಾರಿ' ಸಂತೋಷ್ ಅನಂದರಾಮ್

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಸದ್ಯ ಧೂಳೆಬ್ಬಿಸಿರುವ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ'. ಮೊದಲ ಸಿನಿಮಾದಲ್ಲೇ ಸೂಪರ್ ಡ್ಯೂಪರ್ ಹಿಟ್ ಕೊಟ್ಟಿರುವ ನಿರ್ದೇಶಕ ಸಂತೋಷ್ ಅನಂದರಾಮ್, ಎರಡನೇ ಚಿತ್ರದಲ್ಲಿ ಆಕ್ಷನ್ ಕಟ್ ಹೇಳುತ್ತಿರುವುದು ಪುನೀತ್ ಗೆ. [ರಾಮಾಚಾರಿ ಡೈರೆಕ್ಟರ್ ಪುನೀತ್ ಗೆ ಆಕ್ಷನ್ ಕಟ್]


ಪ್ರಶಾಂತ್ ನೀಲ್ ಗೆ 'ಆಹ್ವಾನ'

'ಉಗ್ರಂ' ಸಕ್ಸಸ್ ಫುಲ್ ಆದ್ಮೇಲೆ ನಿರ್ದೇಶಕ ಪ್ರಶಾಂತ್ ನೀಲ್ ಈಗ ಸ್ಕ್ರಿಪ್ಟ್ ಮಾಡುತ್ತಿರುವುದು ಅಣ್ಣಾವ್ರ ಮುದ್ದಿನ ಮಗನಿಗಾಗಿ. 'ಆಹ್ವಾನ' ಅಂತ ಈಗಾಗಲೇ ಟೈಟಲ್ ಕೂಡ ಫಿಕ್ಸ್ ಮಾಡಿರುವ ಪ್ರಶಾಂತ್ ನೀಲ್, ಅಪ್ಪು ಜೊತೆ ಕೆಲಸ ಮಾಡುವುದಕ್ಕೆ ಉತ್ಸುಕರಾಗಿದ್ದಾರೆ.


ಚೇತನ್ ಜೊತೆ 'ಜೇಮ್ಸ್'

ಧೃವ ಸರ್ಜಾ ಗೆ 'ಬಹದ್ದೂರ್' ಅಂತಹ ಹಿಟ್ ಸಿನಿಮಾ ಕೊಟ್ಟ ಯುವ ನಿರ್ದೇಶಕ ಚೇತನ್ ಈಗ ಪುನೀತ್ ರಾಜ್ ಕುಮಾರ್ ಗೆ 'ಜೇಮ್ಸ್' ಅನ್ನುವ ಸಿನಿಮಾ ಮಾಡ್ತಿದ್ದಾರೆ. ಪಕ್ಕಾ ಕಮರ್ಶಿಯಲ್ ಸಿನಿಮಾ 'ಜೇಮ್ಸ್' ಕಥೆ ಕೇಳಿ ಇಂಪ್ರೆಸ್ ಆದ ಅಪ್ಪು 'ಹ್ಹೂಂ' ಅಂದಿರುವುದಕ್ಕೆ ಉತ್ಸಾಹದಿಂದ ಪ್ರೀ-ಪ್ರೊಡಕ್ಷನ್ ವರ್ಕ್ ಗೆ ಚಾಲನೆ ನೀಡಿದ್ದಾರೆ ಚೇತನ್. [ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ 'ಜೇಮ್ಸ್']


ಕಾಲಿವುಡ್ ಶರವಣನ್ ಗೂ ಅಪ್ಪು ಗ್ರೀನ್ ಸಿಗ್ನಲ್

ಕಾಲಿವುಡ್ ನಲ್ಲಿ 'ಎಂಗೆಯುಂ ಎಪ್ಪೋಧುಮ್' ಸಿನಿಮಾ ಮಾಡಿ ಯಶಸ್ಸು ಗಳಿಸಿದ್ದ ನಿರ್ದೇಶಕ ಶರವಣನ್, ಕನ್ನಡ ಕಾಲಿಡುತ್ತಿರುವುದು ತಮ್ಮ ಚಿತ್ರಕ್ಕೆ ಅಪ್ಪು ಗ್ರೀನ್ ಸಿಗ್ನಲ್ ಕೊಟ್ಟಿರುವ ಕಾರಣದಿಂದ. ತಮಿಳಿನಲ್ಲಿ ಎರಡೇ ಸಿನಿಮಾ ಮಾಡಿರುವ ಶರವಣನ್, ಇದೀಗ ಕನ್ನಡ ಚಿತ್ರದ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತಿದ್ದಾರೆ. [ಪುನೀತ್ ಮುಂದಿನ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕರು ಬರ್ತಾರೆ!]


ಯುವ ಪ್ರತಿಭೆಗಳಿಗೆ ಪುನೀತ್ ಮಣೆ

''ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಕನ್ನಡ ಚಿತ್ರರಂಗದ ಉದ್ಧಾರ ಸಾಧ್ಯ'' ಅಂತ ಹಿಂದೊಮ್ಮೆ ಅಪ್ಪಾಜಿ ಹೇಳಿದ್ದರು. ಅದನ್ನ ಚಾಚೂ ತಪ್ಪದೆ ಪಾಲಿಸುತ್ತಿರುವ ಪುನೀತ್ ರಾಜ್ ಕುಮಾರ್, 'ಹೊಸಬರು' ಅನ್ನುವ ರಿಸ್ಕ್ ಇಲ್ಲದೆ ಹುಮ್ಮಸ್ಸಿನಿಂದ ಕಥೆ ಹೊತ್ತು ಬಂದವರಿಗೆ ಮಣೆ ಹಾಕುತ್ತಿದ್ದಾರೆ.


English summary
Kannada Actor Puneeth Rajkumar has taken a new stand to support New, Young and Talented directors of Sandalwood. By giving nod to Chethan of 'Bahaddur' fame, Director Prashanth Neel, Santhosh Ananddram, Power Star is setting a new trend in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada