For Quick Alerts
  ALLOW NOTIFICATIONS  
  For Daily Alerts

  ನಿತ್ಯೋತ್ಸವ ಕವಿಯ ನೆನೆದ ಪುನೀತ್: ನಿಸಾರ್ ಅವರಿಗಿತ್ತು ದೊಡ್ಮನೆಯೊಂದಿಗೆ ಆಪ್ತತೆ

  |

  ನಿಸಾರ್ ಅಹ್ಮದ್ ಅಗಲಿಕೆಗೆ ಕವಿಗಳು, ಸಾಹಿತ್ಯ ವಿದ್ಯಾರ್ಥಿಗಳು, ರಾಜಕಾರಣಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೂ ಸಹ ಅಗಲಿದ ಕವಿಗೆ ಅಂತಿಮ ವಂದನೆಯನ್ನು ಟ್ವಿಟ್ಟರ್‌ನಲ್ಲಿ ಸಲ್ಲಿಸಿದ್ದಾರೆ.

  "ನಿತ್ಯೋತ್ಸವ ಸಾಲುಗಳು" ನೀಡಿದ ಕನ್ನಡದ ಮಹಾನ್ ಕವಿ ಪದ್ಮಶ್ರೀ ಕೆ. ಎಸ್. ನಿಸಾರ್ ಅಹಮದ್ ಸರ್ ಇನ್ನಿಲ್ಲ! ಸಾಹಿತ್ಯಲೋಕಕ್ಕೆ ಅವರ ಕೊಡುಗೆ ಅಜರಾಮರ! ಎಂದು ಪುನೀತ್ ನಿಸಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

  ಅಣ್ಣಾವ್ರ ಕುಟುಂಬದೊಂದಿಗೆ ಇತ್ತು ಆಪ್ತತೆ

  ಅಣ್ಣಾವ್ರ ಕುಟುಂಬದೊಂದಿಗೆ ಇತ್ತು ಆಪ್ತತೆ

  ಅಣ್ಣಾವ್ರ ಕುಟುಂಬಕ್ಕೆ ಮತ್ತು ನಿಸಾರ್ ಅಹ್ಮದ್ ಅವರಿಗೆ ಆಪ್ತ ಸಂಬಂಧವಿದೆ. ರಾಜ್‌ ಕುಮಾರ್ ಅವರ ಆಪ್ತ ಗೆಳೆಯರಾಗಿದ್ದರು ನಿಸಾರ್ ಅಹ್ಮದ್. ನಿಸಾರ್ ಅವರನ್ನು ಹಲವು ಬಾರಿ ಊಟಕ್ಕೆ ಆಹ್ವಾನಿಸಿ ಸತ್ಕರಿಸಿದ್ದರಂತೆ ರಾಜ್‌ಕುಮಾರ್ ಮತ್ತು ಕುಟುಂಬ.

  ಸಿನಿಮಾ ರಂಗದಿಂದ ಹೆಚ್ಚೇನೂ ದೂರವಿರಲಿಲ್ಲ

  ಸಿನಿಮಾ ರಂಗದಿಂದ ಹೆಚ್ಚೇನೂ ದೂರವಿರಲಿಲ್ಲ

  ನಿಸಾರ್ ಅವರು ಸಿನಿಮಾ ರಂಗದಿಂದ ಹೆಚ್ಚೇನೂ ದೂರವಿರಲಿಲ್ಲ. ಅವರದ್ದೇ ಕವಿತೆಯ ಸಾಲುಗಳನ್ನು ಆಧರಿಸಿ 'ಕುರಿಗಳು ಸಾರ್ ಕುರಿಗಳು' ಸಿನಿಮಾ ಸಹ ನಿರ್ಮಾಣವಾಗಿದೆ. ಚಿತ್ರರಂಗದ ಹಲವು ನಿರ್ದೇಶಕರು, ಬರಹಗಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ನಿಸಾರ್.

  ರೀಮೇಕ್ ವಿರೋಧಿಯಾಗಿದ್ದರು ನಿಸಾರ್

  ರೀಮೇಕ್ ವಿರೋಧಿಯಾಗಿದ್ದರು ನಿಸಾರ್

  ರಾಜೇಂದ್ರ ಸಿಂಗ್ ಬಾಬು ಹೇಳಿದಂತೆ, ನಿಸಾರ್ ಅವರನ್ನು ಚಿತ್ರರಂಗದ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿದ್ದೆವು, ಅವರು ತಪ್ಪದೇ ಬರುತ್ತಿದ್ದರು. ರೀಮೇಕ್ ಮಾಡುವುದಕ್ಕೆ ನಿಸಾರ್ ಅವರ ವಿರೋಧವಿತ್ತಂತೆ. ಕನ್ನಡದಲ್ಲಿಯೇ ಹಲವು ಒಳ್ಳೆಯ ಕತೆಗಳಿವೆ ಅವನ್ನೇ ಸಿನಿಮಾ ಮಾಡಿ ರೀಮೇಕ್ ಮಾಡಬೇಡಿ ಎನ್ನುತ್ತಿದ್ದರಂತೆ.

  ಹಲವರು ಅಂತಿಮ ನಮನ ಸಲ್ಲಿಸಿದ್ದರು

  ಹಲವರು ಅಂತಿಮ ನಮನ ಸಲ್ಲಿಸಿದ್ದರು

  ಅಗಲಿದ ನಿತ್ಯೋತ್ಸವ ಕವಿಗೆ, ಪುನೀತ್ ರಾಜ್‌ಕುಮಾರ್, ಯೋಗರಾಜ್ ಭಟ್ ನಮನ ಸಲ್ಲಿಸಿದ್ದಾರೆ. ರಾಜಕಾರಣಿಗಳು, ಕವಿಗಳು ಅಂತಿಮ ವಂದನೆ ಸಲ್ಲಿಸಿದ್ದಾರೆ.

  English summary
  Actor Puneeth Rajkumar remembers poet Nisar Ahmed in twitter. He passed away today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X