»   » ಸ್ಕಾಟ್ಲೆಂಡಿನಲ್ಲಿ ಕುಣಿದು ಕುಪ್ಪಳಿಸಿದ ಪುನೀತ್-ರಶ್ಮಿಕಾ

ಸ್ಕಾಟ್ಲೆಂಡಿನಲ್ಲಿ ಕುಣಿದು ಕುಪ್ಪಳಿಸಿದ ಪುನೀತ್-ರಶ್ಮಿಕಾ

Posted By:
Subscribe to Filmibeat Kannada

ಕಳೆದ ಒಂದು ವಾರದಿಂದ ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಸ್ಕಾಟ್ಲೆಂಡ್ ಗೆ ಹಾರಿದ್ದಾರೆ. ರಾಜಸ್ಥಾನದಲ್ಲಿ ಕೆಲವು ಮುಖ್ಯವಾದ ದೃಶ್ಯಗಳನ್ನ ಚಿತ್ರೀಕರಿಸಿದ್ದ 'ಅಂಜನಿಪುತ್ರ' ಈಗ ಹಾಡಿನ ಶೂಟಿಂಗ್ ಗಾಗಿ ಸ್ಕಾಟ್ಲೆಂಡ್ ತಲುಪಿದೆ.

ಸ್ಕಾಟ್ಲೆಂಡಿನ ಸುಂದರ ತಾಣಗಳಲ್ಲಿ ಅಂಜನಿಪುತ್ರದ ಎರಡು ಹಾಡುಗಳನ್ನ ಚಿತ್ರೀಕರಿಸಲು ನಿರ್ಧರಿಸಿದ್ದು, ಇಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಪುನೀತ್-ರಶ್ಮಿಕಾ ಸ್ಕಾಟ್ಲೆಂಡಿನಲ್ಲಿ ಡ್ಯಾನ್ಸ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

ರಾಜಸ್ಥಾನದಲ್ಲಿ ಪವರ್ ಸ್ಟಾರ್ ಒಂಟೆ ಸವಾರಿ

Puneeth Rajkumar's Anjaniputra shooting in scotland

ಇದಕ್ಕು ಮುಂಚೆ ರಾಜಸ್ಥಾನದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನ ಸೆರೆ ಹಿಡಿಯಲಾಗಿದೆ. ಬಾಲಿವುಡ್ ನಟ ಮುಖೇಶ್ ತಿವಾರಿ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ.

ಪುನೀತ್ 'ಮನೆ'ಯಿಂದ ಹೊರಬಿತ್ತು 'ಬಿಗ್' ಸಿನಿಮಾ ಸುದ್ದಿ

Puneeth Rajkumar's Anjaniputra shooting in scotland

ಹರ್ಷ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ, ಹರಿಪ್ರಿಯಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರವಿಬಸ್ರೂರು ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.

English summary
Puneeth Rajkumar and Rashmika Mandanna starrer Anjaniputra shooting in scotland. the Movie Directed by Harsha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada