Don't Miss!
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- News
ಚಾಮರಾಜನಗರ: ಹರ್ ಘರ್ ತಿರಂಗ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು
- Technology
ಈ ಫೋನ್ಗಳಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಇದೆ!..ಫೋನ್ ಬೆಲೆಯೂ ಕಡಿಮೆ!
- Sports
ರಿಷಭ್ ಪಂತ್ ಪೋಸ್ಟ್ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ
- Finance
ಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್ಗೆ ಎಚ್ಡಿಎಫ್ಸಿ ಅವಕಾಶ
- Automobiles
ಅಗಸ್ಟ್ 20ರಂದು ಬಿಡುಗಡೆಯಾಗಲಿದೆ ಹೊಸ ಸೌಲಭ್ಯ ಒಳಗೊಂಡ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ನವೆಂಬರ್‌ಗೆ ಆಗಮಿಸಲಿದ್ದಾರೆ 'ಗಂಧದ ಗುಡಿ'ಯ 'ರಾಜಕುಮಾರ'
ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಇನ್ನೂ ಚೇತರಿಸಿಕೊಂಡಿಲ್ಲ. ಅಪ್ಪು ಅಭಿಮಾನಿಗಳ ಮನದಲ್ಲಿ ಇನ್ನೂ ಸೂತಕದ ಛಾಯೆ ಹಸಿಯಾಗಿದೆ.
ಅಪ್ಪು ಅಗಲಿಕೆಯ ಬಳಿಕ ಅವರ ಸಿನಿಮಾಗಳ ಮೂಲಕ ಅವರನ್ನು ಮತ್ತೆ ಕಣ್ತುಂಬಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ಬಿಡುಗಡೆ ಆದ 'ಜೇಮ್ಸ್' ಸಿನಿಮಾವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು ಇದಕ್ಕೆ ಉದಾಹರಣೆ.
ಪುನೀತ್
ಕೊನೆಯ
ಸಿನಿಮಾ
'ಜೇಮ್ಸ್'
ನಿರ್ಮಾಪಕ
ಆಸ್ಪತ್ರೆಗೆ
ದಾಖಲು:
ಹೇಗಿದೆ
ಸ್ಥಿತಿ?
'ಜೇಮ್ಸ್' ಸಿನಿಮಾದ ಬಳಿಕ ಮತ್ತೊಮ್ಮೆ ಪುನೀತ್ ರಾಜ್‌ಕುಮಾರ್ ಅವರನ್ನು ತೆರೆಯ ಮೇಲೆ ಯಾವಾಗ ನೋಡುವೆಯೋ ಎಂದು ಕಾದಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇದೀಗ ಹೊರಬಿದ್ದಿದೆ.
ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಿ, ತಾವು ತಾವಾಗಿಯೇ ಕಾಣಿಸಿಕೊಂಡಿರುವ 'ಗಂಧದ ಗುಡಿ' ಡಾಕ್ಯುಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರಲಿದೆ.
ಹಲವು ಉತ್ತಮ ಹವ್ಯಾಸಗಳನ್ನು ಹೊಂದಿದ್ದ ಪುನೀತ್ ರಾಜ್‌ಕುಮಾರ್‌ಗೆ ಪ್ರವಾಸದ ಹವ್ಯಾಸವೂ ಇತ್ತು. ಕರ್ನಾಟಕದ ಪರಿಸರ ಸಂಪತ್ತಿನ ಬಗ್ಗೆಯೂ ಗೌರವವೂ ಇದ್ದ ಪುನೀತ್, ರಾಜ್ಯದ ಪ್ರಕೃತಿ ಸಂಪತ್ತನ್ನು, ರಾಜ್ಯದ ನೈಸರ್ಗಿಕ ಭಿನ್ನತೆಯನ್ನು ಪರಿಚಯಿಸುವ ದೃಷ್ಟಿಯಿಂದ ರಾಜ್ಯದ ಹಲವು ಪ್ರದೇಶಗಳನ್ನು ಅಡ್ಡಾಡಿ ಡಾಕ್ಯುಸಿನಿಮಾ ಮಾಡಿದ್ದು, ಅದಕ್ಕೆ 'ಗಂಧದ ಗುಡಿ' ಎಂದು ಹೆಸರಿಟ್ಟಿದ್ದಾರೆ.
ಈ ಡಾಕ್ಯು ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಭಾರಿ ವೈರಲ್ ಆಗಿದೆ. ಕರ್ನಾಟಕದ ಸಿನಿಮಾ ತಾರೆಯರು ಸೇರಿದಂತೆ ನೆರೆ ರಾಜ್ಯದ ತಾರೆಯರು, ಅಭಿಮಾನಿಗಳು, ಪ್ರಕೃತಿ ಪ್ರೇಮಿಗಳು ಈ ಡಾಕ್ಯುಸಿನಿಮಾದ ಬಿಡುಗಡೆಗೆ ಕಾತರರಾಗಿ ಕಾಯುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಇಬ್ಬರು ರಾಜ್ಯದ ಹಲವು ಮೂಲೆಗಳನ್ನು ಸುತ್ತಿ ಈ ಡಾಕ್ಯುಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಈ ಡಾಕ್ಯುಸಿನಿಮಾಕ್ಕೆ ಪಿಆರ್‌ಕೆ ಬಂಡವಾಳ ಹೂಡಿದ್ದು, ಸಿನಿಮಾವನ್ನು ಅವರೇ ಬಿಡುಗಡೆ ಮಾಡಲಿದ್ದಾರೆ.
ಪುನೀತ್ ಅಗಲಿಕೆಯ ಬಳಿಕವೂ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ದೊಡ್ಡ ಮಟ್ಟದಲ್ಲಿ ಈ ಡಾಕ್ಯುಸಿನಿಮಾವನ್ನು ಬಿಡುಗಡೆ ಮಾಡಲು ಪಿಆರ್‌ಕೆಯ ಪ್ರಸ್ತುತ ಮಾಲಕಿ, ನಿರ್ವಾಹಕಿ, ಪುನೀತ್ ಮಡದಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಧರಿಸಿದ್ದು, ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದೇ ಸಿನಿಮಾ ತೆರೆಗೆ ಬಂದರೂ ಅಚ್ಚರಿ ಇಲ್ಲ.
ಪುನೀತ್ ರಾಜ್‌ಕುಮಾರ್ ನಿಧನವಾಗುವ ಮುನ್ನ ನಟಿಸಿದ್ದ ಇನ್ನೊಂದು ಸಿನಿಮಾ ಸಹ ತೆರೆಗೆ ಬರಬೇಕಿದೆ ಅದುವೇ ಡಾರ್ಲಿಂಗ್ ಕೃಷ್ಣ ನಟಿಸಿರುವ 'ಲಕ್ಕಿ ಮ್ಯಾನ್' ತಮಿಳಿನ 'ಓ ಮೈ ಕಡವುಲೇ' ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ.