For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಟುಂಬದ 'ರಾಜಕುಮಾರ'ನಿಗೆ ಅಭಿಮಾನಿಯೊಬ್ಬನ ಗಿಫ್ಟ್.!

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರ 'ರಾಜಕುಮಾರ'ನಿಗೆ 'ಮಿ.ಅಂಡ್ ಮಿಸಸ್ ರಾಮಾಚಾರಿ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ ಎಂದು ನಾವು ನಿಮಗೆ ಹೇಳಿದ್ವಿ ತಾನೆ.

  ಇದೀಗ 'ರಾಜಕುಮಾರ' ಚಿತ್ರದ ಪೋಸ್ಟರ್ ಒಂದನ್ನು ಪವರ್ ಸ್ಟಾರ್ ಪುನೀತ್ ಅವರ ಕಟ್ಟಾ ಅಭಿಮಾನಿಯೊಬ್ಬ ತನ್ನ ಕೈಯ್ಯಾರೆ ಬಿಡಿಸಿದ್ದು, ಸದ್ಯಕ್ಕೆ ಆ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಕನ್ನಡದ ಕೋಟ್ಯಾಧಿಪತಿ ನಿರೂಪಣೆಗೆ ಇವರು ಬರ್ತಾರಂತೆ, ಹೌದಾ?]

  'ರಣವಿಕ್ರಮ' ಸಿನಿಮಾ ಬಿಡುಗಡೆಗೊಂಡ ನಂತರ ಕನ್ನಡದ ಸೂಪರ್ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ದೊಡ್ಮನೆ ಹುಡುಗ' ಮತ್ತು 'ಚಕ್ರವ್ಯೂಹ' ಎಂಬ ಎರಡು ಅತ್ಯಂತ ದೊಡ್ಡ ಬಜೆಟ್ ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.[ಪುನೀತ್ ಗೆ ಅಪ್ಪ ಆಗ್ತಾರಂತೆ, ತಮಿಳಿನ ಶರತ್ ಕುಮಾರ್]

  ಮೂಲಗಳು ಹೇಳುವ ಪ್ರಕಾರ 'ಚಕ್ರವ್ಯೂಹ' ಸಿನಿಮಾ ಜನವರಿ 2016 ಕ್ಕೆ ತೆರೆ ಕಂಡರೆ, ನಿರ್ದೇಶಕ ದುನಿಯಾ ಸೂರಿ ಅವರ 'ದೊಡ್ಮನೆ ಹುಡುಗ' ಮಾರ್ಚ್ 2016 ಅಪ್ಪು ಅವರ ಹುಟ್ಟುಹಬ್ಬಕ್ಕೆ ತೆರೆ ಕಾಣಲಿದೆಯಂತೆ.

  ಅಂದಹಾಗೆ ಈ ಎರಡು ಸಿನಿಮಾಗಳು ಬಿಡುಗಡೆ ಕಾಣುವ ಮೊದಲೇ ಪುನೀತ್ ಅವರ ಹೊಸ ಪ್ರಾಜೆಕ್ಟ್ 'ರಾಜಕುಮಾರ' ಎಲ್ಲೆಡೆ ಸಖತ್ ಸೌಂಡ್ ಮಾಡ್ತಾ ಇದೆ. ಜೊತೆಗೆ ವರನಟ ಡಾ.ರಾಜ್ ಅವರ 87 ನೇ ಹುಟ್ಟುಹಬ್ಬದಂದು ತೆರೆ ಕಂಡ ಫಸ್ಟ್ ಲುಕ್ ಪೋಸ್ಟರ್ ಕೂಡ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು.['ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರವೇನು?]

  ಇದೀಗ ಅಭಿಮಾನಿಯೊಬ್ಬರ ಕುಂಚದಿಂದ ಮೂಡಿಬಂದ ಪುನೀತ್ ಅವರ 'ರಾಜಕುಮಾರ' ಪೋಸ್ಟರ್ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಎಲ್ಲೆಡೆ ತುಂಬಾ ಸದ್ದು ಮಾಡುತ್ತಿದೆ. ಇದನ್ನು ಅಭಿಮಾನಿಯೊಬ್ಬ ತಮ್ಮ ಪ್ರೀತಿಯ ಅಪ್ಪು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

  ಚಿತ್ರದಲ್ಲಿ ಪುನೀತ್ ಅವರಿಗೆ ತಂದೆಯಾಗಿ ತಮಿಳು ನಟ ಶರತ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಪಾತ್ರಕ್ಕೆ ತಕ್ಕ ಕಲಾವಿದರ ಹುಡುಕಾಟದಲ್ಲಿ ಬ್ಯುಸಿಯಾಗಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

  ಕಲಾವಿದನೊಬ್ಬನ ಕೈ ಚಳಕದಿಂದ ಮೂಡಿಬಂದ ಪೋಸ್ಟರ್ ಅನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಹಾಕಿಕೊಂಡಿದ್ದಾರೆ. ಹಾಗೂ ಪೋಸ್ಟರ್ ತಯಾರಿಸಿದ ಅಭಿಮಾನಿಗೆ ಐಡಿಯಾ ಕೊಟ್ಟಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

  Hi Guys My friend sent this Designed pic I got to know that Fans have done it ! Wonderful work brothers Appu sir Fans...

  Posted by Santhosh Ananddram on Wednesday, December 9, 2015
  English summary
  Puneeth Rajkumar is being missed by his fans. The 'Rajakumara' actor's fanmade poster has gone viral in the soical networking platforms.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X