For Quick Alerts
  ALLOW NOTIFICATIONS  
  For Daily Alerts

  ಅಂತೂ ಬಂತು 'ಕಾಂತಾರ'ಕ್ಕೆ ಪೈಪೋಟಿ ಕೊಡುವ ಚಿತ್ರ; ಬಿಡುಗಡೆಗೂ ಮುನ್ನವೇ ಕಾಂತಾರ ಹಿಂದಿಕ್ಕಿದ ಗಂಧದಗುಡಿ!

  |

  ಕಾಂತಾರ ಬಿಡುಗಡೆಯಾಗಿ ಇಪ್ಪತ್ತು ದಿನಗಳನ್ನು ಪೂರೈಸಿದರೂ ಸಹ ಚಿತ್ರದ ಅಬ್ಬರ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ವಾರಾಂತ್ಯದ ದಿನಗಳಲ್ಲಿ ಮಾತ್ರವಲ್ಲದೆ ವಾರದ ರಜಾರಹಿತ ದಿನಗಳಲ್ಲಿಯೂ ಸಹ ಚಿತ್ರ ತುಂಬು ಪ್ರದರ್ಶನವನ್ನು ಕಾಣುತ್ತಿದೆ.

  ಇನ್ನು ಕಾಂತಾರ ಚಿತ್ರ ಬಿಡುಗಡೆಯಾದಾಗ ಆ ವಾರದ ಹಿಂದೆ ಚಿತ್ರಮಂದಿರದ ಅಂಗಳಕ್ಕೆ ಬಂದಿದ್ದ ಚಿತ್ರಗಳು, ಕಾಂತಾರ ಜತೆ ಬಿಡುಗಡೆಯಾದ ಚಿತ್ರಗಳು ಹಾಗೂ ನಂತರದ ವಾರಗಳಲ್ಲಿ ಬಿಡುಗಡೆಯಾದ ಚಿತ್ರಗಳು ಕಾಂತಾರದ ಎದುರು ಮಕಾಡೆ ಮಲಗಿದ್ದವು. ಅದರಲ್ಲಿಯೂ ಹಿಟ್ ಟಾಕ್ ಪಡೆದುಕೊಂಡಂತಹ ಗುರು ಶಿಷ್ಯರು, ಗಾಡ್ ಫಾದರ್ ರೀತಿಯ ಸಿನಿಮಾಗಳೇ ಕಾಂತಾರ ಬಿಡುಗಡೆಗೊಂಡ ನಂತರ ಚಿತ್ರಮಂದಿರಗಳನ್ನು ಕಳೆದುಕೊಂಡು ಮಂಕಾದದ್ದನ್ನು ಸ್ವತಃ ಜನರೇ ಕಂಡಿದ್ದಾರೆ.

  ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ 'ಕಾಂತಾರ'!ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆ ಹೊಡೆದುರುಳಿಸಿದ 'ಕಾಂತಾರ'!

  ಹೀಗೆ ಕಾಂತಾರ ಎದುರು ಮತ್ತು ಕಾಂತಾರದ ನಂತರ ಬಂದ ಯಾವ ಚಿತ್ರವೂ ಸಹ ಕಾಂತಾರ ಸಿನಿಮಾಗೆ ತಕ್ಕ ಪೈಪೋಟಿ ನೀಡಲೇ ಇಲ್ಲ. ಕಾಂತಾರ ಚಿತ್ರಕ್ಕೆ ದೊರಕಿದ್ದ ಪ್ರದರ್ಶನಗಳನ್ನು ಕಬಳಿಸುವಲ್ಲಿ ಯಾವುದೇ ಚಿತ್ರಗಳು ಯಶಸ್ವಿಯಾಗಲಿಲ್ಲ. ಆದರೆ ಇದೀಗ ಕಾಂತಾರ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ನೀಡುವಂತಹ ಕನ್ನಡ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗ್ತಿದೆ. ಬಿಡುಗಡೆಗೂ ಮುನ್ನವೇ ಅಬ್ಬರಿಸಿ ಸೂಚನೆಯನ್ನು ಸಹ ನೀಡಿದೆ.

   ಬುಕ್ ಮೈ ಶೋನಲ್ಲಿ ಟ್ರೆಂಡಿಂಗ್, ಅಬ್ಬರದ ಮುನ್ಸೂಚನೆ

  ಬುಕ್ ಮೈ ಶೋನಲ್ಲಿ ಟ್ರೆಂಡಿಂಗ್, ಅಬ್ಬರದ ಮುನ್ಸೂಚನೆ

  ಕಾಂತಾರ ಚಿತ್ರ ಬಿಡುಗಡೆಯಾದ ನಂತರ ಹಲವಾರು ಚಿತ್ರಗಳು ಬಿಡುಗಡೆಯಾದವು ಆದರೆ ಬುಕ್ ಮೈ ಶೋ ಟ್ರೆಂಡಿಂಗ್ ಸರ್ಚ್‌ನಲ್ಲಿ ಕಾಂತಾರ ಚಿತ್ರವನ್ನು ಯಾವ ಚಿತ್ರವೂ ಹಿಂದಿಕ್ಕಿರಲಿಲ್ಲ. ಆದರೆ ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಂತಾರವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಕಾಂತಾರ ಚಿತ್ರಕ್ಕೆ ತಕ್ಕ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ.

   ಕಾಂತಾರ vs ಗಂಧದ ಗುಡಿ ಬಾಕ್ಸ್ ಆಫೀಸ್ ಪೈಪೋಟಿ

  ಕಾಂತಾರ vs ಗಂಧದ ಗುಡಿ ಬಾಕ್ಸ್ ಆಫೀಸ್ ಪೈಪೋಟಿ

  ಇನ್ನು ಅಪ್ಪು ಅವರ ಅಂತಿಮ ಚಿತ್ರವಾದ ಗಂಧದಗುಡಿ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಜೇಮ್ಸ್ ಚಿತ್ರ ನೂರು ಕೋಟಿ ಕ್ಲಬ್ ಸೇರಿತ್ತು. ಸದ್ಯ ಗಂಧದ ಗುಡಿ ಅಂತಿಮ ಚಿತ್ರವಾದ್ದರಿಂದ ಅಪ್ಪು ಅಭಿಮಾನಿಗಳೆಲ್ಲರೂ ಚಿತ್ರಮಂದಿರ ಕಡೆ ಮುಖ ಮಾಡಲಿದ್ದು ಚಿತ್ರ ಬೃಹತ್ ಹಣ ಕಲೆಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಗಂಧದ ಗುಡಿ ಅಪ್ಪು ಅಭಿಮಾನಿಗಳ ಪಾಲಿಗೆ ಎಮೋಷನ್ ಎಂಬುದು ನಿಜ, ಆದರೆ ಒಂದು ಚಿತ್ರವಾಗಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಕಾಂತಾರಕ್ಕೆ ಪೈಪೋಟಿ ನೀಡಲಿದೆ ಎಂಬುದು ಅಷ್ಟೇ ನಿಜ.

   ಬುಕ್ ಮೈ ಶೋ ಟ್ರೆಂಡಿಂಗ್ ಸರ್ಚ್ ಪಟ್ಟಿ ಎಂದರೇನು?

  ಬುಕ್ ಮೈ ಶೋ ಟ್ರೆಂಡಿಂಗ್ ಸರ್ಚ್ ಪಟ್ಟಿ ಎಂದರೇನು?

  ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ವೇಗವಾಗಿ ಹೆಚ್ಚು ಜನ ವೀಕ್ಷಿಸಿದರೆ, ಟ್ವಿಟ್ಟರ್ ಅಪ್ಲಿಕೇಶನ್‌ನಲ್ಲಿ ವಿಷಯವೊಂದರ ಕುರಿತು ಹೆಚ್ಚು ಚರ್ಚೆಯಾದರೆ ಹೇಗೆ ಟ್ರೆಂಡ್ ಆಗುತ್ತವೆಯೋ ಅದೇ ರೀತಿ ಬುಕ್ ಮೈಶೋ ಅಪ್ಲಿಕೇಶನ್‌ನಲ್ಲಿ ಸಿನಿರಸಿಕರು ಯಾವ ಚಿತ್ರದ ಹೆಸರನ್ನು ಹೆಚ್ಚಾಗಿ ಹುಡುಕುತ್ತಾರೋ ಆ ಚಿತ್ರ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಹೀಗೆ ಬಿಡುಗಡೆಗೆ ಇನ್ನೂ 5 ದಿನಗಳು ಬಾಕಿ ಇರುವಾಗಲೇ ಗಂಧದಗುಡಿ ಚಿತ್ರವನ್ನು ಸಿನಿರಸಿಕರು ಕಾಂತಾರ ಚಿತ್ರಕ್ಕಿಂತ ಹೆಚ್ಚು ಹುಡುಕಲ್ಪಟ್ಟಿದ್ದು, ಚಿತ್ರ ದಾಖಲೆಯ ಬುಕಿಂಗ್ ಮಾಡಲಿದೆ ಎಂಬ ಸೂಚನೆ ದೊರಕಿದೆ.

  English summary
  Puneeth Rajkumar's Gandhada Gudi beats Kantara in bookmyshow trending seach. Read on
  Sunday, October 23, 2022, 16:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X