twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಕನಸಿನ ಕೂಸು 'ಗಂಧದ ಗುಡಿ' 3ನೇ ದಿನ ಗಳಿಸಿದ್ದೆಷ್ಟು? ಇಲ್ಲಿಯವರೆಗೂ ಎಷ್ಟು ಕಲೆಕ್ಷನ್ ಮಾಡಿದೆ?

    |

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಕೂಸು ಗಂಧದ ಗುಡಿ ಕಳೆದ ಶುಕ್ರವಾರ ( ಅಕ್ಟೋಬರ್ 28 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿತು. ಕರ್ನಾಟಕದ ವನ್ಯಸಂಪತ್ತನ್ನು ಬೆಳ್ಳಿ ತೆರೆ ಮೇಲೆ ತೋರಿಸಬೇಕು ಎಂಬ ಮಹಾದಾಸೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಗಂಧದಗುಡಿ ತಂಡ ಅಪ್ಪು ನಿಧನದ ನಂತರವೂ ಸಹ ನನಸು ಮಾಡುವಲ್ಲಿ ಯಶಸ್ವಿಯಾಗಿದೆ.

    ಈ ಹಿಂದೆ ವೈಲ್ಡ್ ಕರ್ನಾಟಕ ಡಾಕುಮೆಂಟರಿ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದ ಅಮೋಘವರ್ಷ ಈ ಬಾರಿ ಇಡೀ ಕರ್ನಾಟಕದ ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಅಪ್ಪು ಅಭಿನಯದ ಕೊನೆಯ ಚಿತ್ರ ಎಂಬ ಕಾರಣವಲ್ಲದೇ ಗಂಧದ ಗುಡಿ ಚಿತ್ರ ಕಂಟೆಂಟ್ ವಿಚಾರವಾಗಿ ಸದ್ದು ಮಾಡುತ್ತಿದೆ. ಹೀಗೆ ಜನರ ಮನಸ್ಸಿಗೆ ಹತ್ತಿರವಾಗಿರುವ ಗಂಧದ ಗುಡಿ ಚಿತ್ರ ಗಳಿಕೆ ವಿಚಾರದಲ್ಲಿಯೂ ಸದ್ದು ಮಾಡಲಾರಂಭಿಸಿದೆ.

    ಚಿತ್ರವನ್ನು ಜನರಿಗೆ ತಲುಪಿಸಲು ಕೆಆರ್‌ಜಿ ಸ್ಟುಡಿಯೋಸ್ ಜೊತೆ ಕೈಜೋಡಿಸಿರುವ ಪಿಆರ್‌ಕೆ ಪ್ರೊಡಕ್ಷನ್ಸ್ ಗಳಿಕೆ ವಿಚಾರದಲ್ಲಿಯೂ ಸಹ ಗೆದ್ದಿದೆ. ಮೊದಲ ದಿನವೇ ಐದು ಕೋಟಿ ಗಳಿಸಿ ಸದ್ದು ಮಾಡಿದ್ದ ಗಂಧದ ಗುಡಿ ಚಿತ್ರ ಎರಡನೇ ದಿನ 4.5 ಕೋಟಿ ಗಳಿಸಿತ್ತು. ಹೀಗೆ ಮೊದಲೆರಡು ದಿನ ಒಳ್ಳೆಯ ಗಳಿಕೆ ಮಾಡಿದ್ದ ಗಂಧದ ಗುಡಿ ಚಿತ್ರ ಮೂರನೇ ದಿನ ಎಷ್ಟು ಗಳಿಕೆ ಮಾಡಿದೆ ಎಂಬ ಮಾಹಿತಿ ಮುಂದಿದೆ..

    ಮೂರನೇ ದಿನವೂ ದೊಡ್ಡ ಗಳಿಕೆ

    ಮೂರನೇ ದಿನವೂ ದೊಡ್ಡ ಗಳಿಕೆ

    ಮೊದಲೆರಡು ದಿನಗಳಲ್ಲಿ ಒಟ್ಟಾರೆ 9.5 ಕೋಟಿ ಗಳಿಸಿದ್ದ ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಅವರ ಗಂಧದ ಗುಡಿ ಮೂರನೇ ದಿನ 5 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ. ಮೂರನೇ ದಿನ ಭಾನುವಾರವಾದ ಕಾರಣ ಗಂಧದ ಗುಡಿಯನ್ನು ವೀಕ್ಷಿಸಲು ಜನರು ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದರು. ರಾಜ್ಯದ ಪ್ರಮುಖ ನಗರಗಳಲ್ಲಿ ಬಹುತೇಕ ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದವು. ಕೆಲವೆಡೆ ಟಿಕೆಟ್ ಸಿಗದೇ ಜನರು ಮನೆ ಕಡೆಗೆ ತೆರಳಿದ್ದೂ ಸಹ ಉಂಟು.

    ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

    ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

    ಗಂಧದ ಗುಡಿ ಮೊದಲ ದಿನ 5 ಕೋಟಿ, ಎರಡನೇ ದಿನ 4.5 ಕೋಟಿ ಹಾಗೂ ಮೂರನೇ ದಿನ 5 ಕೋಟಿ ಗಳಿಕೆಯನ್ನು ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಘೋಷಿಸಿದ್ದು ಈ ಪ್ರಕಾರ ಗಂಧದ ಗುಡಿ ಮೂರು ದಿನಗಳಲ್ಲಿ ಒಟ್ಟಾರೆ 14.5 ಕೋಟಿ ಗಳಿಕೆ ಮಾಡಿದಂತಾಗಿದೆ. ಸುಮಾರು ಏಳು ಕೋಟಿ ವೆಚ್ಚದಲ್ಲಿ ಗಂಧದ ಗುಡಿ ತಯಾರಾಗಿದೆ ಎಂಬ ಸುದ್ದಿ ಇದ್ದು ಕಲೆಕ್ಷನ್ ರಿಪೋರ್ಟ್ ಪ್ರಕಾರ ಸದ್ಯಕ್ಕೆ ಚಿತ್ರ ಡಬಲ್ ಪ್ರಾಫಿಟ್ ಝೋನ್ ತಲುಪಿದೆ ಎನ್ನಬಹುದು.

    ಸರಿಯಾದ ಶೋಗಳಿಲ್ಲ ಎಂಬ ಆರೋಪ

    ಸರಿಯಾದ ಶೋಗಳಿಲ್ಲ ಎಂಬ ಆರೋಪ

    ಇನ್ನು ಗಂಧದ ಗುಡಿ ಒಳ್ಳೆಯ ಗಳಿಕೆ ಮಾಡುತ್ತಿದ್ದರೆ ಮತ್ತೊಂದೆಡೆ ಚಿತ್ರದ ವಿತರಕರು ಚಿತ್ರದ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಅಪ್ಪು ಅಭಿಮಾನಿಗಳು ಕೆಆರ್‌ಜಿ ಸ್ಟುಡಿಯೋಸ್ ವಿರುದ್ಧ ಹೊರಿಸುತ್ತಿದ್ದಾರೆ. ಪ್ರಮುಖ ಚಿತ್ರಮಂದಿರಗಳಲ್ಲಿ ಕಡಿಮೆ ಪ್ರದರ್ಶನಗಳನ್ನು ನೀಡಲಾಗುತ್ತಿದೆ, ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದರೂ ಸಹ ಹೆಚ್ಚುವರಿ ಪ್ರದರ್ಶನಗಳನ್ನು ಆಯೋಜಿಸುತ್ತಿಲ್ಲ, ಇದರಿಂದ ಹೆಚ್ಚು ಜನರಿಗೆ ಸಿನಿಮಾ ತಲುಪುತ್ತಿಲ್ಲ ಎಂದು ಕೆಲ ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

    English summary
    Puneeth Rajkumar's Gandhada Gudi collected 5 crores gross on third day. Read on
    Monday, October 31, 2022, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X