For Quick Alerts
  ALLOW NOTIFICATIONS  
  For Daily Alerts

  "ತೇಜಸ್ಸು, ಪ್ರತಿಭೆಯ ಕಣಜ ಅಪ್ಪು": 'ಗಂಧದಗುಡಿ' ಟ್ರೈಲರ್ ನೋಡಿ ಪ್ರಧಾನಿ ಮೋದಿ ಮೆಚ್ಚುಗೆ

  |

  ಅಪ್ಪು ನಟನೆಯ ಕಟ್ಟ ಕಡೆಯ ಸಿನಿಮಾ 'ಗಂಧದಗುಡಿ' ಟ್ರೈಲರ್ ರಿಲೀಸ್ ಆಗಿದೆ. ಅಭಿಮಾನಿಗಳು, ಸೆಲೆಬ್ರೆಟಿಗಳು ಅಪ್ಪು ವಾಯ್ಸ್‌ನಲ್ಲಿ ಕಾಡುವ ಡಾಕ್ಯೂಮೆಂಟರಿ ಸಿನಿಮಾದ ಝಲಕ್ ನೋಡಿ ಭಾವುಕರಾಗಿದ್ದಾರೆ. ನರ್ತಕಿ ಥಿಯೇಟರ್‌ನಲ್ಲಿ ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಲ್ಲರೂ 28ರಂದು ಸಿನಿಮಾ ನೋಡಿ ಹೇಗಿದೆ ಎಂದು ಹೇಳಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ 'ಗಂಧದಗುಡಿ' ಟ್ರೈಲರ್ ಶೇರ್ ಮಾಡಿ ಶುಭ ಹಾರೈಸಿದ್ದಾರೆ.

  ಅಮೋಘವರ್ಷ ನಿರ್ದೇಶನದಲ್ಲಿ ಈ ಡಾಕ್ಯುಮೆಂಟರಿ ಸಿನಿಮಾ ಮೂಡಿ ಬಂದಿದೆ. ಹಲವು ತಿಂಗಳು ಅಮೋಘವರ್ಷ ಜೊತೆ ಅಪ್ಪು ಕಾಡು ಮೇಡು ಅಲೆದು ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದರು. ಟ್ರೈಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಟ್ರೈಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿ ಟ್ರೈಲರ್ ಶೇರ್ ಮಾಡಿ ಪೋಸ್ಟ್ ಮಾಡಿದ್ದರು.

  Gandhada Gudi Trailer: ಜುರಾಸಿಕ್ ಪಾರ್ಕ್, ಗಾಜನೂರು ಸುತ್ತಾಮುತ್ತಾ ಮುಗ್ಧ ಅಪ್ಪು 'ಗಂಧದಗುಡಿ'ಯ ರೋಚಕ ಪಯಣGandhada Gudi Trailer: ಜುರಾಸಿಕ್ ಪಾರ್ಕ್, ಗಾಜನೂರು ಸುತ್ತಾಮುತ್ತಾ ಮುಗ್ಧ ಅಪ್ಪು 'ಗಂಧದಗುಡಿ'ಯ ರೋಚಕ ಪಯಣ

  "ನಮಸ್ತೆ ಪ್ರಧಾನಿ ನರೇಂದ್ರ ಮೋದಿ ಅವರೇ, ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಪ್ರಾಜೆಕ್ಟ್ ಗಂಧದಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವ ನಮಗೆ ಇಂದು ಭಾವನಾತ್ಮಕ ದಿನ. ಅಪ್ಪು ನಮ್ಮ ಮಧ್ಯೆ ಇಲ್ಲ, ಆದರೆ ಅವರ ಜೀವನ ಮತ್ತು ಕೆಲಸವು ನಮಗೆ 'ವಸುಧೈವ ಕುಟುಂಬಕಂ' ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ. ಸಿನಿಮಾವನ್ನು ಆಚರಿಸುತ್ತದೆ ಮತ್ತು ನಮ್ಮ ನೆಲದ ಶ್ರೀಮಂತ ಪರಂಪರೆ, ಸಂಸ್ಕೃತಿ, ಪ್ರಕೃತಿ ಮತ್ತು ವೈವಿಧ್ಯತೆಗೆ ಕನ್ನಡಿ ಹಿಡಿದಿದೆ" ಎಂದು ಬರೆದು ಟ್ರೈಲರ್ ಲಿಂಕ್ ಶೇರ್ ಮಾಡಿದ್ದರು.

  ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ "ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು, ಅಪ್ಪು ಪ್ರತಿಭೆಯ ಕಣಜವಾಗಿದ್ದರು. ಗಂಧದಗುಡಿ' ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಅರ್ಪಣೆ. ಚಿತ್ರತಂಡದ ಪ್ರಯತ್ನಕ್ಕೆ ನನ್ನ ಶುಭಹಾರೈಕೆಗಳು" ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. 2018ರಲ್ಲಿ ಬಿಜೆಪಿ ಸಮಾವೇಶಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪತ್ನಿ ಅಶ್ವಿನಿ ಜೊತೆ ವಿಮಾನ ನಿಲ್ದಾಣದಲ್ಲಿ ಭೇಟಿ ಆಗಿದ್ದರು.

  Puneeth rajkumars Gandhada Gudi Trailer Out PM Narendra modi wishes Team Gandhada Gudi all the very best

  ಇನ್ನು ನರೇಂದ್ರ ಮೋದಿಯವರ ಟ್ವೀಟ್‌ಗೆ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಸೇರಿದಂತೆ ಸಾಕಷ್ಟು ಮೆಚ್ಚುವೆ ಸೂಚಿಸುತ್ತಿದ್ದಾರೆ. ಆನಂದ್‌ರಾಮ್ 'ಗಂಧದಗುಡಿ' ಸಿನಿಮಾ ನೋಡಿ ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ. 'ಗಂಧದಗುಡಿ' ಡಾಕ್ಯೂಮೆಂಟರಿ ಸಿನಿಮಾ ಅಕ್ಟೋಬರ್ 28ಕ್ಕೆ ಸಿಲ್ವರ್‌ ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗಲಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಿದೆ. ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಪವರ್ ಸ್ಟಾರ್ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪುನೀತ್, ಪುನೀತ್ ಆಗಿಯೇ ಕಾಣಿಸಿಕೊಂಡಿರುವ ಸಿನಿಮಾ 'ಗಂಧದಗುಡಿ'. ಈ ಸಿನಿಮಾ ಟ್ರೈಲರ್ ಅನ್ನು ಬಹಳ ದೊಡ್ಡದಾಗಿ ಸ್ವಾಗತಿಸಿರುವ ಅಭಿಮಾನಿಗಳು ಅಕ್ಟೋಬರ್ 28ಕ್ಕೆ ಚಿತ್ರವನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

  English summary
  Puneeth rajkumar's Gandhada Gudi Trailer Out PM Narendra modi wishes Team Gandhada Gudi all the very best. Know More.
  Sunday, October 9, 2022, 12:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X