»   » ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸಂತಸದ ಸುದ್ದಿ

Posted By:
Subscribe to Filmibeat Kannada

'ಪವರ್ ***' ಚಿತ್ರದ ನಂತ್ರ ಬಿಗ್ ಸ್ಕ್ರೀನ್ ನಲ್ಲಿ ಪುನೀತ್ ರಾಜ್ ಕುಮಾರ್ ದರ್ಶನ ಯಾವಾಗ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಕಡೆಗೂ ಗುಡ್ ನ್ಯೂಸ್ ಸಿಕ್ಕಿದೆ. ಇದೇ ತಿಂಗಳ 20 ನೇ ತಾರೀಖು ಪವರ್ ಸ್ಟಾರ್ ಅಭಿನಯದ 'ಮೈತ್ರಿ' ಸಿನಿಮಾ ತೆರೆಗೆ ಬರುತ್ತಿದೆ.

ಸೆನ್ಸಾರ್ ಅಂಗಳದಿಂದ ನಿನ್ನೆ ರಾತ್ರಿಯಷ್ಟೇ ಪಾಸ್ ಆಗಿರುವ 'ಮೈತ್ರಿ' ಸಿನಿಮಾ U/A ಸರ್ಟಿಫಿಕೇಟ್ ಪಡೆದುಕೊಂಡಿದೆ. ಹಲವು ದಿನಗಳ ಹಿಂದೆಯೇ ರಿಲೀಸ್ ಗೆ ರೆಡಿಯಾಗಿದ್ದ 'ಮೈತ್ರಿ' ಸಿನಿಮಾ ಸೆನ್ಸಾರ್ ಅಪ್ಪಣೆಗಾಗಿ ಇಲ್ಲಿಯವರೆಗೂ ಕಾಯುತ್ತಿತ್ತು. [ಮೈತ್ರಿ ಹಾಡುಗಳನ್ನ ಇಲ್ಲಿ ನೋಡಿ]


Puneeth Rajkumar

ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದುಕೊಂಡಿರುವ 'ಮೈತ್ರಿ' ಸಿನಿಮಾ ಉತ್ತಮ ಪ್ರಶಂಸೆಗೂ ಪಾತ್ರವಾಗಿದೆ. ಚಿತ್ರದಲ್ಲಿರುವ ಉತ್ತಮ ಸಂದೇಶವನ್ನು ಕಂಡು ಸೆನ್ಸಾರ್ ಮಂಡಳಿ 'ಮೈತ್ರಿ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ['ಮೈತ್ರಿ' ರಿಲೀಸ್ ಡೇಟ್ ಖಾತ್ರಿ ಇಲ್ಲ ಕಣ್ರೀ..!]


ಮೊಟ್ಟ ಮೊದಲ ಬಾರಿಗೆ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದಾಗಿರುವ ಸಿನಿಮಾ 'ಮೈತ್ರಿ'. ಕೆಮಿಕಲ್ ಎಂಜಿನಿಯರ್ ಪಾತ್ರದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದರೆ, ತಮ್ಮದೇ 'ರಿಯಲ್' ಲೈಫ್ ಪಾತ್ರವನ್ನ ಹೊತ್ತು 'ರೀಲ್' ಮೇಲೆ ಬರ್ತಿದ್ದಾರೆ ಅಪ್ಪು.


ಮಕ್ಕಳ ಶಿಕ್ಷಣ ಹಕ್ಕುಗಳ ಬಗ್ಗೆ ಸಂದೇಶ ಸಾರುವ ಈ ಚಿತ್ರಕ್ಕೆ ಇಳಯರಾಜ ಸಂಗೀತವಿದೆ. ಅತುಲ್ ಕುಲಕರ್ಣಿ, ಭಾವನಾ ಮೆನನ್, ಅರ್ಚನಾ, ರವಿ ಕಾಳೆ ಮುಂತಾದ ತಾರಾಬಳಗವಿರುವ ಈ ಚಿತ್ರಕ್ಕೆ 'ಜಟ್ಟ' ಖ್ಯಾತಿಯ ನಿರ್ದೇಶಕ ಗಿರಿರಾಜ್ ನಿರ್ದೇಶಕ.


Puneeth Rajkumar

''ನಿನ್ನೆ ರಾತ್ರಿ ಸೆನ್ಸಾರ್ ಸಿಕ್ಕಿದೆ. ಉತ್ತರ ಕರ್ನಾಟಕದಲ್ಲಿ ಪ್ರೊಮೋಷನಲ್ ಟೂರ್ ಇದೆ. ಫೆಬ್ರವರಿ 20ಕ್ಕೆ ರಿಲೀಸ್ ಡೇಟ್ ಕನ್ಫರ್ಮ್'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಗಿರಿರಾಜ್ ತಿಳಿಸಿದ್ದಾರೆ. [ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ' ಟೀಸರ್ ಸೂಪರ್]


ಹಲವಾರು ವಿಶೇಷತೆಗಳ ಆಗರವಾಗಿರುವ 'ಮೈತ್ರಿ' ಸಿನಿಮಾ ಫೆಬ್ರವರಿ 20ಕ್ಕೆ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. 'ಮೈತ್ರಿ' ಚಿತ್ರವನ್ನ ಕಣ್ತುಂಬಿಕೊಳ್ಳುವುದಕ್ಕೆ ನೀವು ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)

English summary
Puneeth Rajkumar and Mohan Lal starrer 'Mythri' has been granted U/A certificate from the Regional Censor Board. Mythri is set to hit the screens across Karnataka on February 20.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada