»   » ಟಾಲಿವುಡ್ 'ಮೈತ್ರಿ'ಗೆ ಅಕ್ಕಿನೇನಿ ನಾಗಾರ್ಜುನ ಸಿದ್ಧ!

ಟಾಲಿವುಡ್ 'ಮೈತ್ರಿ'ಗೆ ಅಕ್ಕಿನೇನಿ ನಾಗಾರ್ಜುನ ಸಿದ್ಧ!

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಅಪರೂಪಕ್ಕೊಂದು ಚೆಂದದ ಸಿನಿಮಾ ತೆರೆಕಂಡಿದೆ. ಆಡಂಬರ-ಅಬ್ಬರವಿಲ್ಲದೆ ಇಡೀ ಫ್ಯಾಮಿಲಿ ಯಾವುದೇ ಅಂಜಿಕೆಯಿಲ್ಲದೆ ನೋಡಬಹುದಾದ ಸಿನಿಮಾ 'ಮೈತ್ರಿ'. ಎಲ್ಲಾ ವರ್ಗದ ಪ್ರೇಕ್ಷಕರನ್ನ ಸೆಳೆಯುತ್ತಿರುವ 'ಮೈತ್ರಿ' ಸಿನಿಮಾ ಮಲಯಾಳಂನಲ್ಲೂ ತೆರೆಕಾಣಲಿದೆ ಅನ್ನುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.

ಈಗ ಸಿಕ್ಕಿರುವ ಮತ್ತೊಂದು ಮಾಹಿತಿ ಪ್ರಕಾರ 'ಮೈತ್ರಿ' ಸಿನಿಮಾ ತೆಲುಗಿನಲ್ಲಿ ರೀಮೇಕ್ ಆಗಲಿದೆ. ಅಂದ್ಹಾಗೆ, ಟಾಲಿವುಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವವರು ಯಾರು ಹೇಳಿ? ಬೇರಾರೂ ಅಲ್ಲ, ಅಕ್ಕಿನೇನಿ ನಾಗಾರ್ಜುನ. [ಪುನೀತ್ ರಾಜ್ ಕುಮಾರ್ ಮಲಯಾಳಂ 'ಮೈತ್ರಿ']


Akkineni Nagarjuna

'ಕನ್ನಡದ ಕೋಟ್ಯಾಧಿಪತಿ'ಯನ್ನ ಇಲ್ಲಿ ಹೇಗೆ ಅಪ್ಪು ನಡೆಸಿಕೊಳ್ಳುತ್ತಾರೋ, ಅದೇ ರೀತಿ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರಮದ ಹೋಸ್ಟ್ ಆಗಿದ್ದಾರೆ. ಅಲ್ಲದೇ, ಪುನೀತ್ ರಂತೆ ಸಮಾಜಸೇವೆಯಲ್ಲಿ ನಾಗಾರ್ಜುನ ಹೆಚ್ಚು ಸಕ್ರಿಯ.


ಇಬ್ಬರ ಸ್ಟಾರ್ ಗಿರಿಯಲ್ಲಿ ಕೊಂಚ ಸಾಮ್ಯತೆಯಿರುವ ಕಾರಣ 'ಮೈತ್ರಿ' ಸಿನಿಮಾ ಇನ್ನೂ ಪ್ರೊಡಕ್ಷನ್ ಹಂತದಲ್ಲಿರುವಾಗಲೇ ರೀಮೇಕ್ ಮಾಡುವ ಇಂಗಿತವನ್ನ ನಾಗಾರ್ಜುನ ವ್ಯಕ್ತಪಡಿಸಿದ್ದರಂತೆ.


ಆಗ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನಿರ್ಮಾಪಕ ರಾಜ್ ಕುಮಾರ್, ಇದೀಗ ನಾಗಾರ್ಜುನಗಾಗಿ ಸ್ಪೆಷಲ್ ಶೋ ಅರೇಂಜ್ ಮಾಡುತ್ತಿದ್ದಾರಂತೆ. ಎಲ್ಲೆಡೆ 'ಮೈತ್ರಿ'ಗೆ ಪ್ರಶಂಸೆ ಲಭ್ಯವಾಗುತ್ತಿರುವುದರಿಂದ ನಾಗಾರ್ಜುನ ಕೂಡ ಸಿನಿಮಾ ನೋಡೋಕೆ ಉತ್ಸುಕರಾಗಿದ್ದಾರೆ. [ಪುನೀತ್ 'ಮೈತ್ರಿ' ಚಿತ್ರಕ್ಕೆ ವಿಮರ್ಶೆಗಳ ಮುಕ್ತ ಪ್ರಶಂಸೆ]


ಹೈದರಾಬಾದ್ ನಲ್ಲೇ ನಾಗಾರ್ಜುನಗಾಗಿ ಸ್ಪೆಷಲ್ ಶೋ ನಡೆಯಲಿದ್ದು, ಚಿತ್ರವನ್ನ ಅವರು ಮೆಚ್ಚಿದ್ದೇ ಆದರೆ ಟಾಲಿವುಡ್ ಕೂಡ ನೂತನ 'ಮೈತ್ರಿ'ಗೆ ಸಾಕ್ಷಿಯಾಗಲಿದೆ.

English summary
Power Star Puneeth Rajkumar and Mohan Lal starrer Kannada movie 'Mythri' will soon be remade in Telugu by Actor-Producer Akkineni Nagarjuna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada