»   » 'ದೊಡ್ಮನೆ ಹುಡ್ಗ'ನ ಜೊತೆ 'ರಾಜಕುಮಾರ'ನನ್ನು ಕಣ್ತುಂಬಿಕೊಳ್ಳಿ

'ದೊಡ್ಮನೆ ಹುಡ್ಗ'ನ ಜೊತೆ 'ರಾಜಕುಮಾರ'ನನ್ನು ಕಣ್ತುಂಬಿಕೊಳ್ಳಿ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅವರ 'ದೊಡ್ಮನೆ ಹುಡ್ಗ' ಇದೇ ತಿಂಗಳಾಂತ್ಯಕ್ಕೆ ತೆರೆ ಕಾಣುತ್ತಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಬಿರಿಯಾನಿ ಮಾರುವ ಹುಡುಗ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೈಟಲ್ 'ದೊಡ್ಮನೆ ಹುಡ್ಗ' ಅಂತಿದೆ, ಆದ್ರೆ ಪುನೀತ್ ಅವರು ರಸ್ತೆ ಬದಿಯಲ್ಲಿ ತಳ್ಳು ಗಾಡಿ ಅಂಗಡಿ ಹಾಕಿ, ಬಿರಿಯಾನಿ ಮಾರ್ತರಂತೆ, ಏನಿದು?, ದುನಿಯಾ ಸೂರಿ ಅವರ ಮರ್ಮ ಅಂತ ಹಲವರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.['ದೊಡ್ಮನೆ ಹುಡ್ಗ'ನ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿ]


Puneeth Rajkumar's 'Rajakumara' first look Teaser on September 30th

ಇದೆಲ್ಲಾ ಏನು?, ಅಷ್ಟಕ್ಕೂ 'ದೊಡ್ಮನೆ ಹುಡ್ಗ'ನ ಕಥೆ ಏನು ಅಂತ ಗೊತ್ತಾಗಬೇಕಾದ್ರೆ, ಸೆಪ್ಟೆಂಬರ್ 30ರ ವರೆಗೆ ಕಾಯಲೇಬೇಕು. ಇನ್ನು ಈ ಚಿತ್ರ ನೋಡೋಕೆ ಹೋಗೋರಿಗೆ ಚಿತ್ರಮಂದಿರದಲ್ಲಿ ಒಂದು ಸರ್ ಪ್ರೈಸ್ ಕಾದಿರುತ್ತೆ.


ಹೌದು 'ದೊಡ್ಮನೆ ಹುಡ್ಗ' ನೋಡಲು ಹೋಗುವ ಸಿನಿ ಪ್ರಿಯರಿಗೆ 'ರಾಜಕುಮಾರ'ನ ದರ್ಶನ ಕೂಡ ಆಗಲಿದೆ. ಒಂದು ಕೊಂಡರೆ ಇನ್ನೊಂದು ಉಚಿತ ಎನ್ನುವಂತೆ 'ದೊಡ್ಮನೆ ಹುಡ್ಗ' ಚಿತ್ರದ ಪ್ರದರ್ಶನ ಸಂದರ್ಭದಲ್ಲಿ 'ರಾಜಕುಮಾರ' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಲಿದೆ.[ಪುನೀತ್ ರಾಜ್ ಕುಮಾರ್ ಬಗ್ಗೆ ಸ್ಫೋಟಗೊಂಡ ರೋಚಕ ಸುದ್ದಿ ನಿಜ.?]


Puneeth Rajkumar's 'Rajakumara' first look Teaser on September 30th

ಈಗಾಗಲೇ ದೇಶ-ವಿದೇಶಗಳಲ್ಲಿ 'ರಾಜಕುಮಾರ' ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಮುಗಿಯುವ ಸೂಚನೆ ಸಿಕ್ಕಿದೆ. 'ಮಿ.ಅಂಡ್ ಮಿಸಸ್ ರಾಮಾಚಾರಿ' ಖ್ಯಾತಿಯ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ಮಾಡಿದ್ದಾರೆ.


ಮೊದಲ ಬಾರಿಗೆ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಅವರು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಂತೋಷ್ ಪ್ಲ್ಯಾನ್ ಮಾಡುತ್ತಿದ್ದಾರೆ.[ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಸರ್ ಪ್ರೈಸ್ ಕೊಟ್ಟಾಗ...]


Puneeth Rajkumar's 'Rajakumara' first look Teaser on September 30th

ಅಂತೂ-ಇಂತೂ 'ರಾಜಕುಮಾರ'ನ ಬರುವಿಕೆಗಾಗಿ ಕಾದಿದ್ದ ಹಲವು ಮಂದಿಗೆ ಶುಭ ಸುದ್ದಿ ಸಿಕ್ಕಿದ್ದು, 'ದೊಡ್ಮನೆ ಹುಡ್ಗ'ನನ್ನು ಅಬ್ಬರದಿಂದ ಬರಮಾಡಿಕೊಳ್ಳುವ ಜೊತೆಗೆ 'ರಾಜಕುಮಾರ'ನನ್ನು ಕಣ್ತುಂಬಿಕೊಳ್ಳಬಹುದು.

English summary
Kannada Actor Puneeth Rajkumar's Kannada Movie 'Rajakumara' first look teaser releasing along with 'Dodmane Huduga', On September 30th In Theaters and also in Youtube. The movie is directed by Director Santhosh Ananddram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada