For Quick Alerts
  ALLOW NOTIFICATIONS  
  For Daily Alerts

  ಪುನೀತ್ ರ 'ರಾಜಕುಮಾರ' ಚಿತ್ರದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

  By Suneetha
  |

  ಪುನೀತ್ ರಾಜ್ ಕುಮಾರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಅವರು ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಸಿನಿಮಾ 'ರಾಜಕುಮಾರ' ಚಿತ್ರದ ಮುಹೂರ್ತ ಶುಕ್ರವಾರದಂದು (ಮಾರ್ಚ್ 11) ಸದ್ದಿಲ್ಲದೆ ನೆರವೇರಿದೆ ಅನ್ನೋದನ್ನ ನಾವೇ ನಿಮಗೆ ಹೇಳಿದ್ವಿ.[ಸದ್ದಿಲ್ಲದೆ ಮುಹೂರ್ತ ಆಚರಿಸಿಕೊಂಡ ಪುನೀತ್ ರ 'ರಾಜಕುಮಾರ']

  ಇದೀಗ 'ರಾಜಕುಮಾರ' ಚಿತ್ರದ ಬಗ್ಗೆ ನವರಸ ನಾಯಕ ಜಗ್ಗೇಶ್ ಅವರು ಕಮೆಂಟ್ ಮಾಡಿದ್ದಾರೆ. 'ಈ ಚಿತ್ರದ ಕಥೆ ಕೇಳಿದೆ. ಪುನೀತ್ ಗೆ ಇನ್ನೊಂದು ಮೈಲಿಗಲ್ಲಾಗುತ್ತೆ ಈ ಚಿತ್ರ...ಅದರ ಒಂದು ಹಾಡು ಡೈರೆಕ್ಟರ್ ಬರೆದದ್ದು, ಈ ವರ್ಷಕ್ಕೆ ಚಿಂದಿ ಹಾಡು' ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಪವರ್ ಸ್ಟಾರ್ ಪುನೀತ್ ಅವರಿಗೆ ಶುಭ ಹಾರೈಸಿದ್ದಾರೆ.

  'ಮಿ.ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದ ಮೊದಲನೇ ಹಂತದ ಶೂಟಿಂಗ್ ನ್ಯೂಜಿಲ್ಯಾಂಡ್ ನಲ್ಲಿ ಎಪ್ರಿಲ್ 14 ರಿಂದ ಆರಂಭವಾಗಲಿದೆ. ಸುಮಾರು 2 ವಾರಗಳ ಕಾಲ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ 'ರಾಜಕುಮಾರ'ನ ಶೂಟಿಂಗ್ ನಡೆಯಲಿದೆ. ತದನಂತರ ಚಿತ್ರತಂಡ ಗೋವಾಕ್ಕೆ ಶಿಫ್ಟ್ ಆಗಲಿದೆ.['ರಾಜಕುಮಾರ'ನ ಜೊತೆ ಡ್ಯುಯೆಟ್ ಹಾಡೋ ರಾಣಿ ಯಾರು ಗೊತ್ತಾ?]

  ಇನ್ನು ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮತ್ತು ಜುಲೈ ತಿಂಗಳಿನಲ್ಲಿ ಮೈಸೂರಿನಲ್ಲಿ ಹಾಗೂ ಕೆಲವಾರು ದಿನ ವಾರಾಣಾಸಿಯಲ್ಲಿ ಚಿತ್ರದ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  ಒಟ್ನಲ್ಲಿ ಎಪ್ರಿಲ್ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸಿ ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಚಿತ್ರೀಕರಣ ಕಂಪ್ಲೀಟ್ ಮಾಡಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದು, ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಶೂಟಿಂಗ್ ಕಂಪ್ಲೀಟ್ ಆಗಲಿದೆ.

  English summary
  Kannada Actor Puneeth Rajkumar's new Movie directed by 'Mr.& Ma. Ramachari' fame Santhosh Anandram. Movie Shooting will start in New Zealand on April 14th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X