»   » ಆಸ್ಟ್ರೇಲಿಯಾಗೆ ಹಾರಿದ ಪುನೀತ್ ರ 'ರಾಜಕುಮಾರ' ಚಿತ್ರತಂಡ

ಆಸ್ಟ್ರೇಲಿಯಾಗೆ ಹಾರಿದ ಪುನೀತ್ ರ 'ರಾಜಕುಮಾರ' ಚಿತ್ರತಂಡ

Posted By:
Subscribe to Filmibeat Kannada

ಸುಮಾರು ಒಂದು ವರ್ಷದ ಹಿಂದೆ ಸೆಟ್ಟೇರಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸಿನಿಮಾ ಶೂಟಿಂಗ್ ಗೆ ಕೊನೆಗೂ ಸರಿಯಾದ ಕಾಲ ಕೂಡಿ ಬಂದಿದೆ.

ಹೌದು ಮಿ.ಅಂಡ್.ಮಿಸಸ್ ರಾಮಾಚಾರಿ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ 'ರಾಜಕುಮಾರ' ಚಿತ್ರದ ಶೂಟಿಂಗ್ ಈ ವಾರದಿಂದ (ಏಪ್ರಿಲ್ 21) ಭರ್ಜರಿಯಾಗಿ ಆರಂಭವಾಗುತ್ತಿದೆ.

ಈಗಾಗಲೇ ಚಿತ್ರೀಕರಣಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸುಮಾರು 30 ಮಂದಿ ಇರುವ ಚಿತ್ರತಂಡ ಭಾನುವಾರದಂದು (ಏಪ್ರಿಲ್ 17) ಆಸ್ಟ್ರೇಲಿಯಾಗೆ ಹಾರಿದ್ದಾರೆ. ಇನ್ನು ಪುನೀತ್ ಅವರಿಗೆ ನಾಯಕಿಯಾಗಿ ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್ ಅವರು ಮಿಂಚುತ್ತಿದ್ದಾರೆ.[ಅಪ್ಪು ಹುಟ್ಟುಹಬ್ಬಕ್ಕೆ ಇದಕ್ಕಿಂತ ಉಡುಗೊರೆ ಬೇಕಾ?]

Puneeth Rajkumar's 'Rajakumara' Shooting starts from April 21

ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿರುವ ಈ ಸಿನಿಮಾ ವರನಟ ಡಾ.ರಾಜ್ ಕುಮಾರ್ ಅವರ ಜೀವನ ಚರಿತ್ರೆ ಅಲ್ಲ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು.

'ಅಣ್ಣಾವ್ರ ಬಗೆಗಿನ ಸಾಕಷ್ಟು ಸಂಗತಿಗಳು ಈ ಚಿತ್ರದಲ್ಲಿವೆ ಆದರೆ ಚಿತ್ರದ ಕಥೆ ಅವರ ಬಗ್ಗೆ ಅಲ್ಲ. ಅವರನ್ನು ಒಂದು ರೂಪಕವಾಗಿ ಬಳಸಿಕೊಂಡಿದ್ದೇವೆ ಅಷ್ಟೇ. ಅವರು ಹಾಕಿಕೊಟ್ಟ ಮಾರ್ಗವನ್ನು ನಾವು ಇಂದಿಗೂ ಅನುಸರಿಸುತ್ತಿದ್ದೇವೆ. ಅದನ್ನು ಪುನೀತ್ ಅವರೂ ಕೂಡ ಅನುಸರಿಸಲಿದ್ದಾರೆ' ಎಂದು ನಿರ್ದೇಶಕರು ತಿಳಿಸಿದ್ದಾರೆ.[ಪುನೀತ್ ಅವರ 'ರಾಜಕುಮಾರ'ದಲ್ಲಿ ಎರಡು ಕಥೆ ಇದೆಯಂತೆ]

ದೊಡ್ಡ ನಟನನ್ನು ನಿಭಾಯಿಸುವ ಆತ್ಮವಿಶ್ವಾಸ ತೋರಿರುವ ಸಂತೋಷ್ ಅವರು ಈ ಸಿನಿಮಾ ತಮ್ಮ ಹಿಂದಿನ ಸಿನಿಮಾಗಿಂತಲೂ ಬಹಳ ವಿಭಿನ್ನವಾಗಿ ಮೂಡಿಬರಲಿದೆ ಎನ್ನುತ್ತಾರೆ.

ಇನ್ನು ಪುನೀತ್ ಅವರಿಗೆ ವಿಷಯವನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರ ವಹಿಸಿರುವ ಸಂತೋಷ್ ಆನಂದ್ ರಾಮ್ ಅವರು ಸ್ಕ್ರಿಪ್ಟ್ ತಯಾರಿಯ ವೇಳೆಯಲ್ಲಿ ಪುನೀತ್ ಅವರ ಜೊತೆ ಹತ್ತಾರು ಬಾರಿ ಚರ್ಚಿಸಿದ್ದಾರಂತೆ.[ಪುನೀತ್ ರ 'ರಾಜಕುಮಾರ' ಚಿತ್ರದ ಬಗ್ಗೆ ಜಗ್ಗೇಶ್ ಹೇಳಿದ್ದೇನು?]

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಮ್ಯೂಸಿಕ್ ಕಂಪೋಸಿಷನ್ ಈ ಚಿತ್ರಕ್ಕಿದ್ದು, ನೃತ್ಯ ನಿರ್ದೇಶಕ ಹರ್ಷ ಅವರು ನೃತ್ಯ ನಿರ್ದೇಶನ ಮಾಡಲಿದ್ದಾರೆ. ರವಿವರ್ಮಾ ಅವರ ಫೈಟ್ ಈ ಚಿತ್ರಕ್ಕಿದೆ..

-
-
-
-
-
-
-
-
-
-
-
    English summary
    Kannada Actor Puneeth Rajkumar starrer 'Rajakumara', launched a year ago, finally goes on floors this week. The 30 -member-crew left for Australia on Sunday (April 17). Director Santhosh Ananddram, who is helming his second project after delivering a blockbuster debut 'Mr.and Mrs. Ramachari'.
    Please Wait while comments are loading...

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada