For Quick Alerts
  ALLOW NOTIFICATIONS  
  For Daily Alerts

  'ಮಹದಾಯಿ ಹೋರಾಟದ ಬಂದ್' ಬಗ್ಗೆ ಪುನೀತ್ ಕೊಟ್ಟ ಹೇಳಿಕೆ

  By Naveen
  |
  'ಮಹದಾಯಿ ಹೋರಾಟದ ಬಂದ್' ಬಗ್ಗೆ ಪುನೀತ್ ಕೊಟ್ಟ ಹೇಳಿಕೆ | Filmibeat Kannada

  ಮಹದಾಯಿ ನೀರಿನ ಹೋರಾಟಕ್ಕಾಗಿ ನಾಳೆ ಕರ್ನಾಟಕ ಬಂದ್ ಮಾಡುವ ಬಗ್ಗೆ ನಟ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಎರಡನೇ ಸಿನಿಮಾದ ಮುಹೂರ್ತ ಇಂದು ಕಂಠಿರವ ಸ್ಟೂಡಿಯೋದಲ್ಲಿ ನಡೆದಿದ್ದು ಈ ವೇಳೆ ಪುನೀತ್ ಮಹದಾಯಿ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ''ನಾವು ಕನ್ನಡಿಗರೆ, ಈ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಸಿಗುವಂತಾಗಲಿ''. ಎಂದು ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಈ ಹಿಂದೆಯೇ ಆದ ಮಹದಾಯಿ ಮತ್ತು ಕಾವೇರಿ ವಿಚಾರದ ಹೋರಾಟಗಳಲ್ಲಿ ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದರು.

  ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್

  ಪುನೀತ್ ನಿರ್ಮಾಣದ ಎರಡನೇ ಚಿತ್ರ 'ಮಯಾ ಬಜಾರ್' ಸಿನಿಮಾದ ಮುಹೂರ್ತ ಇಂದು ನೆರವೇರಿದೆ. 'ಕವಲು ದಾರಿ' ಸಿನಿಮಾದ ನಂತರ ಅಪ್ಪು ಬಂಡವಾಳ ಹಾಕುತ್ತಿರುವ ಸಿನಿಮಾ ಇದಾಗಿದೆ. 'ಮಯಾ ಬಜಾರ್' ಚಿತ್ರದಲ್ಲಿ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್, ವಸಿಷ್ಟ, ಅಚ್ಚುತ್ ಕುಮಾರ್, ಸುಧಾರಾಣಿ, ಚೈತ್ರ ರಾವ್ ನಟಿಸಿದ್ದಾರೆ.

  ರಾಧಾಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಪಿ.ಆರ್.ಕೆ ಬ್ಯಾನರ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 'ಮಯಾ ಬಜಾರ್' ಟೈಟಲ್ ಟೀಸರ್ ಕೂಡ ಇಂದು ರಿಲೀಸ್ ಆಗಿದೆ.

  English summary
  Kannada actor Puneeth Rajkumar gave reaction about mahadayi river protest today in Kanteerava Studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X