ಪುನೀತ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸಂಜೆಗೆ ಸಿಗಲಿದೆ 'ಯುವರತ್ನ' ದರ್ಶನ
ನಟ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. ಪುನೀತ್ ಅಭಿನಯದ 'ಯುವರತ್ನ' ಸಿನಿಮಾದ 'ಪ್ರೋಮೊ' ಇಂದು (ನವೆಂಬರ್ 27) ಬಿಡುಗಡೆ ಆಗಲಿದೆ.
'ಪವರ್ ಆಫ್ ಯುತ್' ಪ್ರೊಮೊ ಇಂದು ಸಂಜೆ 4:30 ಕ್ಕೆ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ದೇಶಕ ಸಂತೋಶ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಪ್ರೊಮೋ ನಲ್ಲಿ ಸಂತೋಶ್ ಆನಂದ್ ರಾಮ್, ಪುನೀತ್ ರಾಜ್‌ಕುಮಾರ್ ಜೊತೆಗೆ ನರ್ತಿಸಿದ್ದಾರಂತೆ. ಅಷ್ಟೇ ಅಲ್ಲ ಎಲ್ಲರಿಗೂ ಪುನೀತ್ ಅವರೊಂದಿಗೆ ಡಾನ್ಸ್ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ ನಿರ್ದೇಶಕ ಸಂತೋಶ್ ಆನಂದ್‌ರಾಮ್.

ಇಂದು ಸಂಜೆ 4:30 ಕ್ಕೆ ಹೊಂಬಾಳೆ ಫಿಲಮ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ 'ಪವರ್ ಆಫ್ ಯುತ್' ಪ್ರೊಮೊ ಬಿಡುಗಡೆ ಆಗಲಿದೆ.
ಯುವರತ್ನ ಸಿನಿಮಾವನ್ನು ಸಂತೋಶ್ ಆನಂದ್ ರಾಮ್ ನಿರ್ದೇಶಿಸಿದ್ದಾರೆ. ಈ ಹಿಂದೆ ಪುನೀತ್‌ಗಾಗಿ ರಾಜಕುಮಾರ್ ನಿರ್ದೇಶಿಸಿದ್ದರು ಸಂತೋಶ್. ವಿಜಯ್ ಕಿರಗಂದೂರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಸಿನಿಮಾದಲ್ಲಿ ಸಾಯೆಶಾ ನಾಯಕಿಯಾಗಿ ನಟಿಸಿದ್ದಾರೆ. ನಟ ಧನಂಜಯ್, ದಿಗಂತ್, ಪ್ರಕಾಶ್ ರೈ, ಸೋನು ಗೌಡ ಇನ್ನೂ ಹಲವರು ನಟ-ನಟಿಯರು ಇದ್ದಾರೆ. ಪುನೀತ್ ಈಗ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











