For Quick Alerts
  ALLOW NOTIFICATIONS  
  For Daily Alerts

  ಅಪ್ಪು ಜೊತೆಗೆ ಸತ್ಯ ಪ್ರಕಾಶ್ ಸಿನಿಮಾ: ಎಲ್ಲಿಗೆ ಬಂದಿದೆ? ಪ್ರಾರಂಭ ಯಾವಾಗ?

  |

  'ರಾಮಾ ರಾಮಾ ರೇ' ಸಿನಿಮಾದ ಮೂಲಕ ಗಮನ ಸೆಳೆದ ನಿರ್ದೇಶಕ ಸತ್ಯ ಪ್ರಕಾಶ್ ಬಗ್ಗೆ ಇಡೀಯ ಕನ್ನಡ ಚಿತ್ರರಂಗವೇ ಕುತೂಹಲದ ಕಣ್ಣಿಟ್ಟು ನೋಡುತ್ತಿದೆ.

  'ರಾಮಾ ರಾಮಾ ರೇ' ಮೂಲಕ ಚಿತ್ರರಂಗದ ದಿಗ್ಗಜರೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸತ್ಯ ಪ್ರಕಾಶ್, ಇದೀಗ ಪುನೀತ್ ರಾಜ್‌ಕುಮಾರ್‌ ರವರ ಪಿಆರ್‌ಕೆ ಪ್ರೊಡಕ್ಷನ್‌ಗಾಗಿ ಸಿನಿಮಾ ಮಾಡುತ್ತಿದ್ದಾರೆ.

  'ಮ್ಯಾನ್ ಆಫ್‌ ದಿ ಮ್ಯಾಚ್' ಹೆಸರಿನ ಸಿನಿಮಾವನ್ನು ಸತ್ಯಪ್ರಕಾಶ್ ನಿರ್ದೇಶಿಸಿದ್ದು ಸಿನಿಮಾವು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಈ ಹಿಂದೆ ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಪುನೀತ್ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು, ಆದರೆ ಆ ಸಿನಿಮಾ ಈಗ ಎಲ್ಲಿಗೆ ಬಂದು ನಿಂತಿದೆ, ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಸತ್ಯಪ್ರಕಾಶ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

  ಪುನೀತ್ ಕರೆ ಮಾಡಿ ಅಭಿನಂದಿಸಿದ್ದರು: ಸತ್ಯ

  ಪುನೀತ್ ಕರೆ ಮಾಡಿ ಅಭಿನಂದಿಸಿದ್ದರು: ಸತ್ಯ

  ''ರಾಮಾ ರಾಮಾ ರೇ' ಸಿನಿಮಾ ಬಿಡುಗಡೆ ಆದಾಗ ಪುನೀತ್ ಅವರು ಕರೆ ಮಾಡಿ ಅಭಿನಂದಿಸಿದ್ದರು. ಅದಾದ ಬಳಿಕ ಒಮ್ಮೆ ನಾನು, ನಿಮಗೆ ಕತೆ ಬರೆದುಕೊಂಡಿದ್ದೀನಿ, ಹೇಳಲೆ? ಎಂದಾಗ ಆಯಿತೆಂದು, ಪುನೀತ್ ಅವರು ಕತೆ ಕೇಳಿದರು. ಕತೆ ಅವರಿಗೆ ಬಹಳ ಇಷ್ಟವಾಯಿತು. ಆದರೆ ಕೊರೊನಾ ಅಡ್ಡ ಬಂದ ಕಾರಣ ಆ ಕತೆ ಮುಂದುವರೆಯಲಿಲ್ಲ'' ಎಂದಿದ್ದಾರೆ ಸತ್ಯ.

  ಕತೆ ಅರ್ಧಕ್ಕೆ ನಿಂತಿದೆ: ಸತ್ಯ

  ಕತೆ ಅರ್ಧಕ್ಕೆ ನಿಂತಿದೆ: ಸತ್ಯ

  ''ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಹಾಗೂ ಸ್ವತಃ ಪುನೀತ್ ವ್ಯಕ್ತಿತ್ವ ಇದನ್ನೆಲ್ಲ ಆಲೋಚಿಸಿ ನಾವು ಸಿನಿಮಾದ ಕತೆ ಮಾಡಿಕೊಂಡಿದ್ದೆವು. ಆದರೆ ಸಿನಿಮಾದ ಎರಡನೇ ಭಾಗ ನಮಗೆ ಅಷ್ಟಾಗಿ ಹಿಡಿಸಿರಲಿಲ್ಲ. ಪುನೀತ್ ಅವರಿಗೂ ಅದು ಅಷ್ಟಾಗಿ ಹಿಡಿಸಿರಲಿಲ್ಲ. ಹಾಗಾಗಿ ನಾವು ಅದನ್ನು ಮರು ಬರೆಯುತ್ತಿದ್ದೆವು, ಸಾಕಷ್ಟು ಬಾರಿ ಮರು ಬರೆದೆವು ಆದರೆ ಅದೇಕೋ ಮನಸ್ಸಿಗೆ ಸರಿಬರಲಿಲ್ಲ. ಅದೇ ಸಮಯಕ್ಕೆ ಕೋವಿಡ್ ಸಹ ಬಂದೆರಗಿತು. ಹಾಗಾಗಿ ಆ ಸಿನಿಮಾವನ್ನು ಅಲ್ಲಿಗೇ ಕೈ ಬಿಟ್ಟೆವು. ಮುಂದೆ ಮತ್ತೆ ಆ ಕತೆಯನ್ನು ಮತ್ತೆ ಕೈಗೆತ್ತಿಕೊಳ್ಳುತ್ತೇವಾ ನೋಡೋಣ'' ಎಂದಿದ್ದಾರೆ ಸತ್ಯ ಪ್ರಕಾಶ್.

  ಗುಣಮಟ್ಟದ ಕಂಟೆಂಟ್ ಕೊಡಬೇಕೆಂಬುದು ಪುನೀತ್ ಹಪಾ-ಹಪಿ

  ಗುಣಮಟ್ಟದ ಕಂಟೆಂಟ್ ಕೊಡಬೇಕೆಂಬುದು ಪುನೀತ್ ಹಪಾ-ಹಪಿ

  ''ಅದೇ ಸಮಯಕ್ಕೆ 'ಮ್ಯಾನ್ ಆಫ್‌ ದಿ ಮ್ಯಾಚ್' ಕತೆ ಸಿದ್ಧವಾಗಿತ್ತು. ಈ ಸಿನಿಮಾದ ಕತೆ ಪುನೀತ್ ಅವರಿಗೆ ಬಹಳ ಇಷ್ಟವಾಯಿತು. ಈ ಸಿನಿಮಾವನ್ನು ತಾವೇ ನಿರ್ಮಾಣ ಮಾಡುವುದಾಗಿ ಹೇಳಿದರು. ಪುನೀತ್ ಅವರಿಗೆ ಗುಣಮಟ್ಟದ ಬಗ್ಗೆ ಬಹಳ ಆಸಕ್ತಿ. ಲೈಟಿಂಗ್, ಸೌಂಡ್ಸ್, ಕ್ಯಾಮೆರಾ ಇತರೆ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಾರೆ. ಅವರೊಟ್ಟಿಗೆ ಯಾವಾಗಲಾದರೂ, ಎಷ್ಟು ಹೊತ್ತಾದರೂ ಸಿನಿಮಾ ಬಗ್ಗೆ ಮಾತನಾಡಬಹುದು, ಗುಣಮಟ್ಟವೇ ಅವರ ಮೂಲಮಂತ್ರ. ಸಿನಿಮಾದಲ್ಲಿ ಬಳಕೆಯಾಗುವ ಹೊಸ ತಂತ್ರಜ್ಞಾನಗಳ ಬಗ್ಗೆ ಬಹಳ ಕುತೂಹಲವನ್ನು ಪುನೀತ್ ಹೊಂದಿದ್ದಾರೆ'' ಎಂದರು ಸತ್ಯ.

  'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾ ಬಗ್ಗೆ ಸತ್ಯ ಮಾತು

  'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾ ಬಗ್ಗೆ ಸತ್ಯ ಮಾತು

  ಬಿಡುಗಡೆಗೆ ತಯಾರಾಗಿರುವ ತಮ್ಮ ಸಿನಿಮಾ 'ಮ್ಯಾನ್ ಆಫ್‌ ದಿ ಮ್ಯಾಚ್‌' ಬಗ್ಗೆ ಮಾತನಾಡಿದ ಸತ್ಯ, ''ಇದು ಕ್ರೀಡೆಗೆ ಸಂಬಂಧಿಸಿದ ಸಿನಿಮಾ ಅಲ್ಲ ಬದಲಿಗೆ, ಸಾಮಾಜಿಕ ಜಾಲತಾಣ ಯುಗದಲ್ಲಿ ಜನ ಸೂಕ್ಷ್ಮತೆ ಕಳೆದುಕೊಳ್ಳುತ್ತಿರುವ ಬಗ್ಗೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಡಂಬನಾತ್ಮಕವಾಗಿ ನೋಡುವ ಪ್ರಯತ್ನ ಈ ಸಿನಿಮಾ. ಇದು ನನ್ನ ಮೊದಲ ಕಮರ್ಷಿಯಲ್ ಅಪ್ರೋಚ್ ಉಳ್ಳ ಸಿನಿಮಾ ಎನ್ನಬಹುದು. ಸಿನಿಮಾದ ಆಡಿಷನ್‌ನ ಕತೆಯನ್ನು 'ಮ್ಯಾನ್‌ ಆಫ್‌ ದಿ ಮ್ಯಾಚ್' ಹೊಂದಿದ್ದು, ಒಂದು ದಿನದಲ್ಲಿ ನಡೆವ ಕತೆ ಇದಾಗಿದೆ. ಸಿನಿಮಾದ ಸಂಪೂರ್ಣ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿಯೇ ಮಾಡಿದ್ದೇವೆ. ಸಿನಿಮಾದಲ್ಲಿ 'ರಾಮಾ ರಾಮಾ ರೇ' ತಂಡವೇ ಬಹುತೇಕ ಇದೆ. ಧರ್ಮಣ್ಣ, ನಟರಾಜ, ಇನ್ನೂ ಕೆಲವರು ಈ ಸಿನಿಮಾದಲ್ಲಿದ್ದಾರೆ'' ಎಂದಿದ್ದಾರೆ ಸತ್ಯ ಪ್ರಕಾಶ್.

  English summary
  Director Sathya Prakash said He told story to Puneeth he enjoys the story but re writing the second half story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X