ಆಂಜನೇಯನ ಮೊರೆ ಹೋದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇತ್ತೀಚೆಗೆ ಬರೀ ನಟನೆಯಲ್ಲಿ ಮಾತ್ರವಲ್ಲದೇ, ಚಿತ್ರಕ್ಕೆ ಹಾಡುವ ಮೂಲಕ ಕೂಡ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಹಲವಾರು ಸಿನಿಮಾಗಳಲ್ಲಿ ಪುನೀತ್ ಅವರು ಹಾಡಿರುವ ಒಂದು ಹಾಡಾದರೂ ಇದ್ದೇ ಇರುತ್ತೆ.
ಇದೀಗ 'ಭಜರಂಗಿ' ಚಿತ್ರದ ನಿರ್ದೇಶಕ ಎ.ಹರ್ಷ ಅವರು ಕೂಡ ತಮ್ಮ ಮುಂದಿನ ಕಾಮಿಡಿ 'ಜೈ ಮಾರುತಿ 800' ಚಿತ್ರದ ಶೀರ್ಷಿಕೆ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಂದ ಹಾಡಿಸಿದ್ದಾರೆ.[ಹರ್ಷ 'ಮಾರುತಿ 800' ನಲ್ಲಿ ಶರಣ್ ಜೊತೆ ಶ್ರುತಿ ಹರಿಹರನ್]

ಚೇತನ್ ಕುಮಾರ್ ಅವರು ಬರೆದಿರುವ 'ಜೈ ಮಾರುತಿ 800' ಚಿತ್ರದ ಶೀರ್ಷಿಕೆ ಹಾಡಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಬೆಂಗಳೂರಿನ ಸ್ಟುಡಿಯೋ ಒಂದರಲ್ಲಿ ಪುನೀತ್ ಅವರು ಶೀರ್ಷಿಕೆ ಹಾಡಿಗೆ ಧ್ವನಿಯಾಗಿದ್ದಾರೆ.

'ಇದೇ ಮೊದಲ ಬಾರಿಗೆ ನನ್ನ ನಿರ್ದೇಶನದ ಚಿತ್ರದ ಹಾಡೊಂದಕ್ಕೆ ಪುನೀತ್ ಅವರು ವಾಯ್ಸ್ ನೀಡಿದ್ದಾರೆ. ಹಾಡಿನ ಟ್ಯೂನ್ ಕೇಳಿದಾಗ ಪುನೀತ್ ಅವರು ಉತ್ಸುಕರಾಗಿದ್ದು, ಹನುಮಾನ್ ಮೇಲೆ ಅವರು ಕೇಳಿರುವ ಅತ್ಯುತ್ತಮ ಹಾಡುಗಳಲ್ಲಿ ಇದೊಂದು ಎಂಬುದು ಅವರ ಅಭಿಪ್ರಾಯವಾಗಿತ್ತು' ಎಂದು ನಿರ್ದೇಶಕ ಕಮ್ ನೃತ್ಯ ನಿರ್ದೇಶಕ ಎ.ಹರ್ಷ ಅವರು ತಿಳಿಸಿದ್ದಾರೆ.['ಜೈ ಮಾರುತಿ 800' ಫುಲ್ ಕಾಮಿಡಿ ಸಿನಿಮಾ: ಎ ಹರ್ಷ]

ಜಯಣ್ಣ ಕಂಬೈನ್ಸ್ ಸಂಸ್ಥೆ ನಿರ್ಮಾಣ ಮಾಡಿರುವ 'ಜೈ ಮಾರುತಿ 800' ಚಿತ್ರದ ಚಿತ್ರೀಕರಣ ಸೇರಿದಂತೆ ಇನ್ನಿತರೇ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಇದೇ ವಾರದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.[ಹರ್ಷ 'ಮಾರುತಿ 800' ಗೆ ಶುಭಾ ಪೂಂಜಾ ಸೇರ್ಪಡೆ]

ಕಾಮಿಡಿ ಕಿಂಗ್ ಶರಣ್, 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಮತ್ತು ನಟಿ ಶುಭಾ ಪೂಂಜಾ ನಟಿಸಿರುವ 'ಜೈ ಮಾರುತಿ 800' ಚಿತ್ರ ಪಕ್ಕಾ ಕಾಮಿಡಿ ಸಿನಿಮಾ.


Click it and Unblock the Notifications











