For Quick Alerts
  ALLOW NOTIFICATIONS  
  For Daily Alerts

  ಪುಟ್ಟ ಮಗು ಅಪ್ಪು ಆಸೆಯನ್ನು ಕ್ಷಣದಲ್ಲೇ ಈಡೇರಿಸಿದ್ದ ಎನ್ ಟಿ ಆರ್

  |
  ಪುಟ್ಟ ಮಗು ಅಪ್ಪು ಆಸೆಯನ್ನು ಕ್ಷಣದಲ್ಲೇ ಈಡೇರಿಸಿದ್ದ ಎನ್ ಟಿ ಆರ್..! | FILMIBEAT KANNADA

  ಕನ್ನಡದಲ್ಲಿ ಡಾ ರಾಜ್ ಕುಮಾರ್ ಹೇಗೋ ಅದೇ ರೀತಿ ತೆಲುಗು ನಾಡಿನಲ್ಲಿ ಎನ್ ಟಿ ರಾಮರಾವ್ ಕೂಡ ಮಹಾನ್ ನಟರು. ಈ ನಟರ ಜೀವನಾಧಾರಿತ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. ಈ ವಿಶೇಷವಾಗಿ ನಿನ್ನೆ ನಟ ಬಾಲಕೃಷ್ಣ ಬೆಂಗಳೂರಿಗೆ ಬಂದಿದ್ದರು.

  ನಿನ್ನೆಯ ಕಾರ್ಯಕ್ರಮದಲ್ಲಿ ಕನ್ನಡ ನಟರಾದ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಸಹ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎನ್ ಟಿ ಆರ್ ಕುಟುಂಬ ಹಾಗೂ ತಮ್ಮ ಕುಟುಂಬದ ಅನುಬಂಧದ ಬಗ್ಗೆ ಮಾತನಾಡಿದ ಪುನೀತ್ ಅನೇಕ ವಿಚಾರಗಳನ್ನು ಹಂಚಿಕೊಂಡರು.

  ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?

  ಎನ್ ಟಿ ಆರ್ ಅವರ ಬಗ್ಗೆ ಅನೇಕರಿಗೆ ತಿಳಿಯದ ಒಂದು ಘಟನೆಯನ್ನು ಪುನೀತ್ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಅದು ಮಾತುಗಳು ಮುಂದಿವೆ ಓದಿ...

  ಮೊದಲ ಬಾರಿ ನೋಡಿದ್ದು

  ಮೊದಲ ಬಾರಿ ನೋಡಿದ್ದು

  ಪುನೀತ್ ರಾಜ್ ಕುಮಾರ್ ಆಗಿನ್ನು ಐದು ವರ್ಷದ ಹುಡುಗನಾಗಿದ್ದರು. ಆಗ ಒಮ್ಮೆ ತಂದೆ ರಾಜ್ ಕುಮಾರ್ ಜೊತೆಗೆ ಪುನೀತ್ ಹೈದರಾಬಾದ್ ಗೆ ಹೋಗಿದ್ದರಂತೆ. ಈ ವೇಳೆ ಎನ್ ಟಿ ಆರ್ ಅವರ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಪುನೀತ್ ರನ್ನು ಕರೆದುಕೊಂಡು ರಾಜ್ ಹೋಗಿದ್ದಾರೆ. ಅಲ್ಲಿಯೇ ಮೊದಲ ಬಾರಿಗೆ ಎನ್ ಟಿ ಆರ್ ರನ್ನು ಪುನೀತ್ ನೋಡಿದರಂತೆ.

  ಕಾರು ಕೇಳಿದ ಪುನೀತ್

  ಕಾರು ಕೇಳಿದ ಪುನೀತ್

  ಆ ಸಿನಿಮಾದಲ್ಲಿ ಎನ್ ಟಿ ಆರ್ ಕಾರು ಡೈವರ್ ಪಾತ್ರ ಮಾಡುತ್ತಿದ್ದರಂತೆ. ಚಿತ್ರೀಕರಣದ ವೇಳೆ ಬಂದಿದ್ದ ಪುನೀತ್ ನನಗೆ ಆ ಕಾರು ಬೇಕು ಅಂತ ಹಠ ಮಾಡಿದರಂತೆ. ಆಶ್ಚರ್ಯ ಅಂದರೆ, ಒಂದು ದಿನದ ನಂತರ ನೋಡಿದರೆ ಆ ಕಾರು ರಾಜ್ ಕುಮಾರ್ ಅವರ ಮನೆಗೆ ಮುಂದೆ ಬಂದು ನಿಂತಿತಂತೆ.

  'NTR' ಬಯೋಪಿಕ್ ನಲ್ಲಿ ಇರುತ್ತಾ ರಾಜ್ ಕುಮಾರ್ ಪಾತ್ರ?

  ಅಪ್ಪು ಆಸೆ ಈಡೇರಿಸಿದ್ದ ಎನ್ ಟಿ ಆರ್

  ಅಪ್ಪು ಆಸೆ ಈಡೇರಿಸಿದ್ದ ಎನ್ ಟಿ ಆರ್

  ರಾಜ್ ಕುಮಾರ್ ಅವರ ಸಣ್ಣ ಮಗ ಇಷ್ಟ ಪಟ್ಟಿದ್ದಾನೆ ಎಂದು ಆ ಕಾರನ್ನು ಎನ್ ಟಿ ಆರ್ ರಾಜ್ ಕುಮಾರ್ ಮನೆಗೆ ಕಳುಹಿಸಿಕೊಟ್ಟಿದ್ದರಂತೆ. ಆದರೆ, ರಾಜ್ ಕುಮಾರ್ ಮತ್ತೆ ಅದನ್ನು ಪ್ರೀತಿಯಿಂದ ಮರಳಿ ನೀಡಿದರಂತೆ. ಹೀಗೆ ರಾಜ್ ಕುಟುಂಬದ ಮೇಲೆ ಎನ್ ಟಿ ಆರ್ ಬಹಳ ಪ್ರೀತಿ ಹೊಂದಿದ್ದರು.

  ಎನ್ ಟಿ ಆರ್ ಗುಣಗಾನ ಮಾಡಿದ ಪುನೀತ್

  ಎನ್ ಟಿ ಆರ್ ಗುಣಗಾನ ಮಾಡಿದ ಪುನೀತ್

  ''ಕರ್ನಾಟಕದಲ್ಲಿ ಅಪ್ಪಾಜಿ ಇದ್ದ ಹಾಗೆ ಆಂಧ್ರದಲ್ಲಿ ಎನ್ ಟಿ ಆರ್ ಅವರನ್ನು ಜನ ಪ್ರೀತಿಸುತ್ತಾರೆ. ಎನ್ ಟಿ ಆರ್ ಅವರು ನಮ್ಮ ತಂದೆಯನ್ನು ತಮ್ಮುಡು (ತಮ್ಮ) ಎಂದು ಕರೆಯುತ್ತಿದ್ದರು. ನಮ್ಮ ಕುಟುಂಬದ ಮೇಲೆ ಅವರು ಇಟ್ಟಿರುವ ಪ್ರೀತಿ ದೊಡ್ಡದು. ಅದರಲ್ಲಿಯೂ ಶಿವಣ್ಣ ಮತ್ತು ಬಾಲಕೃಷ್ಣ ತುಂಬ ಒಳ್ಳೆಯ ಒಡನಾಟ ಹೊಂದಿದ್ದಾರೆ.'' - ಪುನೀತ್ ರಾಜ್ ಕುಮಾರ್, ನಟ

  ಅಂಬರೀಶ್ ನೆನೆದು ಭಾವುಕರಾದ ನಟ ಬಾಲಯ್ಯ

  English summary
  Puneeth Rajkumar spoke about telugu actor NTR

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X