»   »  ಹೊಸ ವರ್ಷಕ್ಕೆ ಪುನೀತ್ ರಾಜ್ ಕುಮಾರ್ ರೆಸಲ್ಯೂಶನ್ ಏನು?

ಹೊಸ ವರ್ಷಕ್ಕೆ ಪುನೀತ್ ರಾಜ್ ಕುಮಾರ್ ರೆಸಲ್ಯೂಶನ್ ಏನು?

Posted By:
Subscribe to Filmibeat Kannada

ಹೊಸ ವರ್ಷದಲ್ಲಿ ಹೊಸ ರೀತಿಯ ನಿರ್ಣಯಗಳನ್ನ ತೆಗೆದುಕೊಳ್ಳುವುದು ಸಿನಿಮಾ ತಾರೆಯರಲ್ಲಿ ನೋಡಬಹುದು. ಸಿನಿಮಾ ಮಾಡೋ ಸ್ಟೈಲ್ ಚೇಂಜ್ ಮಾಡ್ಕೋಬೇಕು, ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾಡ್ಬೇಕು, ಹೊಸ ರೀತಿಯ ಪಾತ್ರಗಳನ್ನ ಆಯ್ಕೆ ಮಾಡ್ಕೋಬೇಕು ಎಂಬ ಹಲವು ನಿರ್ಧಾರಗಳನ್ನ ಕೈಗೊಳ್ಳುತ್ತಾರೆ.

2018ನೇ ವರ್ಷವನ್ನ ಸ್ವಾಗತಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ವರ್ಷಕ್ಕೆ ಕೆಲವು ನಿರ್ಧಾರಗಳನ್ನ ಕೈಗೊಂಡಿದ್ದಾರೆ. ಸಿನಿಮಾ ವಿಚಾರದಲ್ಲಿ, ತಮ್ಮ ಕುಟುಂಬ ವಿಚಾರದಲ್ಲಿ ಪುನೀತ್ ಕೆಲವು ಬಯಕೆಗಳನ್ನ ಇಟ್ಟುಕೊಂಡಿದ್ದಾರೆ.

ಹಾಗಿದ್ರೆ, ಈ ವರ್ಷ ದೊಡ್ಮನೆ ಹುಡ್ಗನ ಮನಸ್ಸಿನಲ್ಲಿ ಅಂದುಕೊಂಡಿರುವುದೇನು? ಹೊಸ ವರ್ಷದಲ್ಲಿ ಯೋಚಿಸಿರುವ ಅಂಶಗಳೇನು ಎಂಬುದನ್ನ ತಿಳಿಯಲು ಮುಂದೆ ಓದಿ....

ಫ್ಯಾಮಿಲಿ ಜೊತೆ ಪುನೀತ್ ಸಂಭ್ರಮ

ತಮ್ಮ ಮನೆಯಲ್ಲೇ, ಮಡದಿ ಮತ್ತು ಮಕ್ಕಳ ಜೊತೆಯಲ್ಲಿ ಹೊಸ ವರ್ಷವನ್ನ ಬರಮಾಡಿಕೊಂಡರು ಪುನೀತ್ ರಾಜ್ ಕುಮಾರ್. ಬೆಳಿಗ್ಗೆ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿ, ಹೊಸ ವರ್ಷವನ್ನ ಒಳ್ಳೆ ಫಿಟ್ನೆಸ್ ಹಾಗೂ ಒಳ್ಳೆ ಆರೋಗ್ಯದಿಂದ ಸ್ವಾಗತಿಸಿದರು.

ಮತ್ತೊಮ್ಮೆ ಅಪ್ಪುಗೆ ಆಕ್ಷನ್ ಕಟ್ : ರಾಜಮಾರ್ಗದಲ್ಲಿ ಸಂತೋಷ್ ಆನಂದ್ ರಾಮ್

2018ನೇ ವರ್ಷದ ರೆಸಲ್ಯೂಶನ್ ಏನು?

''ಎಲ್ಲ ಸಮಯದಲ್ಲೂ ಒಂದೇ ರೆಸಲ್ಯೂಶನ್ ಆರೋಗ್ಯ. ಲೈಫ್ ನಲ್ಲಿ ತುಂಬ ಮುಖ್ಯವಾದ ವಿಷ್ಯಗಳನ್ನ ರೆಸಲ್ಯೂಶನ್ ಆಗಿ ಇಟ್ಕೊಳ್ಳೋಕೆ ಹೋಗಲ್ಲ. ಯಾಕಂದ್ರೆ, ಜೀವನ ಹೇಗೆ ಕರೆದುಕೊಂಡು ಹೋಗುತ್ತೋ ಹಾಗೆ ಹೋಗ್ಬೇಕು''

ಟ್ರಾವಲ್ ಪ್ಲ್ಯಾನ್ ಇದೆ

''ಹೊಸ ವರ್ಷ ಬಂದಾಗ, ಹೊಸ ಹೊಸ ಊರಿಗೆ ಹೋಗಬೇಕು ಅಂತ ಯೋಚನೆ ಮಾಡ್ತೀನಿ. ಎಷ್ಟು ನಗುನಗುತಾ ಇರಬಹುದು, ಎಷ್ಟು ಪಾರ್ಟಿ ಮಾಡಬಹುದು, ಎಷ್ಟು ಖುಷಿ ಪಡಬಹುದು ಅಂತ ಯೋಚನೆ ಮಾಡ್ತೀನಿ. ಎರಡ್ಮೂರು ಟ್ರಾವಲ್ ಪ್ಲಾನ್ ಇದೆ. ಕೆಲವು ಕಡೆ ಡೈವ್ ಮಾಡ್ಬೇಕು ಅಂತ ಇಷ್ಟ, ನೋಡ್ಬೇಕು. ಬಹುಶಃ ಈ ವರ್ಷ ಅದು ನೆರವೇರಬಹುದು ಅಂತ ಅಂದುಕೊಂಡಿದ್ದೇನೆ''

ಕೋರ್ಟ್ ಆದೇಶಕ್ಕೆ ತಲೆಬಾಗಿದ 'ಅಂಜನಿಪುತ್ರ': ಡೈಲಾಗ್ ಗೆ ಬಿತ್ತು ಕತ್ತರಿ

ಡಿಫರೆಂಟ್ ಸಿನಿಮಾ ಮಾಡ್ಬೇಕು

''ಮನಸಲ್ಲಿ ನಿರೀಕ್ಷೆ ಜಾಸ್ತಿ ಇರುತ್ತೆ. ಪ್ರತಿ ಎರಡು ತಿಂಗಳಿಗೊಮ್ಮ ರಾಜಕುಮಾರ ಅಂತಹ ಸಿನಿಮಾ ಮಾಡ್ಬೇಕು ಅಂತ. ಆದ್ರೆ, ಲೈಫ್ ನಲ್ಲಿ ಯಾವುದು ಆ ತರ ಫಿಕ್ಸ್ ಮಾಡಿಕೊಳ್ಳುವುದಿಲ್ಲ. ವಿಭಿನ್ನವಾದ ಚಿತ್ರಗಳನ್ನ ಮಾಡಬೇಕು ಎನ್ನುವುದು ಮನಸ್ಸಿನಲ್ಲಿದೆ ಇದೆ. ಅದನ್ನ ಎದುರು ನೋಡುತ್ತಿದ್ದೇನೆ'' - ಪುನೀತ್ ರಾಜ್ ಕುಮಾರ್, ನಟ

English summary
Kannada Power star puneeth rajkumar spoke about his resolution of new year (2018). after success of anjaniputra movie, puneeth is currently busy with tv reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X