For Quick Alerts
  ALLOW NOTIFICATIONS  
  For Daily Alerts

  ಇಂದು 'ನಟಸಾರ್ವಭೌಮ'ನಿಗೆ ವಿಶೇಷವಾದ ದಿನ

  |

  ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಇಂದು ವಿಶೇಷವಾದ ದಿನ. ಯಾಕಂದ್ರೆ ಈ ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಒಂದು ವರ್ಷವಾಗಿದೆ. ವರ್ಷದ ಸಂಭ್ರಮದಲ್ಲಿದೆ ಚಿತ್ರತಂಡ. ನಟಸಾರ್ವೌಭೌಮ, ನಿರ್ದೇಶಕ ಪವನ್ ಒಡೆಯರ್ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾ.

  ಪವರ್ ಫುಲ್ ಟೈಟಲ್ ಮೂಲಕವೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದ ಸಿನಿಮಾ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತೆರೆಗೆ ಬಂದ ನಟಸಾರ್ವಭೌಮ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ವಿಶೇಷ ಅಂದರೆ ಪವರ್ ಸ್ಟಾರ್ ಪೋಸ್ಟರ್ ಗಳಿಗೆ ಬಿಯರ್ ಅಭಿಷೇಕ ಮಾಡಿ ಸಂಭ್ರಮಸಿದ್ದರು.

  ಪವರ್ ಸ್ಟಾರ್ ಜೊತೆ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ತೆಲುಗು ಡ್ಯಾನ್ಸ್ ಮಾಸ್ಟರ್ ಜಾನಿಪವರ್ ಸ್ಟಾರ್ ಜೊತೆ ಹ್ಯಾಟ್ರಿಕ್ ಬಾರಿಸಲು ಸಜ್ಜಾದ ತೆಲುಗು ಡ್ಯಾನ್ಸ್ ಮಾಸ್ಟರ್ ಜಾನಿ

  ಚಿತ್ರದಲ್ಲಿ ಪವರ್ ಸ್ಟಾರ್ ಗೆ ನಾಯಕಿ ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ಕಾಣಿಸಿಕೊಂಡಿದ್ದರು. ನಟಸಾರ್ವಭೌಮ ಸಿನಿಮಾ ಮೂಲಕ ಅನುಪಮಾ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬಂದಿದ್ದರು. ಇನ್ನು ಚಿತ್ರದಲ್ಲಿ ಹಿರಿಯ ನಟಿ ಸರೋಜದೇವಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

  ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಡಿ ಇಮಾನ್ ಸಂಗೀತ ಸಂಯೋಜನೆ ಮಾಡಿದ್ದರು. ಹಾಡುಗಳು ಮತ್ತು ಅಪ್ಪು ಡಾನ್ಸ್ ಅಭಿಮಾನಿಗಳ ಮನಗೆದ್ದಿತ್ತು. ಅಂದ್ಹಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ನಟಸಾರ್ವಭೌಮ ಸಿನಿಮಾ ನಂತರ ಅಪ್ಪು ಅಭಿನಯದ ಯಾವುದೆ ಸಿನಿಮಾ ತೆರೆಗೆ ಬಂದಿಲ್ಲ.

  ಸದ್ಯ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಕೊನೆಯ ಹಂತದ ಚಿತ್ರೀಕರಣದಲ್ಲಿ ಇರುವ ಚಿತ್ರತಂಡ ಬೇಸಿಗೆ ರಜೆಯ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

  English summary
  Kannada Actor Puneeth Rajkumar starrer Natasaarvabhowma completed one year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X