»   » 'ರಣವಿಕ್ರಮ'ನ ಪರಾಕ್ರಮ ನೋಡೋಕೆ ನೂಕು ನುಗ್ಗಲು

'ರಣವಿಕ್ರಮ'ನ ಪರಾಕ್ರಮ ನೋಡೋಕೆ ನೂಕು ನುಗ್ಗಲು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇಂದು ಸಡಗರದ ಹಬ್ಬ. ಅಪ್ಪು ಅಭಿನಯದ ಬಹುನಿರೀಕ್ಷಿತ ಹೈವೋಲ್ಟೇಜ್ ಸಿನಿಮಾ 'ರಣವಿಕ್ರಮ' ಇಂದು ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ. 'ರಣವಿಕ್ರಮ'ನ ಪರಾಕ್ರಮವನ್ನ ನೋಡೋಕೆ, ಎಲ್ಲಾ ಚಿತ್ರಮಂದಿರಗಳಲ್ಲೂ ಪವರ್ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ.

ಮುಖ್ಯ ಚಿತ್ರಮಂದಿರ ಬೆಂಗಳೂರಿನ ಸಂತೋಷ್ ನಲ್ಲಿ ಜನಸಾಗರವೇ ಹರಿದುಬಂದಿದೆ. ಪಟಾಕಿ ಸಿಡಿಸಿ, ಪುನೀತ್ ರಾಜ್ ಕುಮಾರ್ ಕಟೌಟ್ ಗೆ ಹಾಲಿನ ಅಭಿಶೇಕ ಮಾಡುವ ಮೂಲಕ 'ರಣವಿಕ್ರಮ'ನನ್ನ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ ಪವರ್ ಸ್ಟಾರ್ ಭಕ್ತರು.


Puneeth Rajkumar starrer Ranavikrama First show opening response

ಸಂತೋಷ್ ಚಿತ್ರಮಂದಿರದಲ್ಲಿ ಇಂದು ಮತ್ತು ನಾಳೆಯ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿವೆ. ಬ್ಲ್ಯಾಕ್ ನಲ್ಲಿ ಆಗಲೇ 300 ರೂಪಾಯಿವರೆಗೂ ಟಿಕೆಟ್ ಓಡುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ನಲ್ಲೂ ಇದೇ ಕಥೆ. ಅಷ್ಟೇ ಯಾಕೆ ವಿವಿಧ ಜಿಲ್ಲೆಗಳಲ್ಲಿರುವ ಚಿತ್ರಮಂದಿರಗಳಲ್ಲೂ ಇಂದಿನ ಎಲ್ಲಾ ಶೋಗಳ ಟಿಕೆಟ್ ಗಳು ಬುಕ್ ಆಗಿವೆ. [ಬಿಡುಗಡೆಗೆ ಮುನ್ನವೇ 'ರಣವಿಕ್ರಮ' ಚಿತ್ರದ ಕಥೆ ಲೀಕ್?]


ಅಷ್ಟರಮಟ್ಟಿಗೆ ಭರ್ಜರಿ ಓಪನ್ನಿಂಗ್ ಪಡೆದಿದ್ದಾನೆ 'ರಣವಿಕ್ರಮ'. ಖಡಕ್ ಪೊಲೀಸ್ ಅಧಿಕಾರಿಯಾಗಿ ಪುನೀತ್ ಅಭಿನಯಿಸಿರುವ ಸಿನಿಮಾ 'ರಣವಿಕ್ರಮ'. ಅಪ್ಪು ಜೊತೆ ಅಂಜಲಿ, ಅದಾ ಶರ್ಮಾ ಇದ್ದಾರೆ. 'ಗೋವಿಂದಾಯ ನಮಃ' ಮತ್ತು 'ಗೂಗ್ಲಿ' ಅಂತಹ ಬಿಗ್ ಹಿಟ್ ಕೊಟ್ಟಿರುವ ಪವನ್ ಒಡೆಯರ್, 'ರಣವಿಕ್ರಮ' ಮೂಲಕ ಯಶಸ್ಸು ಗಳಿಸಿದರೆ ಹ್ಯಾಟ್ರಿಕ್ ಸಾಧನೆ. ['ರಣವಿಕ್ರಮ' ಕುರಿತ ಹೇಳಲೇಬೇಕಾದ ವಿಚಾರಗಳು]


ಟೀಸರ್ ಮತ್ತು ಹಾಡುಗಳನ್ನ ನೋಡಿ, ಕೇಳಿ ಮೆಚ್ಚಿದ ಜನ 'ರಣವಿಕ್ರಮ'ನ ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಚಿತ್ರಮಂದಿರದ ಒಳಗೆ ಲಗ್ಗೆ ಇಟ್ಟಿದ್ದಾರೆ. 'ರಣವಿಕ್ರಮ'ನ ಅಸಲಿ ಮಾರ್ಕ್ಸ್ ಸದ್ಯದಲ್ಲೇ ಗೊತ್ತಾಗಲಿದೆ. 'ಫಿಲ್ಮಿಬೀಟ್ ಕನ್ನಡ'ದಲ್ಲಿ 'ರಣವಿಕ್ರಮ' ವಿಮರ್ಶೆಗಾಗಿ ಎದುರುನೋಡುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar starrer 'Ranavikrama' is released today (April 10th) all over Karnataka. Here is the report on the opening response for the First Show in the Main Theater Santhosh, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada