ರಾಘಣ್ಣನ 'ರಾಜತಂತ್ರ'ಕ್ಕೆ ಸಾಥ್ ನೀಡಿದ ಪುನೀತ್ ರಾಜ್ ಕುಮಾರ್

ರಾಘವೇಂದ್ರ ರಾಜ್ ಕುಮಾರ್ ನಟನೆಯಲ್ಲಿ ತಯಾರಾಗಿರುವ ರಾಜತಂತ್ರ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ರಾಜತಂತ್ರ ಈಗ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅಪ್ಪು ಜೊತೆಯಾಗಿದ್ದಾರೆ.

ಡಿಸೆಂಬರ್ 19 ರಂದು ಪುನೀತ್ ರಾಜ್ ಕುಮಾರ್ ಅವರು ರಾಘಣ್ಣನ ರಾಜತಂತ್ರ ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಶನಿವಾರ ಮಧ್ಯಾಹ್ನ 12.30ಕ್ಕೆ ರಾಜತಂತ್ರ ಚಿತ್ರದ ಟೀಸರ್ ಅಭಿಮಾನಿಗಳ ಮುಂದೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ರಾಜತಂತ್ರ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ರಾಘಣ್ಣನ ಜೊತೆ ಬಹುದೊಡ್ಡ ತಾರಬಳಗವೇ ಇದೆ. ಹಿರಿಯ ನಟಿ ಭವ್ಯ, ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Puneeth Rajkumar to launch the teaser of Raghavendra Rajkumars Rajathanthra

ಜೆಎಂ ಪ್ರಹ್ಲಾದ್ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ವಿಶ್ವಂ ಡಿಜಿಟಲ್ ಮೀಡಿಯಾ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಪಿವಿಆರ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗುತ್ತಿದೆ.

'ಅಮ್ಮನ ಮನೆ' ಸಿನಿಮಾ ಬಳಿಕ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಿರುವ ರಾಘವೇಂದ್ರ ರಾಜ್ ಕುಮಾರ್, 'ತ್ರಯಂಬಕ' ಸಿನಿಮಾ ಮಾಡಿದ್ದರು. ಅದಾದ ನಂತರ 'ಆಡಿಸಿದಾತ', 'ರಾಜತಂತ್ರ' ಚಿತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Power Star Puneeth Rajkumar to launch the teaser of Raghavendra Rajkumar's Rajathanthra on December 19th at 12.30pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X