For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ಬಿಡುಗಡೆ ಆಯ್ತು ಅಪ್ಪು ನಿರ್ಮಾಣದ 'ಕವಲುದಾರಿ' ಟೀಸರ್

  By Pavithra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆ 'ಪಿ ಆರ್ ಕೆ' ಮೂಲಕ ಆರಂಭವಾದ ಮೊದಲ ಚಿತ್ರ 'ಕವಲುದಾರಿ'. ಸದ್ಯ 'ಕವಲುದಾರಿ' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕ್ಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗಿ ಆಗಿದ್ದು, ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಸಿದ್ದವಾಗಿರುವ 'ಕವಲುದಾರಿ' ಚಿತ್ರದ ಟೀಸರ್ ಅನ್ನು ಅಕ್ಕ ಸಮ್ಮೆಳನದಲ್ಲಿಯೇ ಬಿಡುಗಡೆ ಮಾಡಿದ್ದಾರೆ.

  ಕೊನೆಗೂ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಪವರ್ ಸ್ಟಾರ್, ಮೊದಲ ಟ್ವೀಟ್ ಏನು.?ಕೊನೆಗೂ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಪವರ್ ಸ್ಟಾರ್, ಮೊದಲ ಟ್ವೀಟ್ ಏನು.?

  ವಿದೇಶ ನೆಲದಲ್ಲಿ ವಾಸವಾಗಿರುವ ಕನ್ನಡಿಗರಿಗೆ ಹಾಗೂ ಸಿನಿಮಾ ಪ್ರೇಮಿಗಳಿಗಾಗಿ 'ಕವಲುದಾರಿ' ಟೀಸರ್ ರಿಲೀಸ್ ಮಾಡಿರುವ ಅಪ್ಪು, ಅಲ್ಲಿಯ ಜನರ ಮುಂದೆ ತಮ್ಮ ನಿರ್ಮಾಣ ಸಂಸ್ಥೆಯ ಉದ್ದೇಶವನ್ನು ತಿಳಿಸಿ ಹೇಳಿದ್ದಾರೆ. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ 'ಕವಲುದಾರಿ ಟೀಸರ್' ಅಭಿಮಾನಿಗಳಿಂದ ವಿಮರ್ಶೆ ಪಡೆದುಕೊಂಡಿದೆ. 'ಕವಲುದಾರಿ' ಸಿನಿಮಾ ಟೀಸರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

  'ಕವಲುದಾರಿ' ಸಿನಿಮಾ ಟೀಸರ್ ಬಿಡುಗಡೆ

  'ಕವಲುದಾರಿ' ಸಿನಿಮಾ ಟೀಸರ್ ಬಿಡುಗಡೆ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಕವಲುದಾರಿ' ಸಿನಿಮಾ ಟೀಸರ್ ಅಕ್ಕ ಸಮ್ಮೇಳನದಲ್ಲಿ ಬಿಡುಗಡೆ ಆಗಿದೆ. ಮೋಷನ್ ಪೋಸ್ಟರ್ ನಿಂದಲೇ ಕುತೂಹಲ ಮೂಡಿಸಿದ್ದ 'ಕವಲುದಾರಿ' ಚಿತ್ರದ ಟೀಸರ್ ಇಂದು (ಸೆಪ್ಟೆಂಬರ್ 3) ಭಾರತದಲ್ಲಿಯೂ ಬಿಡುಗಡೆ ಆಗಿದೆ.

  ಅಭಿಮಾನಿಗಳಿಗಾಗಿ ನಿರ್ಮಾಣ ಸಂಸ್ಥೆ

  ಅಭಿಮಾನಿಗಳಿಗಾಗಿ ನಿರ್ಮಾಣ ಸಂಸ್ಥೆ

  ಅಕ್ಕ ಸಮ್ಮೆಳನದಲ್ಲಿ ಟೀಸರ್ ರಿಲೀಸ್ ಮಾಡಿದ ನಂತರ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಈ ಹಿಂದೆ 80ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿದ್ದು. ಪ್ರತಿ ಸಿನಿಮಾಗಳು ಜನರ ಮನ್ನಣೆಯನ್ನು ಪಡೆದುಕೊಂಡಿದ್ದು. ಮತ್ತೆ ಸಿನಿಮಾ ಪ್ರೇಕ್ಷಕರಿಗೆ ಉತ್ತಮ ಚಿತ್ರಗಳನ್ನು ನೀಡುವ ಉದ್ದೇಶದಿಂದ 'ಪಿ ಆರ್ ಕೆ' ಸಂಸ್ಥೆಯನ್ನು ಆರಂಭಿಸಿದ್ದೇನೆ. ಇಂತಹ ಮತ್ತಷ್ಟು ಚಿತ್ರಗಳು ಬಿಡುಗಡೆ ಆಗಲಿದೆ ನಿಮ್ಮ ಪ್ರೋತ್ಸಾಹ ಇರಲಿ ಎಂದಿದ್ದಾರೆ.

  ಟೀಸರ್ ಅನ್ನು ಟ್ವೀಟ್ ಮಾಡಿದ ಅಪ್ಪು

  ಟೀಸರ್ ಅನ್ನು ಟ್ವೀಟ್ ಮಾಡಿದ ಅಪ್ಪು

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ಮೊದಲ ಟ್ವೀಟ್ ಏನು ಮಾಡುತ್ತಾರೆ? ಎಂದು ಕಾದಿದ್ದ ಅಭಿಮಾನಿಗಳಿಗೆ 'ಕವಲುದಾರಿ' ಟೀಸರ್ ಅನ್ನು ಟ್ವೀಟ್ ಮಾಡಿದ್ದಾರೆ.

  ಕ್ಷಣ ಕ್ಷಣ ಕುತೂಹಲ ಮೂಡಿಸುತ್ತಿದೆ 'ಕವಲುದಾರಿ'

  ಕ್ಷಣ ಕ್ಷಣ ಕುತೂಹಲ ಮೂಡಿಸುತ್ತಿದೆ 'ಕವಲುದಾರಿ'

  ಒಂದು ನಿಮಿಷ 20 ಸೆಕೆಂಡ್ ಇರುವ 'ಕವಲುದಾರಿ' ಟೀಸರ್ ಕ್ಷಣ ಕ್ಷಣವೂ ಕುತೂಹಲ ಮೂಡಿಸುವಂತಿದೆ. ಚಿತ್ರದಲ್ಲಿ 'ಆಪರೇಷನ್ ಅಲಮೇಲಮ್ಮ' ಖ್ಯಾತಿಯ ರಿಷಿ ನಾಯಕನಾಗಿ ಅಭಿನಯ ಮಾಡಿದ್ದು ಅನಂತ್ ನಾಗ್, ಅಚ್ಚುತ್ ಕುಮಾರ್, ಹಾಗೂ ರೋಷನಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿದ್ದಾರೆ. ಟೀಸರ್ ನಲ್ಲಿ ಕ್ಯಾಮೆರಾ ವರ್ಕ್ ಹಾಗೂ ಹಿನ್ನಲೆ ಸಂಗೀತ ಅಭಿಮಾನಿಗಳನ್ನು ಸೆಳೆಯುತ್ತಿವೆ.

  English summary
  Kannada actor Puneeth Rajkumar unveil 'KavaluDaari' kannada movie teaser at Akka sammelana. Hemanth Rao directed the Kavaludaari movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X