For Quick Alerts
  ALLOW NOTIFICATIONS  
  For Daily Alerts

  ಮನೆಗೆ ಭೇಟಿ ಕೊಟ್ಟ ಪುನೀತ್ ರಾಜ್‌ಕುಮಾರ್ ಗೆ ಗದೆ ಕೊಟ್ಟ ಸಚಿವ

  |

  ನಟ ಪುನೀತ್ ರಾಜ್‌ಕುಮಾರ್ ಅವರು ಇಂದು (ಮಂಗಳವಾರ) ಅರಣ್ಯ ಸಚಿವ ಆನಂದ್ ಸಿಂಗ್ ಅವರ ಹೊಸಪೇಟೆಯ ನಿವಾಸಕ್ಕೆ ಭೇಟಿ ನೀಡಿದರು.

  ಪುನೀತ್ ಅವರನ್ನು ಆದರದಿಂದ ಸ್ವಾಗತಿಸಿದ ಸಚಿವ ಆನಂದ್ ಸಿಂಗ್, ಪುನೀತ್ ರಾಜ್‌ಕುಮಾರ್ ಅವರಿಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

  'ಜೇಮ್ಸ್' ಸಿನಿಮಾಗೆ ನಾಯಕಿ ಫಿಕ್ಸ್: ಮತ್ತೆ ಒಂದಾದ 'ರಾಜಕುಮಾರ' ಜೋಡಿ

  ಸಚಿವರ ಕುಟುಂಬದೊಂದಿಗೆ ಪುನೀತ್ ರಾಜ್‌ಕುಮಾರ್ ಉಪಹಾರ ಸೇವಿಸಿದರು. ಈ ಸಮಯ ಸಾರಿಗೆ ಸಚಿವ ಲಕ್ಷ್ಮಣ ಸವಧಿ ಸಹ ಹಾಜರಿದ್ದರು. ಅವರು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆಂದು ಹೊಸಪೇಟೆಗೆ ಬಂದಿದ್ದರು.

  ಹೊಸಪೇಟೆ ಸುತ್ತ-ಮುತ್ತ ಚಿತ್ರೀಕರಣ

  ಹೊಸಪೇಟೆ ಸುತ್ತ-ಮುತ್ತ ಚಿತ್ರೀಕರಣ

  ಜೇಮ್ಸ್‌ ಸಿನಿಮಾದ ಚಿತ್ರೀಕರಣಕ್ಕೆಂದು ಒಂದು ವಾರದಿಂದಲೂ ಬಳ್ಳಾರಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ನಟ ಪುನೀತ್ ರಾಜ್‌ಕುಮಾರ್. ಸಿನಿಮಾದ ಚಿತ್ರೀಕರಣವು ಹೊಸಪೇಟೆ, ಗಂಗಾವತಿ, ಕಮಲಾಪುರ, ಹಂಪಿ ಗಳಲ್ಲಿ ನಡೆಯುತ್ತಿದೆ.

  ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿದ್ದ ಪುನೀತ್‌

  ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿದ್ದ ಪುನೀತ್‌

  ಕೆಲವು ದಿನಗಳ ಹಿಂದೆಯಷ್ಟೆ ಪುನೀತ್ ರಾಜ್‌ಕುಮಾರ್ ಅವರು ಗೆಳೆಯರೊಂದಿಗೆ ಸೇರಿ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ್ದರು. ಪುನೀತ್, ಟಿಬಿ ಡ್ಯಾಂ ಗೆ ಭೇಟಿ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.

  'ಜೇಮ್ಸ್' ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಕೈಮುಗಿದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

  ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು

  ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು

  ಹೊಸಪೇಟೆ ಸಮೀಪದ ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ಕಾರಣ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ಅವರನ್ನು ನೋಡಲು ಧಾವಿಸಿದ್ದಾರೆ. ಇದರಿಂದ ಚಿತ್ರೀಕರಣಕ್ಕೆ ಸಮಸ್ಯೆ ಆದ ಪ್ರಸಂಗವೂ ನಡೆದಿದೆ, ಸ್ವತಃ ಪುನೀತ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಸಮಾಧಾನ ಪಡಿಸಿದ್ದಾರೆ.

  Chiru ಮಗುವಿಗೆ Dhruva ಖರೀದಿ ಮಾಡಿದ ಅದ್ದೂರಿ Gift ಇದು | Filmibeat Kannada
  ಪ್ರಿಯಾ ಆನಂದ್ ನಾಯಕಿ

  ಪ್ರಿಯಾ ಆನಂದ್ ನಾಯಕಿ

  ಜೇಮ್ಸ್ ಸಿನಿಮಾದ ಚಿತ್ರೀಕರಣವು ಬಹು ಭಿರಿಸಿನಿಂದ ಸಾಗಿದೆ. ಸಿನಿಮಾಕ್ಕೆ ತಮಿಳಿನ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಸಿನಿಮಾದ ನಿರ್ದೇಶನವನ್ನು ಭರ್ಜರಿ ಚೇತನ್ ಕುಮಾರ್ ವಹಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅನು ಪ್ರಭಾಕರ್, ಆದಿತ್ಯ ಮೆನನ್ ಸಹ ಇರಲಿದ್ದಾರೆ.

  English summary
  Actor Puneeth Rajkumar visited minister Anand Singh's house in Hosapete. Minister Lakshman Savdhi also present at the time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X