»   » ಮ್ಯಾಗಿ ವಿವಾದ ಬಿಗ್ ಬಿಗೆ ನೋಟಿಸ್: ಪುನೀತ್ ಪ್ರತಿಕ್ರಿಯೆ ಏನು?

ಮ್ಯಾಗಿ ವಿವಾದ ಬಿಗ್ ಬಿಗೆ ನೋಟಿಸ್: ಪುನೀತ್ ಪ್ರತಿಕ್ರಿಯೆ ಏನು?

Posted By:
Subscribe to Filmibeat Kannada

ಮೊನೊಸೋಡಿಯಂ ಗ್ಲುಟಮೇಟ್ ಮತ್ತು ಸತುವಿನ ಅಂಶ ಅಧಿಕವಾಗಿರುವ 2 ಮಿನಿಟ್ ಮ್ಯಾಗಿ ಉತ್ಪನ್ನಗಳ ಪ್ರಚಾರ ನಡೆಸಿದ್ದಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್ ಮತ್ತು ನಟಿ ಪ್ರೀತಿ ಜಿಂಟಾಗೆ ನೊಟೀಸ್ ಜಾರಿಯಾಗಿದೆ. ಸದ್ಯದಲ್ಲೇ ಎಫ್.ಐ.ಆರ್ ಕೂಡ ದಾಖಲಾಗುವ ಸಾಧ್ಯತೆಗಳು ದಟ್ಟವಾಗಿವೆ.

ಸಂಭಾವನೆ ಹೆಚ್ಚಾಗಿ ಸಿಗುವ ಕಾರಣಕ್ಕೆ ಉತ್ಪನ್ನಗಳ ಗುಣಮಟ್ಟ ಲೆಕ್ಕಿಸದೆ ರಾಯಭಾರಿಗಳಾಗುವ ಸ್ಟಾರ್ ಸೆಲೆಬ್ರಿಟಿಗಳಿಗೆ ಈ ಪ್ರಕರಣ ದೊಡ್ಡ ಪಾಠವಾಗಿದೆ. ಯಾವುದೇ ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಮಾಡುವ ಮುನ್ನ ನೂರು ಬಾರಿ ಯೋಚಿಸುವುದಕ್ಕೆ ಈಗ ಸೆಲೆಬ್ರಿಟಿಗಳು ಯೋಚಿಸುತ್ತಿದ್ದಾರೆ. ಅದ್ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಒಬ್ಬರು.[ಅಮಿತಾಬ್, ಮಾಧುರಿ ವಿರುದ್ಧ ಎಫ್ ಐಆರ್ ಹಾಕಿ: ಕೋರ್ಟ್]

Puneeth Rajkumar wants to be more cautious in Brand Endorsement

7 UP, ಮಲಬಾರ್ ಗೋಲ್ಡ್, ಮಣಪ್ಪುರಂ ಮತ್ತು ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿರುವ ಪುನೀತ್, ''ಬ್ರ್ಯಾಂಡ್ ಅಂಬಾಸಡರ್ ಆಗುವ ಮುನ್ನ ಅದರ ಸಂಪೂರ್ಣ ಮಾಹಿತಿಯನ್ನ ನಾನು ಪಡೆಯುತ್ತೇನೆ. ಸುಮ್ಮನೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಇಲ್ಲಿವರೆಗೂ, ನಾನು ಪ್ರಚಾರ ಮಾಡಿದ ಯಾವ ಬ್ರ್ಯಾಂಡ್ ನಿಂದಲೂ ತೊಂದರೆ ಆಗಿಲ್ಲ. ಮುಂದೆ ಇನ್ನಷ್ಟು ಎಚ್ಚರಿಕೆ ವಹಿಸುತ್ತೇನೆ'' ಅಂತಾರೆ.[ಮ್ಯಾಗಿ ಪರ ಪ್ರಚಾರ, ಮಾಧುರಿಗೆ ಬಂತು ಗ್ರಹಚಾರ!]

Puneeth Rajkumar wants to be more cautious in Brand Endorsement

ಪ್ರಚಾರದ ಜೊತೆ ಸಾಮಾಜಿಕ ಜವಾಬ್ದಾರಿ ಕೂಡ ಸ್ಟಾರ್ ನಟರ ಮೇಲಿರುತ್ತೆ ಅನ್ನುವುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. ಇನ್ನಾದರೂ ನಟರು ಎಚ್ಚೆತ್ತುಕೊಂಡರೆ ಒಳಿತು. (ಫಿಲ್ಮಿಬೀಟ್ ಕನ್ನಡ)

    English summary
    Kannada Actor Puneeth Rajkumar has reacted that he will be more cautious in Brand Endorsing as Big B Amitabh Bachchan, Madhuri Dixit and Preethi Zinta have served legal notice for endorsing Maggie.
    Please Wait while comments are loading...

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada