Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'3 ಈಡಿಯಟ್ಸ್' ಚಿತ್ರದ ಕನ್ನಡ ರಿಮೇಕ್‌ನಲ್ಲಿ ನಟಿಸಬೇಕಿತ್ತು ಪುನೀತ್ ರಾಜ್‌ಕುಮಾರ್!
ಬಾಲಿವುಡ್ ನಟ ಆಮಿರ್ ಖಾನ್ ನಟನೆಯ ಸಾಕಷ್ಟು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಮತ್ತೊಂದಷ್ಟು ಚಿತ್ರಗಳು ಜನರ ಮನಸ್ಸಿನಿಂದ ಇನ್ನೂ ಕೂಡ ಅಚ್ಚಳಿಯದೇ ಉಳಿದಿದೆ. ಅದರಲ್ಲಿ ಒಂದು 2009ರಲ್ಲಿ ತೆರೆಕಂಡ ಅತ್ಯದ್ಭುತ ಚಿತ್ರ '3 ಈಡಿಯಟ್ಸ್'. ಫ್ರೆಂಡ್‌ಶಿಪ್ ಕಥೆಯನ್ನು ಹೊತ್ತು ಬಂದ ಈ ಸಿನಿಮಾ ಈಗಲೂ ಜನರ ನೆನಪಿನಿಂದ ಮಾಸಿಲ್ಲ. ಈ ಚಿತ್ರದ ಹಾಡುಗಳು, ಈ ಚಿತ್ರ ಜನರಿಗೆ ನೀಡಿದ ಸಂದೇಶ ಇದೆಲ್ಲವನ್ನು ಜನ ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಅಚ್ಚರಿಯ ವಿಚಾರ ಏನು ಅಂದರೇ ಆಮಿರ್ ಖಾನ್ ಅಭಿನಯಿಸಿದ್ದ ಈ ಸೂಪರ್ ಡೂಪರ್ ಚಿತ್ರ ಕನ್ನಡಕ್ಕೆ ರಿಮೇಕ್ ಆಗಬೇಕಿತ್ತು. ಇಂತದ್ದೊಂದು ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
'3 ಈಡಿಯಟ್ಸ್' ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗೋದ್ರ ಜೊತೆಗೆ ಸ್ಟಾರ್ ಕಾಸ್ಟ್ ಕೂಡ ಫೈನಲ್ ಮಾಡಲಾಗಿತ್ತು. ಆಮಿರ್ ಖಾನ್ ಪಾತ್ರದಲ್ಲಿ ನಟ ಡಾ ಪುನೀತ್ ರಾಜ್‌ಕುಮಾರ್ ನಟಿಸಬೇಕಿತ್ತಂತೆ. ಅಷ್ಟಕ್ಕೂ ಈ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗಲಿಲ್ಲಾ ಯಾಕೆ? ರಿಮೇಕ್ ಆಗಿದ್ದರೇ ಈ ಚಿತ್ರದಲ್ಲಿ ಅಪ್ಪು ನಟಿಸುತ್ತಿದ್ರಾ? ಈ ಬಗ್ಗೆ ಸ್ವತಃ ಕೆಆರ್‌ಜಿ ನಿರ್ಮಾಣ ಸಂಸ್ಥೆ ಫಿಲ್ಮೀ ಬೀಟ್ ಜೋತೆ ಮಾಹಿತಿ ಹಂಚಿಕೊಂಡಿದೆ.
ಜೇಮ್ಸ್;
ಬೆಂಗಳೂರಿನಲ್ಲಿ
ಟಿಕೆಟ್
ಬುಕ್ಕಿಂಗ್ಗೆ
ಭಾರಿ
ಬೇಡಿಕೆ!

ಈ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗಿಲ್ಲಾ ಯಾಕೆ?
ರಾಜ್‍ಕುಮಾರ್ ಹಿರಾನಿ ನಿರ್ದೇಶಿಸಿದ, ಅಭಿಜಾತ್ ಜೋಶಿ ಚಿತ್ರಕಥೆ ಬರೆದು, ವಿಧು ವಿನೋದ್ ಚೋಪ್ರಾ ನಿರ್ಮಿಸಿದ, ಹಾಸ್ಯಮಯ ನಾಟಕೀಯ ಚಲನಚಿತ್ರ '3 ಈಡಿಯಟ್ಸ್' . ಇದು ಚೇತನ್ ಭಗತ್ ಅವರ ಕಾದಂಬರಿ 'ಫೈವ್ ಪಾಯಿಂಟ್ ಸಮ್‍ವನ್' ಕಾದಂಬರಿ ಆಧಾರಿತ ಚಿತ್ರ. '3 ಈಡಿಯಟ್ಸ್' ತಾರಾಗಣದಲ್ಲಿ ಆಮಿರ್ ಖಾನ್, ಕರೀನಾ ಕಪೂರ್, ಆರ್. ಮಾಧವನ್, ಶರ್ಮನ್ ಜೋಶಿ, ಓಮಿ ವೈದ್ಯ, ಪರೀಕ್ಷಿತ್ ಸಾಹ್ನಿ ಮತ್ತು ಬೊಮನ್ ಇರಾನಿ ನಟಿಸಿದ್ದಾರೆ. ಭಾರತೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಮೂರು ವಿದ್ಯಾರ್ಥಿಗಳ ಸ್ನೇಹದ ಬಗ್ಗೆ ಈ ಚಿತ್ರ ಮೂಡಿಬಂದಿದ್ದು, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾಜಿಕ ಒತ್ತಡಗಳ ಬಗ್ಗೆ ತೋರಿಸಲಾಗಿದೆ. '3 ಈಡಿಯಟ್ಸ್' ಚಿತ್ರ 200 ಕೋಟಿಗಿಂತಲೂ ಅಧಿಕ ಹಣ ಗಳಿಸಿ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ್ದು ಗೊತ್ತೆ ಇದೆ. ಇಂತಹ ಒಂದು ಅದ್ಭುತ ಚಿತ್ರದ ಕನ್ನಡ ರಿಮೇಕ್ ಬಗ್ಗೆ ಈಗ ಸುದ್ದಿಯೊಂದು ಹರಿದಾಡುತ್ತಿದೆ.
ಮಾತು
ತಪ್ಪಿದ
ರಾಘಣ್ಣ,
ಶಿವಣ್ಣ:
ಅದು
ಅಪ್ಪು
ಮೇಲಿನ
ಪ್ರೀತಿಯಿಂದ!

ಕಾರಣಾಂತರಗಳಿಂದ ಚಿತ್ರ ಕನ್ನಡದಲ್ಲಿ ರಿಮೇಕ್ ಆಗಲಿಲ್ವಾ?
ಬಾಲಿವುಡ್ ಮ್ಯಾಗಝೀನ್‌ಒಂದು ವರದಿ ಮಾಡಿರುವ ಪ್ರಕಾರ '3 ಈಡಿಯಟ್ಸ್' ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿತ್ತಂತೆ. ಆಮಿರ್ ಖಾನ್ ಪಾತ್ರವನ್ನು ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತಂತೆ. ಅಷ್ಟೇ ಅಲ್ಲದೇ '3 ಈಡಿಯಟ್ಸ್' ಚಿತ್ರದ ಉಳಿದ ಪಾತ್ರಕ್ಕೂ ತಾರಾಗಣ ಆಯ್ಕೆ ಆಗಿತ್ತು. ನಟ ಉಪೇಂದ್ರ, ಮಾಧವನ್ ಪಾತ್ರಕ್ಕೆ ಮತ್ತು ಕರೀನಾ ಕಪೂರ್ ಪಾತ್ರವನ್ನು ನಟಿ ರಚಿತಾ ರಾಮ್ ನಿರ್ವಹಿಸಬೇಕಿತ್ತು. ಹಾಗೇ ಈ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡಬೇಕಿತ್ತು ಎಂದು ವರದಿಯಾಗಿದೆ. ಆದರೆ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗಲಿಲ್ಲಾ. ಆಗಿದ್ದಿದ್ದರೆ ಪುನೀತ್ ಆಮಿರ್ ಖಾನ್ ಪಾತ್ರದಲ್ಲಿ ನಟಿಸುತ್ತಿದ್ರು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಗೇ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಬೇಕಿತ್ತಂತೆ.

'ಕೆಆರ್‌ಜಿ' ಯೋಗಿ ಜಿ ರಾಜ್ ಫಿಲ್ಮ್‌ಬೀಟ್‌ಗೆ ಪ್ರತಿಕ್ರೀಯೆ
ಬಾಲಿವುಡ್ ಮ್ಯಾಗಝೀನ್‌ನಲ್ಲಿ ಈ ಸುದ್ದಿ ಪ್ರಕಟವಾದಂತೆ ಫಿಲ್ಮಿ ಬೀಟ್ ಕೆಆರ್‌ಜಿ ಸ್ಟುಡಿಯೋಸ್ ತಂಡದ ಯೋಗಿ ಜಿ ರಾಜ್ ಅವರನ್ನು ಸಂಪರ್ಕ ಮಾಡಿ ಈ ಸುದ್ದಿಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡಿದ ಯೋಗಿ ಜಿ ರಾಜ್ " '3 ಈಡಿಯಟ್ಸ್' ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಬೇಕು ಅಂತ ನಾವು ಯಾವತ್ತೂ ಅಂದುಕೊಂಡಿಲ್ಲಾ. ಈ ಸುದ್ದಿ ಸುಳ್ಳು. '3 ಈಡಿಯಟ್ಸ್' ಸಿನಿಮಾ ಕನ್ನಡ ರಿಮೇಕ್ ಬಗ್ಗೆ ನಮ್ಮ ನಿರ್ಮಾಣ ಸಂಸ್ಥೆ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲಾ. ಹೀಗಾಗಿ ಈ ಸುದ್ದಿಗೂ ನಮಗೂ ಯಾವುದೇ ಸಂಬಂಧ ಇಲ್ಲಾ" ಎಂದು ತಿಳಿಸಿದ್ದಾರೆ. ಈ ಮೂಲಕ ಈ ಸುದ್ದಿ ಸುಳ್ಳು ಎಂಬುದನ್ನು ಖಚಿತ ಪಡಿಸಿದ್ದಾರೆ.
RCB
ಹೊಸ
ನಾಯಕ
ಫಾಫ್
ಡು
ಪ್ಲೆಸಿಸ್
ಜೊತೆ
ಕಿರಿಕ್
ಪಾರ್ಟಿ
ಸಂಯುಕ್ತಾ
ಹೆಗ್ಡೆ
ಸೆಲ್ಫಿ:
ಇನ್ನೂ
ಬರುತ್ತೆ
ಫೋಟೊಗಳು

ತಮಿಳಿನಲ್ಲೂ ಮ್ಯಾಜಿಕ್ ಮಾಡಿತ್ತು 'ನನ್‌ಬನ್' ಸಿನಿಮಾ
'3 ಈಡಿಯಟ್ಸ್' ಸಿನಿಮಾ ಬಾಲಿವುಡ್‌ನಲ್ಲಿ ಹಿಟ್ ಲಿಸ್ಟ್ ಸೇರಿದ ಬೆನ್ನಲ್ಲೆ ಹಲವು ಇಂಡಸ್ಟ್ರಿ ಮಂದಿ ಈ ಚಿತ್ರದ ರಿಮೇಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದರು. ಆದರೇ ಮೊದಲ ಬಾರಿಗೆ 2012ರಲ್ಲಿ ತಮಿಳಿನಲ್ಲಿ '3 ಈಡಿಯಟ್ಸ್' ಚಿತ್ರ 'ನನ್‌ಬನ್' ಎಂಬ ಟೈಟಲ್‌ನಲ್ಲಿ ತೆರೆಕಂಡಿತ್ತು. ಹಿಂದಿಯ '3 ಇಡಿಯಟ್ಸ್' ನಷ್ಟು ಗಳಿಕೆಯಲ್ಲಿ ಸೌಂಡ್ ಮಾಡಿಲ್ಲ ವಾದರೂ 150 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು ಈ ಚಿತ್ರ. ಎಸ್.ಶಂಕರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ದಳಪತಿ ವಿಜಯ್, ಜೀವ, ಶ್ರೀಕಾಂತ್, ಜೆನಿಲಿಯಾ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.