For Quick Alerts
  ALLOW NOTIFICATIONS  
  For Daily Alerts

  'ಟಗರು 2' ಸಿನಿಮಾದಲ್ಲಿ ನಡೆಯಲಿದೆ ಎರಡು ಟಗರುಗಳ ಸಮಾಗಮ

  By Naveen
  |
  ಯಾವ ಸಿನಿಮಾದಲ್ಲಿ ಶಿವಣ್ಣ -ಅಪ್ಪು ಒಂದಾಗ್ತಿದ್ದಾರೆ ಗೊತ್ತಾ ..? | Filmibeat Kannada

  'ಟಗರು' ಸಿನಿಮಾ ಬಿಡುಗಡೆಯಾಗುವುದಕ್ಕು ಮುಂಚೆಯಿಂದಲೇ 'ಟಗರು 2' ಸಿನಿಮಾದ ಸುದ್ದಿ ಶುರುವಾಗಿತ್ತು. ಅದೇ ರೀತಿ ಚಿತ್ರತಂಡ ಕೂಡ 'ಟಗರು 2' ಸಿನಿಮಾದ ಮುಹೂರ್ತವನ್ನು ಸಿಂಪಲ್ ಆಗಿ ನೆರವೇರಿಸಿತ್ತು. ಆದರೂ ಕೂಡ ಈ ಚಿತ್ರವನ್ನು ಸೂರಿ ಮಾಡುತ್ತಾರ ಇಲ್ವಾ ಎನ್ನುವ ಗೊಂದಲ ಅಭಿಮಾನಿಗಳಿಗೆ ಇತ್ತು.

  ಸದ್ಯ 'ಟಗರು 2' ಸಿನಿಮಾ ಬರುವುದು ಪಕ್ಕಾ ಎಂದು ಸ್ವತಃ ದುನಿಯಾ ಸೂರಿ ಹೇಳಿದ್ದಾರೆ. ಕಳೆದ ಭಾನುವಾರ 'ಟಗರು' ಸಿನಿಮಾದ ನೂರರ ಸಂಭ್ರಮಾಚರಣೆಯನ್ನು ನಗರದ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮಾನ್ವಿತಾ ಹರೀಶ್, ಧನಂಜಯ ಹಾಗೂ ಸೂರಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿರುವ ನಿರ್ದೇಶಕ ಸೂರಿ 'ಟಗರು 2' ಚಿತ್ರದ ಕುತುಹಲಕಾರಿ ವಿಷಯವನ್ನು ಹೇಳಿದ್ದಾರೆ. ಮುಂದೆ ಓದಿ...

  ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರುವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

  'ಟಗರು 2' ಚಿತ್ರದಲ್ಲಿ ಪುನೀತ್

  'ಟಗರು 2' ಚಿತ್ರದಲ್ಲಿ ಪುನೀತ್

  'ಟಗರು 2' ಸಿನಿಮಾ ಬರುವುದು ಪಕ್ಕಾ ಆಗಿದೆ. ದೊಡ್ಡ ಅಚ್ಚರಿ ಅಂದರೆ, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಪುನೀತ್ ರಾಜ್ ಕುಮಾರ್ ಸಹ ಅಭಿನಯಿಸಲಿದ್ದಾರಂತೆ. ಈ ಮೂಲಕ ದೊಡ್ಮನೆಯ ಸಹೋದರರನ್ನು ತೆರೆ ಮೇಲೆ ಒಂದು ಮಾಡುವ ದೊಡ್ಡ ಸಾಹಸಕ್ಕೆ ಸೂರಿ ಕೈ ಹಾಕಿದ್ದಾರೆ. ಇದು ನಿಜ ಆದರೆ ಮೊದಲ ಬಾರಿಗೆ ಶಿವಣ್ಣ - ಪುನೀತ್ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ.

  ಎರಡು ಟಗರುಗಳ ಸಮಾಗಮ

  ಎರಡು ಟಗರುಗಳ ಸಮಾಗಮ

  'ಟಗರು 2' ಎಂಬುದು 'ಟಗರು' ಮುಂದುವರೆದ ಭಾಗ ಅಲ್ಲವಂತೆ. '2' ಎನ್ನುವುವಕ್ಕೆ ತಕ್ಕ ಹಾಗೆ ಎರಡು ಟಗರುಗಳ ಸಮಾಗಮ ಇಲ್ಲಿ ಆಗಲಿದೆಯಂತೆ. ಶಿವಣ್ಣ ಒಂದು ಟಗರು ಆಗಿದ್ದರೆ, ಅದರ ಜೊತೆಗೆ ನಿಲ್ಲುವ ಮತ್ತೊಂದು ಟಗರಾಗಿ ಅಪ್ಪು ಕಾಣಿಸಿಕೊಳ್ಳಲಿದ್ದಾರಂತೆ, ಇಬ್ಬರು ನಟರ ಅಭಿಮಾನಿಗಳನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಮಾಡಿರುವ ಸೂರಿ. ಈ ಬಗ್ಗೆ ಸದ್ಯ ಪುನೀತ್ ಜೊತೆಗೆ ಮಾತುಕತೆ ನಡೆಸುತ್ತಿದ್ದಾರಂತೆ.

  'ಟಗರು' 100 ಡೇಸ್ : ಸಂತೋಷ್ ಚಿತ್ರಮಂದಿರದಲ್ಲಿ ಫ್ಯಾನ್ಸ್ ಜೊತೆ ಶಿವಣ್ಣ ಹಬ್ಬ 'ಟಗರು' 100 ಡೇಸ್ : ಸಂತೋಷ್ ಚಿತ್ರಮಂದಿರದಲ್ಲಿ ಫ್ಯಾನ್ಸ್ ಜೊತೆ ಶಿವಣ್ಣ ಹಬ್ಬ

  ರವಿವರ್ಮ ಚಿತ್ರದಲ್ಲಿ ನಟಿಸಬೇಕಿತ್ತು

  ರವಿವರ್ಮ ಚಿತ್ರದಲ್ಲಿ ನಟಿಸಬೇಕಿತ್ತು

  ಈ ಹಿಂದೆ ರವಿವರ್ಮಾ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ಹಾಗೂ ಪುನೀತ್ ರಾಜ್ ಕುಮಾರ್ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಸದ್ಯ ರವಿವರ್ಮ ಶಿವಣ್ಣನಿಗೆ ಮಾತ್ರ 'ರುಸ್ತುಂ' ಸಿನಿಮಾ ಮಾಡುತ್ತಿದ್ದಾರೆ.

  ಅಪ್ಪುಗೆ 3 ಸಿನಿಮಾ, ಶಿವಣ್ಣನಿಗೆ 2 ಸಿನಿಮಾ ಮಾಡಿರುವ ಸೂರಿ

  ಅಪ್ಪುಗೆ 3 ಸಿನಿಮಾ, ಶಿವಣ್ಣನಿಗೆ 2 ಸಿನಿಮಾ ಮಾಡಿರುವ ಸೂರಿ

  ಸೂರಿ ಈಗಾಗಲೇ ಪುನೀತ್ ಹಾಗೂ ಶಿವಣ್ಣ ಇಬ್ಬರ ಜೊತೆಗೆ ಕೆಲಸ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಜಾಕಿ', 'ಅಣ್ಣಾಬಾಂಡ್', 'ದೊಡ್ಮನೆ ಹುಡ್ಗ' ಮತ್ತು ಶಿವರಾಜ್ ಕುಮಾರ್ ಅವರ 'ಕಡ್ಡಿಪುಡಿ', 'ಟಗರು' ಸಿನಿಮಾಗಳಿಗೆ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Kannada Actor Puneeth Rajkumar will share screen space with Shiva Rajkumar in Tagaru 2 movie. The movie will directing by Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X