For Quick Alerts
  ALLOW NOTIFICATIONS  
  For Daily Alerts

  ಪುನೀತ್ ಜೊತೆ ರಮ್ಯಾ ಚಳಿ ಚಳಿ ತಾಳೆನು ಈ ಚಳಿಯಾ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಸಖತ್ ಹಾಟ್ ಸಾಂಗ್‌ನಲ್ಲಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಅದು ಯಾವ ಹಾಡು ಅಂತೀರಾ? 1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಚಿತ್ರದ ಅಂಬರೀಷ್ ಹಾಗೂ ಅಂಬಿಕಾ ಮಳೆಯಲಿ ನೆನೆಯುತ್ತಾ ಹೆಜ್ಜೆಹಾಕಿದ್ದ ಚಳಿ ಚಳಿ ತಾಳೆನು ಈ ಚಳಿಯಾ ಹಾಡು.

  ಈ ಹಾಡಿಗೆ ರಮ್ಯಾ ಹಾಗೂ ಪುನೀತ್ ಈಗಾಗಲೆ ಪ್ರಾಕ್ಟೀಸ್ ಮಾಡಿದ್ದಾರೆ. ಇದೆಲ್ಲಾ ಅಂಬರೀಷ್ ಅವರ 60ನೇ ಹುಟ್ಟುಹಬ್ಬದ ನಿಮಿತ್ತ ನಡೆಯುತ್ತಿರುವ ಅಂಬಿ ಸಂಭ್ರಮಕ್ಕಾಗಿ ಸಿದ್ಧತೆ. ಅಂಬಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಳಿ ಚಳಿ ತಾಳೆನು ಹಾಡಿಗೆ ಇವರಿಬ್ಬರೂ ಹೆಜ್ಜೆ ಹಾಕಲಿದ್ದಾರೆ.

  ಚಿ. ಉದಯಶಂಕರ್ ಸಾಹಿತ್ಯಕ್ಕೆ ಶಂಕರ್ ಮತ್ತು ಗಣೇಶ್ ಸಂಗೀತ ಸಂಯೋಜನೆ ಸೊಗಸಾಗಿದೆ. ಜಾನಕಿ ಮತ್ತು ಬಾಲಸುಬ್ರಹ್ಮಣ್ಯಂ ಗಾಯನಕ್ಕೆ ಅಂಬರೀಷ್ ಮತ್ತು ಅಂಬಿಕಾ ಜೀವತುಂಬಿದ್ದರು. ಈಗ ಅದೇ ಹಾಡಿಗೆ ರಮ್ಯಾ ಮತ್ತು ಪುನೀತ್ ಮತ್ತೊಮ್ಮೆ ಜೀವ ತುಂಬಲಿದ್ದಾರೆ.

  "ಮಂಡ್ಯದ ಗಂಡು ಮುತ್ತಿನ ಚೆಂಡು" ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಹಾಡಿಗೆ ಅವರೇ ಸೂಕ್ತ ನಟ ಎನ್ನಿಸುತ್ತದೆ. ಇನ್ನು ಕಿಚ್ಚ ಸುದೀಪ್ ಸೋಲೋ ಹಾಡು "ನಾನು ಯಾರು ಯಾವ ಊರು" ('ಅಂತ' ಚಿತ್ರ)ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೂವರು ಬೆಡಗಿಯರು ಸೊಂಟ ಬಳುಕಿಸಲಿದ್ದಾರೆ. ರಾಧಿಕಾ ಪಂಡಿತ್, ಐಂದ್ರಿತಾ ರೇ ಹಾಗೂ ಹರಿಪ್ರಿಯಾ ಮೂರು ಭಿನ್ನ ಹಾಡುಗಳಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಲಿದ್ದಾರೆ. ಇನ್ನು ನಮ್ಮ ಲೂಸ್ ಮಾದ ಯೋಗೀಶ್ 'ರಾಣಿ ಮಹಾರಾಣಿ' ಚಿತ್ರದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

  'ದಿಗ್ಗಜರು' ಚಿತ್ರದಲ್ಲಿ ಅಂಬರೀಷ್ ಹಾಗೂ ವಿಷ್ಣುವರ್ಧನ್ "ಕುಚಿಕು ಕುಚಿಕು" ಎಂದು ಹಾಡಿ ಕುಣಿದು ಎಲ್ಲರ ಮನಗೆದ್ದಿದ್ದರು. ಈಗ ಅದೇ ಹಾಡಿಗೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

  ಅಂಬಿ ಸಂಭ್ರಮಕ್ಕಾಗಿ ಅರಮನೆ ಮೈದಾನದಲ್ಲಿ (ಕೃಷ್ಣವಿಹಾರ್) ಅದ್ಧೂರಿ ವೇದಿಕೆ ಸಿದ್ಧವಾಗಿದೆ. ಇಂದು ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗಲಿದ್ದು ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಕಾರ್ಯಕ್ರಮ ನಡೆಸಿಕೊಡಲಿದೆ.

  ಕನ್ನಡ ಚಿತ್ರರಂಗದ ಅಷ್ಟೂ ತಾರೆಗಳು ನರ್ತಿಸಿ, ನಗಿಸಿ ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ. ಈ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವವನ್ನು ಎಸ್ ನಾರಾಯಣ್ ಹಾಗೂ ರಾಕ್ ಲೈನ್ ವೆಂಕಟೇಶ್ ವಹಿಸಿಕೊಂಡಿದ್ದಾರೆ. ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ಮುತ್ಸದ್ದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

  ಈಗಾಗಲೆ ಅಂಬರೀಷ್ ಅವರು ಬಾಲಿವುಡ್ ನಟ ಶತ್ರುಘ್ನ ಸಿನ್ಹಾ, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಬಹುತೇಕರನ್ನು ಖುದ್ದಾಗಿ ಆಹ್ವಾನಿಸಿದ್ದಾರೆ. ಇವರಲ್ಲಿ ಬಹುತೇಕರು ಸಮಾರಂಭಕ್ಕೆ ಬರುವ ಸಾಧ್ಯತೆಗಳಿವೆ. (ಒನ್‌ಇಂಡಿಯಾ ಕನ್ನಡ)

  English summary
  Power Star Puneet Raj Kumar and Golden Girl Ramya will be dance Ambarish hit number Chali Chali Talenu in Ambarish 60th birthday celebrations will be held at Palace Grounds on 29th Monday. Chali Chali Talenu in the film Chakravyuha which had Ambarish dancing with Ambika in the original.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X