»   » ಮೆಟ್ರೋ ರೈಲಿನಲ್ಲಿ ಪುನೀತ್ ರಾಜ್ 'ರಣವಿಕ್ರಮ'

ಮೆಟ್ರೋ ರೈಲಿನಲ್ಲಿ ಪುನೀತ್ ರಾಜ್ 'ರಣವಿಕ್ರಮ'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಪವರ್' ಚಿತ್ರ ಇನ್ನೇನು ತೆರೆಗೆ ದಾಂಗುಡಿ ಇಡಲು ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಅವರ ರಣವಿಕ್ರಮ ಚಿತ್ರದ ಶೂಟಿಂಗ್ ಸಹ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು.

ಸಾಮಾನ್ಯವಾಗಿ ಟ್ರೈನ್ ಸೀನ್ ಗಳು ಸಿನಿಮಾಗಳಲ್ಲಿ ಇದ್ದೇ ಇರುತ್ತವೆ. ಆದರೆ ಇದೇ ಮೊದಲ ಬಾರಿಗೆ ಬೆಂಗಳೂರು ಮೆಟ್ರೋ ರೈಲಿನಲ್ಲಿ ಕನ್ನಡ ಚಿತ್ರವೊಂದನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರ.

Puneeth Rana Vikrama shooting at Bangalore Namma Metro

ಸೋಮವಾರ (ಆ.18) ರಣವಿಕ್ರಮ ಚಿತ್ರವನ್ನು ಎಂ.ಜಿ.ರಸ್ತೆಯ ಮೆಟ್ರೋ ಸ್ಟೇಷನ್ ಹಾಗೂ ಬೈಯಪ್ಪನಹಳ್ಳಿ ನಡುವೆ ಚಿತ್ರೀಕರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಪುನೀತ್ ರಾಜ್ ಕುಮಾರ್ ಮತ್ತು ನಾಯಕಿ ಆದಾ ಶರ್ಮಾ ಪಾಲ್ಗೊಂಡಿದ್ದರು.

ಬೆಂಗಳೂರು ಮೆಟ್ರೋ ರೈಲು ಪ್ರಾಧಿಕಾರ ಚಿತ್ರೀಕರಣಕ್ಕೆ ಇದೇ ಮೊದಲ ಬಾರಿ ಅನುಮತಿ ಕೊಟ್ಟಿದೆ. ಒಂದು ಗಂಟೆಗೆ ರು.70 ಸಾವಿರ ಶುಲ್ಕ ಕಟ್ಟಿದ್ದು, ಸುಮಾರು ಐದು ಗಂಟೆಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಎರಡು ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದೆ ಚಿತ್ರತಂಡ.

ಈ ಬಗ್ಗೆ ಮಾತನಾಡಿರುವ ಪವನ್ ಒಡೆಯರ್, "ಮೆಟ್ರೋ ಕನ್ ಸ್ಟ್ರಕ್ಷನ್ ಶುರುವಾದಾಗಲೇ ಇಲ್ಲಿ ಚಿತ್ರೀಕರಿಸಬೇಕೆಂದು ನಾನು ಕನಸು ಕಂಡಿದ್ದೆ. ಇದು ತಮ್ಮ ಕನಸು ನೆರವೇರಿದೆ. ನಾಯಕಿ ಇಂಟ್ರಡಕ್ಷನ್ ಸನ್ನಿವೇಶ ಇದಾಗಿದ್ದು, ಹೀರೋ ಬೇಜಾರಾಗಿ ಕುಳಿತಿರುತ್ತಾನೆ. ಆಗ ಹೀರೋಯಿನ್ ಬರುವ ಸನ್ನಿವೇಶವಿದು" ಎಂದಿದ್ದಾರೆ. (ಏಜೆನ್ಸೀಸ್)

English summary
The shooting of Power Star Puneeth Rajkumar upcoming film Rana Vikrama in the direction of Pawan Wodeyar is being done at Namma Metro in Bangalore. Adah Sharma is making her debut with this film. This the first movie shot in Bangalore Metro.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada