»   » ಪುನೀತ್ ದೂಕುಡು ರೀಮೇಕ್ ಗೆ ಹೊಸ ಟೈಟಲ್

ಪುನೀತ್ ದೂಕುಡು ರೀಮೇಕ್ ಗೆ ಹೊಸ ಟೈಟಲ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ತೆಲುಗಿನ ಬ್ಲಾಕ್ ಬಸ್ಟರ್ 'ದೂಕುಡು' ಚಿತ್ರವನ್ನು ಕನ್ನಡಕ್ಕೆ ತರುತ್ತಿರುವುದು ಗೊತ್ತೇ ಇದೆ. ಈ ರೀಮೇಕ್ ಚಿತ್ರಕ್ಕೆ ಕನ್ನಡ ಶೀರ್ಷಿಕೆ ಏನಿಡಬಹುದು ಎಂಬ ಕುತೂಹಲ ಅಭಿಮಾನಿಗಳನ್ನು ಮೊದಲಿಂದಲೂ ಕಾಡುತ್ತಿದೆ.

ಈಗಾಗಲೆ ಮೂರು ಬಾರಿ ಶೀರ್ಷಿಕೆ ಬದಲಾಗಿದೆ. ಮೊದಲು ಚಿತ್ರಕ್ಕೆ 'ರಾಜಕುಮಾರ' ಎಂದಿಡಲು ಚಿಂತಿಸಲಾಗಿತ್ತು. ಆದರೆ ಆ ಟೈಟಲ್ ಲಭ್ಯವಿಲ್ಲದ ಕಾರಣ ಅದನ್ನು ಕೈಬಿಡಲಾಯಿತು. ಬಳಿಕ 'ಅಧಿಪತಿ' ಎಂದುಕೊಂಡರು. ಅದ್ಯಾಕೋ ಸರಿ ಬರುತ್ತಿಲ್ಲ ಎಂದು 'ಅಶ್ವತ್ಥಾಮ' ಎಂದು ಬದಲಾಯಿಸಲಾಯಿತು. [ಪುನೀತ್ ಜತೆ ಸ್ಟೆಪ್ ಹಾಕಿದ ಮೋಹಕ ತಾರೆ ತ್ರಿಷಾ]


ಈಗ ಇನ್ನೊಂದು ಶೀರ್ಷಿಕೆಯನ್ನು ಕೊಟ್ಟಿದ್ದಾರೆ ಚಿತ್ರದ ನಿರ್ದೇಶಕ ಮಾದೇಶ. ಅದೇನೆಂದರೆ 'ಪವರ್'. ಈ ಶೀರ್ಷಿಕೆಗಾಗಿ ಸಮಿತಿಗೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೆ ಪವರ್ ಟೈಟಲ್ ಫೈನಲ್ ಆಗಲಿದೆ ಎನ್ನುತ್ತವೆ ಮೂಲಗಳು. ಒಟ್ಟಾರೆಯಾಗಿ ಒಂದು ಪವರ್ ಫುಲ್ ಟೈಟಲ್ ಸಿಕ್ಕಂತಾಗಿದೆ.

ತೆಲುಗು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ದೂಕುಡು' ರೀಮೇಕ್ ಚಿತ್ರಕ್ಕೆ ಕಡೆಗೆ ಕನ್ನಡ ಶೀರ್ಷಿಕೆ ಸಿಕ್ಕಂತಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ಕೆ.ಮಾದೇಶ್. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಲಾಂಛನದಲ್ಲಿ ರಾಮ್ ಅಚಂಟ, ಗೋಪಿ ಅಚಂಟ, ಅನಿಲ್ ಸುಂಕರ, ಪ್ರವೀಣ್ ಕೊಲ್ಲ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮೋಹಕ ಬೆಡಗಿ ತ್ರಿಷಾ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ.

ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

ಈ ಹಿಂದೆ ಮಹೇಶ್ ಬಾಬು ಅಭಿನಯದ 'ಒಕ್ಕಡು' ಚಿತ್ರ 'ಅಜಯ್' ಆಗಿ ಕನ್ನಡಕ್ಕೆ ರೀಮೇಕ್ ಆಗಿತ್ತು. ತೆಲುಗಿನ ಮತ್ತೊಂದು ಚಿತ್ರ 'ರೆಡಿ' ಕನ್ನಡಕ್ಕೆ 'ರಾಮ್' ಆಗಿ ರೀಮೇಕ್ ಆಗಿತ್ತು. ಈಗ ದೂಕುಡು ಚಿತ್ರದ ಸರದಿ. ಅಂದಹಾಗೆ ಮೂಲ ಚಿತ್ರದಲ್ಲಿ ಸಮಂತಾ ನಾಯಕಿ.

ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ(ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Power Star Puneeth Rajkumar upcoming movie, Telugu 'Dookudu' remake got new Kannada title as 'Power'. Earlier the movie titled as 'Ashwathama', again changed as 'Rajakumara' and 'Adhipati'. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada