»   » ಶತಕದ ಹೊಸ್ತಿಲಲ್ಲಿ ಪುನೀತ್ ರಾಜ್ 'ಪವರ್ ಸ್ಟಾರ್'

ಶತಕದ ಹೊಸ್ತಿಲಲ್ಲಿ ಪುನೀತ್ ರಾಜ್ 'ಪವರ್ ಸ್ಟಾರ್'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಅಭಿನಯದ 'ಪವರ್ ***' ಚಿತ್ರ ಶತಕದ ಹೊಸ್ತಿಲಲ್ಲಿದೆ. ಕಲೆಕ್ಷನ್ ಪರವಾಗಿಯೂ ಈ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ.

ಈಗಾಗಲೆ ಪವರ್ *** ಚಿತ್ರ ಹನ್ನೆರಡು ವಾರಗಳನ್ನು ಪೂರೈಸಿದ್ದು ಇನ್ನೆರಡು ವಾರಗಳಲ್ಲಿ ಶತಕ ಭಾರಿಸಲಿದೆ. ಕೆ ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತೆಲುಗಿನ 'ದೂಕುಡು' ಚಿತ್ರದ ರೀಮೇಕ್. ಇದು ರೀಮೇಕ್ ಚಿತ್ರವಾದರೂ ಪುನೀತ್ ಅವರು ಡಾನ್ಸ್, ಫೈಟ್ಸ್ ನಲ್ಲಿ ಗಮನಸೆಳೆಯುತ್ತಾರೆ. [ಪವರ್ ಸ್ಟಾರ್ ಚಿತ್ರ ವಿಮರ್ಶೆ]

Puneeth's Power Star towards 100 days

ಈ ಚಿತ್ರದ ವಿಶಾಲ ಕರ್ನಾಟಕ ಹಂಚಿಕೆದಾರದು ಸಮರ್ಥ್ ವೆಂಚರ್ಸ್, ಹೈದರಾಬಾದ್ ಕರ್ನಾಕಕ್ಕೆ ಶ್ರೀ ಗಣೇಶ್ ಪಿಕ್ಚರ್ಸ್ (ಗಂಗಾವತಿ). ರಾಮ್ ಅಚಂಟ, ಗೋಪಿಚಂದ್ ಅಚಂಟ, ಅನಿಲ್ ಸುಂಕರ ನಿರ್ಮಾಣದ ಈ ಚಿತ್ರಕ್ಕೆ ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ.

ಬೆಂಗಳೂರಿನ ಸಂತೋಷ್, ವಿನಾಯಕ ಹಾಗೂ ಭೂಮಾತ (ತೇರದಾಳ), ಸಂಗಮೇಶ್ವರ (ಚಡಚಣ), ಯಾದವಾಡ (ಬಸವೇಶ್ವರ), ತ್ರಿಶೂಲ್ (ದಾವಣಗೆರೆ), ಪ್ರಭಾತ್ (ಆಕಣಕೋಟೆ) ಚಿತ್ರಮಂದಿರಗಳಲ್ಲಿ ಶತಕ ಭಾರಿಸಲು ಸಜ್ಜಾಗಿದೆ.

ಈ ಚಿತ್ರದ ಮೂಲಕ ತ್ರಿಷಾ ಕೃಷ್ಣನ್ ಅವರು ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ರಾಜಕುಮಾರ ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಪವರ್ *** ಎಂದು ಬದಲಾಯಿಸಲಾಯಿತು. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar's 'Power ***' movie completes successfully 12 weeks in 7 theatre. The movie is likely to complete 100 days soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada