»   » ಸದ್ದಿಲ್ಲದೆ ನಡೀತಿದೆ ಪುನೀತ್ ಜೊತೆ ತ್ರಿಷಾ 'ದೂಕುಡು'

ಸದ್ದಿಲ್ಲದೆ ನಡೀತಿದೆ ಪುನೀತ್ ಜೊತೆ ತ್ರಿಷಾ 'ದೂಕುಡು'

Posted By:
Subscribe to Filmibeat Kannada

ಬಹು ನಿರೀಕ್ಷಿತ ಟಾಲಿವುಡ್ ನ 'ದೂಕುಡು' ಚಿತ್ರದ ಕನ್ನಡ ರೀಮೇಕ್ ಶೂಟಿಂಗ್ ಈಗ ಕಂಠೀರವ ಸ್ಟುಡಿಯೋದಲ್ಲಿ ನಡೀತಿದೆ. ತ್ರಿಪುರ ಸುಂದರಿ ತ್ರಿಷಾರನ್ನ ಕನ್ನಡಕ್ಕೆ ಕರ್ಕೊಂಡು ಬರೋ ಪ್ರಯತ್ನ ಆಗಾಗ ಸುದ್ದಿಯಾಗ್ತಿತ್ತು. ಆದರೆ ಪುನೀತ್ ಚಿತ್ರಕ್ಕೆ ತ್ರಿಷಾ ಎಂಟ್ರಿಕೊಟ್ಟಿದ್ದೂ ಆಗಿದೆ. ಈಗ ಚಿತ್ರದ ಕಲರ್ಫುಲ್ ಹಾಡಿನ ಶೂಟಿಂಗ್ ಕೂಡ ನಡೀತಿದೆ.

ರೀಮೇಕ್ ಡೈರೆಕ್ಟರ್ ಅಂತಾನೇ ಕರೆಸಿಕೊಳ್ಳೋ ಕೆ ಮಾದೇಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. 'ಬೃಂದಾವನ' ಚಿತ್ರದ ನಂತರ ಸದ್ದಿಲ್ಲದೆ 'ದೂಕುಡು' ಸ್ಕ್ರಿಪ್ಟನ್ನ ಕನ್ನಡಕ್ಕೆ ತಂದು ಪುನೀತ್-ತ್ರಿಷಾರನ್ನ ಜೋಡಿಯಾಗಿಸಿ ಸ್ಟೆಪ್ಪೂ ಹಾಕಿಸ್ತಿದ್ದಾರೆ. ಇನ್ನು ಪುನೀತ್ ಈ ಬಾರಿ ಒಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. [ಶಾರ್ಟ್ಸ್ ನಲ್ಲಿ ತ್ರಿಷಾ ಕೃಷ್ಣನ್ ವಿಶ್ವರೂಪ ಪ್ರದರ್ಶನ]


ಇನ್ನು ಮುಂದೆ ಅಭಿಮಾನಿಗಳನ್ನ ಕಾಯಿಸೋದಿಲ್ಲ. ವರ್ಷಕ್ಕೆ ಒಂದು, ಎರಡು ಸಿನಿಮಾ ಗ್ಯಾರಂಟಿ ಅಂತ. ಅಂದುಕೊಂಡಂತೆ 'ದೂಕುಡು' ರೀಮೇಕ್ ಶೂಟಿಂಗನ್ನೂ ಮುಗಿಸ್ತಿದ್ದು, ಫೆಬ್ರವರಿಯ ವೇಳೆಗೆ ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಸಿನಿಮಾದ ಮುಹೂರ್ತ ನಡೆಯೋ ಸಾಧ್ಯತೆಯಿದೆ.

ಇದಾದ ನಂತರ ಪ್ರೇಮ್ ನಿರ್ದೇಶನದ ಪುನೀತ್ ರ ಸಿನಿಮಾ ಡಾ. ರಾಜ್ ಹುಟ್ಟುಹಬ್ಬದಂದು ಅಂದರೆ ಏಪ್ರಿಲ್ 24ಕ್ಕೆ ಮುಹೂರ್ತ ನಡೆಸಲಿದೆ. ಒಟ್ಟಾರೆ ಈ ವರ್ಷವಿಡೀ ಪುನೀತ್ ಪಕ್ಕಾ ಶೆಡ್ಯೂಲ್ ಹಾಕಿಕೊಂಡು ನಾಲ್ಕು ಸಿನಿಮಾ ಮುಗಿಸ್ತಾರಂತೆ. ಇನ್ನು ತ್ರಿಷಾ-ಪುನೀತ್ ಜೋಡಿಯನ್ನ ತೆರೆಮೇಲೆ ನೋಡೋಕೆ ಚಿತ್ರಪ್ರೇಮಿಗಳು ಕಾದಿರೋದಂತೂ ಗ್ಯಾರಂಟಿ.

English summary
The song shooting of the Kannada remake of the Telugu hit movie 'Dookudu' progressing at Kanteerava Studio directed by K Madesh starring Puneeth Rajkumar and Trisha Krishnan.
Please Wait while comments are loading...